ADVERTISEMENT

ಉರುಸ್ ನಡೆಸಲು ಯತ್ನಿಸಿದ ಶಾಖಾದ್ರಿ ಬಂಧನ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2011, 7:25 IST
Last Updated 26 ಮಾರ್ಚ್ 2011, 7:25 IST
ಉರುಸ್ ನಡೆಸಲು ಯತ್ನಿಸಿದ ಶಾಖಾದ್ರಿ ಬಂಧನ
ಉರುಸ್ ನಡೆಸಲು ಯತ್ನಿಸಿದ ಶಾಖಾದ್ರಿ ಬಂಧನ   

ಚಿಕ್ಕಮಗಳೂರು: ಜಿಲ್ಲಾಡಳಿತದ ಕ್ರಮ ಉಲ್ಲಂಘಿಸಿ ತಾಲ್ಲೂಕಿನ ಬಾಬಾಬುಡನ್‌ಗಿರಿಯಲ್ಲಿ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾದಲ್ಲಿ ಉರುಸ್ ನಡೆಸಲು ಯತ್ನಿಸಿದ ದರ್ಗಾದ ‘ಸಜ್ಜಾದ ನಶೀನ್’ ಆಗಿರುವ  ಸಯ್ಯದ್ ಗೌಸ್ ಮೊಹಿದ್ದೀನ್ ಶಾಖಾದ್ರಿ ಅವರನ್ನು ಶನಿವಾರ ಮುಂಜಾನೆ ಪೊಲೀಸರು ಚಿಕ್ಕಮಗಳೂರು ನಗರದಲ್ಲಿ ಬಂಧಿಸಿದರು.

ಈ ಸಂದರ್ಭದಲ್ಲಿ ಸ್ಥಳದಲ್ಲಿ ಹಾಜರಿದ್ದ ನೂರಾರು ಫಕೀರರು ಉರುಸ್ ನಡೆಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ಘೋಷಣೆ ಕೂಗಿದರು. ನಗರದ ಬಡಾ ಮಕಾನ್ ಪ್ರದೇಶದಲ್ಲಿ ಉರುಸ್ ಆಚರಣೆಗೆ ಸಂಬಂಧಿಸಿದ ಧಾರ್ಮಿಕ ವಿದಿವಿಧಾನಗಳು ಜರುಗಿದವು.  

ಕಳೆದ ನಾಲ್ಕು ವರ್ಷಗಳಿಂದ ಉರುಸ್ ಆಚರಿಸುತ್ತಿದ್ದ ಹಂಗಾಮಿ ಉರುಸ್ ಸಮಿತಿ ಮತ್ತು ನಗರದ ಮುಸ್ಲಿಮರು ಈ ಬಾರಿ ಶಾಖಾದ್ರಿ ಮತ್ತು ಜಿಲ್ಲಾಡಳಿತದ ನಡುವಿನ ಮುಸುಕಿನ ಗುದ್ದಾಟದಿಂದಾಗಿ ದರ್ಗಾದ ವಾರ್ಷಿಕ ಉರುಸ್‌ನಿಂದ ದೂರ ಉಳಿದಿದ್ದರು. ಈ  ಹಿನ್ನೆಲೆಯಲ್ಲಿ ಕಳೆದ  ಭಾನುವಾರದಂದು ಜಿಲ್ಲಾಡಳಿತವೇ ಮುಂದೆ ನಿಂತು ಉರುಸ್ ನಡೆಸಿತ್ತು. ಆ ಸಂಧರ್ಭದಲ್ಲಿ ಶಾಖಾದ್ರಿ ಶನಿವಾರ (ಮಾ26) ರಂದು ಉರುಸ್ ಆಚರಿಸುವುದಾಗಿ ಘೋಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.