ADVERTISEMENT

ಏಪ್ರಿಲ್ 1 ರಿಂದ ಅಬಾಕಸ್ ತರಗತಿ ಆರಂಭ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 6:33 IST
Last Updated 27 ಮಾರ್ಚ್ 2018, 6:33 IST

ನರಸಿಂಹರಾಜಪುರ: ಪಟ್ಟಣದ ಪತ್ರಿಕಾ ಭವನದಲ್ಲಿ ಒಂದು ವರ್ಷದ ಹಿಂದೆ ಪ್ರಾರಂಭವಾದ ಬ್ರೈನೋಟ್ರಿಕ್ಸ್ ಅಬಾಕಸ್ ನ ನೂತನ ಬ್ಯಾಚ್ ಏಪ್ರಿಲ್ 1ರಿಂದ ಆರಂಭಿಸಲಾಗುತ್ತದೆ ಎಂದು ಬ್ರೈನೋಟ್ರಿಕ್ಸ್ ನ ನಿರ್ದೇಶಕಿ ಎನ್.ಮಮತಾ ತಿಳಿಸಿದ್ದಾರೆ.

ಈ ಕುರಿತು ಸೋಮವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು 'ಅಬಾಕಸ್ ತರಗತಿಯಲ್ಲಿಮಕ್ಕಳು ಸೇರ್ಪಡೆಗೊಂಡರೆ ತರಬೇತಿ ಪೂರ್ಣಗೊಳಿಸಿದಾಗ ಗಣಿತದ ವಿಷಯದಲ್ಲಿ ಕೂಡುವ, ಕಳೆಯುವ, ಭಾಗಿಸುವ, ಗುಣಿಸುವ ಲೆಕ್ಕಗಳನ್ನು ಕ್ಯಾಲುಕಲೇಟರ್ ಅಥವಾ ಕಂಪ್ಯೂಟರ್‌ಗಿಂತ ವೇಗವಾಗಿ ಮಾಡಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದ್ದಾರೆ.

ಅಬಾಕಸ್ ತರಬೇತಿ ಪಡೆಯುವುದರಿಂದ ಮಕ್ಕಳಲ್ಲಿ ಸೃಜನ ಶೀಲತೆ, ಊಹಾತ್ಮ ಕೌಶಲ, ಮನಸ್ಸು ಕೇಂದ್ರೀಕರಣ, ಸ್ಫುಟವಾದ ಜ್ಞಾಪಕ ಶಕ್ತಿ ಅಭಿವೃದ್ಧಿ ಸೇರಿ ಸರ್ವತೋಮುಖ ಜ್ಞಾನಾಭಿವೃದ್ಧಿಯಾಗಲಿದೆ. 6ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಶಾಲೆಗೆ ಅರ್ಹರಾಗಿರುತ್ತಾರೆ. ಪ್ರತಿ ಭಾನುವಾರ ತರಗತಿಗಳು ನಡೆಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9148950131, 9448314131ಗೆ ಸಂಪರ್ಕಿಸಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.