ಕಡೂರು: ಬೇಸಿಗೆಯ ಬಿಸಿಲು ಒಂದೆಡೆ ಏರುತ್ತಿದ್ದರೆ ಇತ್ತ ತರಕಾರಿ ಬೆಲೆಯೂ ದಿನದಿಂದ ದಿನಕ್ಕೆ ಗಗನ ಮುಖಿಯಾ ಗುತ್ತಿರುವುದು ತರಕಾರಿ ಕೊಳ್ಳುವವರಿಗೆ ಬೆವರಿಳಿಸುತ್ತಿದೆ. ಆದರೆ ತರಕಾರಿ ಬೆಳೆದ ರೈತನಿಗೆ ಬೆಲೆ ಏರಿಕೆ ವರದಾನವಾಗಿದೆ.
ಬೇಸಿಗೆಯ ಬೆಳೆಯಾಗಿ ತರಕಾರಿ ಬೆಳೆಯುತ್ತಿದ್ದ ರೈತರು ವಿದ್ಯುತ್ ಅಭಾವದಿಂದ ಬೆಳೆಯಲು ಉತ್ಸಾಹ ತೋರದ ಕಾರಣ ತರಕಾರಿ ಬೆಲೆ ಗಗನಕ್ಕೆ ಏರಿದೆ ಎಂದು ಸೋಮವಾರ ಸಂತೆಯಲ್ಲಿ ತರಕಾರಿ ವ್ಯಾಪಾರಿಗಳು ಅಭಿಪ್ರಾಯಪಟ್ಟರು.
`ತರಕಾರಿನೂ ಕೊಳ್ಳೊಂಗಿಲ್ಲ, ದಿನಸಿನೂ ಕೊಳ್ಳೊಂಗಿಲ್ಲ. ನಮ್ಮಂತ ಬಡುವ್ರ ಏನು ತಿಂದು ಬದುಕ್ಬೇಕು ಸ್ವಾಮಿ~ ಅನ್ನೋದು ವೆಂಕಟೇಶ್ವರ ಬಡಾವಣೆ ನಿವಾಸಿ ಕೂಲಿ ಕೆಲಸ ಮಾಡುವ ಸಾಕಮ್ಮನ ನೋವಿನ ನುಡಿ.
ತಾಲ್ಲೂಕಿನಿಂದ ಪ್ರತಿದಿನ 100 ಟನ್ ತರಕಾರಿ ಬೇರೆ ನಗರಗಳಿಗೆ ಲಾರಿಗಳ ಮೂಲಕ ಸಾಗಿಸಲಾಗುತ್ತಿತು. ಆದರೆ ಈಗ ನೀರಿನ ಸಮಸ್ಯೆಯಿಂದ 30 ಟನ್‌ಗೆ ಇಳಿದಿರುವುದು ಬೆಲೆ ಏರಿಕೆಗೆ ಮತ್ತೊಂದು ಕಾರಣ.
ಸೋಮವಾರ ಸಂತೆಯಲ್ಲಿ ತರಕಾರಿ ಧಾರಣೆ: (ಕೆ.ಜಿ. 1ಕ್ಕೆ ರೂಗಳಲ್ಲಿ) ಬೀನ್ಸ್ 60, ಹೂಕೋಸು 50, ಬೆಂಡೆಕಾಯಿ 45, ಕ್ಯಾರೇಟ್ 40, ಹೀರೇಕಾಯಿ 35, ಬೆಳ್ಳುಳ್ಳಿ 35, ನುಗ್ಗೆಕಾಯಿ 36, ಟೊಮ್ಯಾಟೊ 20, ಹಸಿಮೆಣಸಿನಕಾಯಿ 28, ಬೀಟ್‌ರೂಟ್ 18, ಆಲೂಗೆಡ್ಡೆ 24, ಎಲೆಕೋಸು 25, ನವಿಲುಕೋಸು 35, ಜವಳಿಕಾಯಿ 35, ಬಣ್ಣದ ಸೌತೆಕಾಯಿ 29, ಮೂಲಂಗಿ 16, ಸುವರ್ಣಗೆಡ್ಡೆ 58, ದೊಣ ಮೆಣಸಿನಕಾಯಿ 35, ಲಿಂಬೆಹಣ್ಣು 1 ಕ್ಕೆ 4ರೂ, ಕೊತ್ತುಂಬರಿ ಸೊಪ್ಪು 4 ರೂ (1ಕಟ್ಟಿಗೆ), ತೆಂಗಿನಕಾಯಿ 1ಕ್ಕೆ 8 ರೂಪಾಯಿ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.