ADVERTISEMENT

ಕಾನೂನು ನೆರವಿಗೆ ಲೀಗಲ್ ವಾಲಿಂಟೀರ್ಸ್‌

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 9:05 IST
Last Updated 21 ಫೆಬ್ರುವರಿ 2011, 9:05 IST

ತರೀಕೆರೆ: ತಾಲ್ಲೂಕಿನ ಜನತೆ ಕಾನೂನಿಗೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆಗ ಳಿದ್ದರೂ  ಅದರ ಪರಿಹಾರಕ್ಕಾಗಿ ಹತ್ತಿರ ದಲ್ಲಿಯೇ ಇರುವ ಪ್ಯಾರಾ ಲೀಗಲ್ ವಾಲಿಂಟೇರ್ಸ್‌ಗಳನ್ನ ಸಂಪರ್ಕಿಸಿ, ಪರಿಹಾರ ಪಡೆದುಕೊಳ್ಳಬಹುದು. ಸರ್ಕಾರದ ಯಾವುದೇ ಕಚೇರಿಗೂ ಅರ್ಜಿ ರವಾನೆ, ಸಮಸ್ಯೆಗಳಿಗೆ ಪರಿಹಾರ, ಕಾನೂನಿನ ವ್ಯಾಪ್ತಿಯಲ್ಲಿ ಜನತೆಗೆ ಅವಶ್ಯ ಮಾಹಿತಿ ಗಳನ್ನು ಪಡೆದು ಬಗೆಹರಿಸಿಕೊಳ್ಳಬೇಕೆಂದು ತಾಲ್ಲೂಕು ಸಿವಿಲ್ ನ್ಯಾಯಾಲಯದ ನ್ಯಾಯಮೂರ್ತಿ ಪ್ರಭು.ಎನ್.ಬಡಗೇರಾ ತಿಳಿಸಿದರು.

ಇಲ್ಲಿನ ನ್ಯಾಯಾಲಯದ ಆವರಣದಲ್ಲಿ  ತಾಲ್ಲೂಕು ಕಾನೂನು ಪ್ರಾಧಿಕಾರದ ಅಡಿಯಲ್ಲಿ ಶನಿವಾರ ನಡೆದ ಪ್ಯಾರಾ ಲೀಗಲ್ ವಾಲೆಂಟೇರ್ಸ್‌ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
 ಪ್ಯಾರಾ ಲೀಗಲ್ ವಾಲೆಂಟೇರ್ಸ್‌ಗಳಲ್ಲಿ ತಲಾ 5 ಜನ ವೈದ್ಯರು, ವಕೀಲರು, ಸರ್ಕಾರಿ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಮಾಜ ಸೇವಕರನ್ನೊಳಗೊಂಡ 25 ಸದಸ್ಯರಿದ್ದು, ಪ್ರತಿಯೊಬ್ಬ ಸದಸ್ಯರಿಗೂ ಕಾನೂನಿನ ಅರಿವು ಮೂಡಿಸಲಾಗುವುದು ಎಂದರು.

ಪ್ಯಾರಾ ಲೀಗಲ್ ವಾಲಿಂಟೇರ್ಸ್‌ಗಳಿಗೆ ಪ್ರತಿ ಶನಿವಾರ ಶಿಬಿರ ನಡೆಸಿ, ಅವರಿಗೆ ಕಾನೂನಿನ ವಿಷಯಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಾಗುವುದು. ಇದರಿಂದ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು. ಈ ಸಂದರ್ಭದಲ್ಲಿ ಎಪಿಪಿ ಬಿ.ಎಚ್. ಭಾಸ್ಕರ್, ವಕೀಲರ ಸಂಘದ ಅಧ್ಯಕ್ಷ ಕೆ.ಆರ್.ಲಿಂಗರಾಜು, ವಕೀಲರಾದ ಕೆ.ಗಂಗಾಧರಪ್ಪ ಇದ್ದರು.

ಜಾತ್ರಾ ಮಹೋತ್ಸವ 2 ಕ್ಕೆ
ಬಾಳೆಹೊನ್ನೂರು: ಸಮೀಪದ ಇಟ್ಟಿಗೆ ಸೀಗೋಡಿನ ಆದಿಚುಂಚನಗಿರಿ ಮಠದ ಈಶ್ವರ ಸಪರಿವಾರ ದೇವಸ್ಥಾನದಲ್ಲಿ ಮಾ.2 ರಂದು ಮಹಾಶಿವರಾತ್ರಿ ಹಾಗೂ ಜಾತ್ರಾ ಮಹೋತ್ಸವ ನಡೆಯಲಿದೆ. ಆ ದಿನದಂದು ಏಕದಶವಾರ ರುದ್ರಾ ಭಿಷೇಕ, ಶ್ರೀ ಸತ್ಯನಾರಾಯಣ ಪೂಜೆ, ಶಿವಭಜನಾ, ಜಾಗರಣೆ, ಅಡ್ಡಪಲ್ಲಕ್ಕಿ ಉತ್ಸವ, ದೀಪಾರಾಧನೆ ಹಾಗೂ ವೈವಿಧ್ಯ ಮಯ ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಲಿವೆ.

ಈ ಭಾರಿಯಿಂದ ಜಾತ್ರಾ ಮಹೋತ್ಸ ವವನ್ನು ವೈಭವೋಪೇತವಾಗಿ ನಡೆಸಲು ಶ್ರೀಗಳು ಸೂಚಿಸಿದ್ದು ದೀಪಾರಾಧನೆಗೆ ಹದಿನೈದು ಸಾವಿರ ಹಣತೆ ಹಾಗೂ ಉತ್ಸವಕ್ಕೆ ಪಲ್ಲಕ್ಕಿ ನೀಡುವುದಾಗಿ ತಿಳಿಸಿದ್ದಾರೆ ಎಂದರು. ಮಧ್ಯಾಹ್ನ ಧಾರ್ಮಿಕ ವಿಧಿ, ಶ್ರೀಗುಣನಾಥ ಸ್ವಾಮೀಜಿಗಳ ಆಶೀರ್ವಚನ ಹಾಗೂ ಶೃಂಗೇರಿಯ ಚುಂಚಶೃಂಗ ಕಲಾವಿ ದರಿಂದ ಭಜನೆ, ಸಂಜೆ, ಕೊಪ್ಪದ ನಾದ ಬ್ರಹ್ಮ ತಂಡದಿಂದ  ಭಕ್ತಿ ಸಂಗೀತ ಸಂಗಮ ಸುಗಮ ಸಂಗೀತ, ರಾತ್ರಿ ಶೃಂಗೇರಿ ಹೊನ್ನ ವಳ್ಳಿಯ ವೆಂಕಟೇಶ್ವರ ಯಕ್ಷಗಾನ ಕಲಾ ಸಂಘದಿಂದ ಶಿವ ಪಂಚಾಕ್ಷರಿ ಮಹಿಮೆ ಕಥಾನಕ ಪ್ರದ ರ್ಶನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.