ADVERTISEMENT

ಕೃಷಿಯಲ್ಲಿ ಜೀವಾಮೃತ ಬಳಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2017, 7:27 IST
Last Updated 6 ಜುಲೈ 2017, 7:27 IST
ಆದಿಚುಂಚನಗಿರಿ ಶಾಖಾಮಠದ ಅಡಿಕೆ ತೋಟದಲ್ಲಿ ಮಂಗಳವಾರ ಜೀವಾಮೃತ ಬಳಸಿ ಕಾಳುಮೆಣಸು ಬೆಳೆಸುವ ಬಗ್ಗೆ ನೆಲ್ಯಾಡಿಯ ಕೃಷಿ ತಜ್ಞ ಎಸ್.ದುಗ್ಗಪ್ಪಗೌಡ ಪ್ರಾತ್ಯಕ್ಷಿಕೆ ನೀಡಿದರು.
ಆದಿಚುಂಚನಗಿರಿ ಶಾಖಾಮಠದ ಅಡಿಕೆ ತೋಟದಲ್ಲಿ ಮಂಗಳವಾರ ಜೀವಾಮೃತ ಬಳಸಿ ಕಾಳುಮೆಣಸು ಬೆಳೆಸುವ ಬಗ್ಗೆ ನೆಲ್ಯಾಡಿಯ ಕೃಷಿ ತಜ್ಞ ಎಸ್.ದುಗ್ಗಪ್ಪಗೌಡ ಪ್ರಾತ್ಯಕ್ಷಿಕೆ ನೀಡಿದರು.   

ಶೃಂಗೇರಿ: ಭಾರತದಲ್ಲಿ ವಿಪುಲವಾದ ಪ್ರಾಕೃತಿಕ ಸಂಪತ್ತು ಇದ್ದು, ಕೃಷಿ ಪ್ರಧಾನ ದೇಶವಾಗಿದೆ. ಡಾ.ಸ್ವಾಮಿನಾಥನ್ ಅವರು ಹಸಿರು ಕಾಂತ್ರಿಯ ಮೂಲಕ ರಾಸಾಯನಿಕ ಗೊಬ್ಬರದ ಬಳಕೆಗೆ ಹೆಚ್ಚಿನ ಮಹತ್ವ ನೀಡಿದರು ಎಂದು ಆದಿಚುಂಚನಗಿರಿ ಶಾಖಾಮಠದ ಗುಣ ನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಆದಿಚುಂಚನಗಿರಿ ಶಾಖಾಮಠದ ಸಭಾಂಗಣದಲ್ಲಿ ‘ಕೃಷಿಯಲ್ಲಿ ಜೀವಾಮೃತ ಬಳಕೆ’ ಕುರಿತ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ನೆಲ್ಯಾಡಿಯ ಕೃಷಿತಜ್ಞ ದುಗ್ಗಪ್ಪಗೌಡ ಮಾತನಾಡಿ ‘ಸಹಜ ಕೃಷಿಯ ಪಿತಾಮಹ ಜಪಾನಿನ ಪುಕುವೋಕಾ ಅವರ ಪ್ರೇರಣೆ ಯಿಂದ ಸುಭಾಷ್ ಪಾಳೇಕರ್ ಅವರು ಜೀವಾಮೃತವನ್ನು ಬಳಸಿ ಕೃಷಿಯ ಅಭಿವೃದ್ಧಿಯನ್ನು ರೈತ ಸಮುದಾಯಕ್ಕೆ ನೀಡಿದ್ದಾರೆ.

ಸುಲಭ ದರದಲ್ಲಿ ಮನೆ ಯಲ್ಲಿ ತಯಾರಿಸಬಹುದಾದ ಜೀವಮೃತ ವನ್ನು ಬಳಸಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಆದಾಯವನ್ನು ಕೃಷಿಯಿಂದ ಪಡೆಯ ಬಹುದು’ ಎಂದರು.
ಯುವ ಒಕ್ಕಲಿಗ ವೇದಿಕೆಯ ಮಾಜಿ ಅಧ್ಯಕ್ಷ ಸಂತೋಷ್‌ ಕಾಳ್ಯ, ಪದಾಧಿ ಕಾರಿಗಳಾದ ಶೀರಾಂಕ್, ಮೋಹನ್, ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ.ಎಚ್.ಸಿ.ವೀರಪ್ಪಗೌಡ ಹಾಜರಿದ್ದರು.

ADVERTISEMENT

* * 

ಪ್ರಸ್ತುತ ಭೂಮಿಯ ಉಷ್ಣಾಂಶ ಹೆಚ್ಚುತ್ತಿದ್ದು, ಪ್ರಕೃತಿಯ ನೈಜತೆ ಮರೆಯಾಗುತ್ತಿದೆ. ಆದ್ದರಿಂದ ಕೃಷಿಯಲ್ಲಿ ಸಾವಯವ ಗೊಬ್ಬರಗಳನ್ನು ಬಳಸಬೇಕು.
ಗುಣನಾಥ ಸ್ವಾಮೀಜಿ
ಆದಿಚುಂಚನಗಿರಿ ಶಾಖಾಮಠ ಶೃಂಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.