ADVERTISEMENT

ಕೇರಳ ಮಾದರಿಯಲ್ಲಿ ಒತ್ತುವರಿ ಪರಿಹಾರಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2014, 6:20 IST
Last Updated 8 ಜನವರಿ 2014, 6:20 IST

ಮೂಡಿಗೆರೆ: ತಾಲ್ಲೂಕಿನಲ್ಲಿ ಒತ್ತುವರಿ ಸಮಸ್ಯೆ ತಾಂಡವವಾಡುತ್ತಿದ್ದು, ಹತ್ತಾ ರು ವರ್ಷಗಳಿಂದ ಉಳುಮೆ ಮಾಡಿ ಕೊಂಡು ಬಂದಿರುವ ಕೃಷಿ ಭೂಮಿ ಯನ್ನು ಕಳೆದುಕೊಳ್ಳುತ್ತೇವೆ ಎಂಬ ಭೀತಿ ತಾಲ್ಲೂಕಿನ ರೈತರನ್ನು ಆವರಿಸಿದ್ದು, ಕೇರಳದಲ್ಲಿ ಅನುಸರಿಸಲಾಗಿರುವ ಕೃಷಿ ಭೂಮಿ ಮಾದರಿಯನ್ನು ರಾಜ್ಯದಲ್ಲೂ ಜಾರಿಗೊಳಿಸಿ ರೈತಾಪಿ ವರ್ಗವನ್ನು ಒತ್ತುವರಿ ತೂಗುಕತ್ತಿಯಿಂದ ಪಾರು ಮಾಡಬೇಕು ಎಂದು ಶಾಸಕ ಬಿ.ಬಿ.ನಿಂಗಯ್ಯ ಅರಣ್ಯ ಮತ್ತು ಪರಿಸರ ಖಾತೆ ಸಚಿವ ರಮನಾಥ ರೈ ಅವರಿಗೆ ಮನವಿ ಮಾಡಿದರು.

ತಾಲ್ಲೂಕಿನ ಕಾಡಾನೆ ಹಾವಳಿ ಪ್ರದೇಶ ಗಳಿಗೆ ಭೇಟಿ ನೀಡಲು ಮಂಗಳವಾರ ಮಲಯ ಮಾರುತಕ್ಕೆ ಆಗಮಿಸಿದ್ದ ಅವರನ್ನು ಭೇಟಿ ಮಾಡಿದ ಶಾಸಕರು ಮಾತನಾಡಿ, ತಾಲ್ಲೂಕಿನಲ್ಲಿ ಹಲ ವಾರು ಜ್ವಲಂತ ಸಮಸ್ಯೆಗಳಿದ್ದು, ಅತಿವೃಷ್ಟಿ, ಒತ್ತುವರಿ, ಇನಾಂ ಭೂಮಿ, ಪಾರಂಪರಿಕ ಅರಣ್ಯವಾಸಿಗಳ ಹಕ್ಕುಪತ್ರ ಸಮಸ್ಯೆ, ನಿವೇಶನ ರಹಿತರ ಸಮಸ್ಯೆ ಹೀಗೆ ಹಲವು ಸಮಸ್ಯೆಗಳಿದ್ದು, ಸೂಕ್ತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಆಗಮಿಸಿದ್ದ ಎಲ್ಲಾ ಸ್ಥಳೀಯ ಜನಪ್ರತಿನಿ ಧಿಗಳೊಂದಿಗೆ ಸಚಿವ ರಮಾನಾಥ ರೈ ಮಾತನಾಡಿ, ಕಾಡಾನೆ ಹಾವಳಿ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಸಮಸ್ಯೆ ಪರಿಹಾರಕ್ಕಾಗಿ ಮುಖ್ಯ ಕಾರ್ಯದರ್ಶಿ ಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇಲ್ಲಿನ ಸಮಸ್ಯೆಗಳನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆಗೆ ರಾಜ್ಯದಲ್ಲಿ 1.70 ಲಕ್ಷ ಅರ್ಜಿಗಳು ಬಂದಿದ್ದು, ಶೇ 16 ರಷ್ಟು ಮಾತ್ರ ತಿರ್ಮಾನವಾಗಿದ್ದು, ಉಳಿದ ಶೇ 84 ರಷ್ಟು ಅರ್ಜಿಗಳು ಬಾಕಿ ಉಳಿದಿವೆ. ಆದ್ದರಿಂದ ಪುನಃ ಆರಂಭಿಕವಾಗಿ ಅರ್ಜಿ ಗಳನ್ನು ಆಹ್ವಾನಿಸಿ, ಸೂಕ್ತ ತಪಾಸಣೆ ನಡೆಸಿ, ಅರ್ಹ ಫಲಾನುಭವಿಗಳಿಗೆ ನ್ಯಾಯ ಒದಗಿಸುವ ಕಾರ್ಯವನ್ನು ಸರ್ಕಾರ ಮಾಡಲಿದೆ ಎಂದರು.

ಒತ್ತುವರಿ ಸಮಸ್ಯೆಯ ಸರಳಿಕರಣಕ್ಕೆ ಚಿಂತನೆ: ಕಂದಾಯ ಇಲಾಖೆ ಸರಿಯಾಗಿ ಮಾಹಿತಿ ನೀಡದ ಕಾರಣ,  ರಾಜ್ಯದಾ ದ್ಯಂತ ಒತ್ತವರಿ ಎಂಬುದು ಕಗ್ಗಂಟಾಗಿ ನಿರ್ಮಾಣವಾಗಿದ್ದು, ಒಂದೇ ಸರ್ವೆ ನಂಬರಿನಲ್ಲಿ ಅರಣ್ಯ ಮತ್ತು ಕಂದಾಯ ಭೂಮಿಗಳೆರಡೂ ಲಭ್ಯವಿವೆ.

ಕಂದಾಯ ಭೂಮಿ ಮತ್ತು ಅರಣ್ಯ ಭೂಮಿಯ ವಿಂಗಡಣೆ ಸೂಕ್ತವಾಗಿ ನಡೆಯದಿರುವುದು ಅರಣ್ಯ ಭೂಮಿ ಯನ್ನು ಒತ್ತುವರಿ ಮಾಡಲಾಗಿದೆ ಎಂಬ ಸಮಸ್ಯೆ ಉದ್ಭವಿಸಲು ಕಾರಣ.  ಇದಕ್ಕೆ ಪರಿಹಾರವಾಗಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಲಾಗಿದ್ದರೆ, ಆ ಅರಣ್ಯ ಭೂಮಿಗಿಂತಲೂ ಹೆಚ್ಚಿನ ಪ್ರಮಾಣದ ಖಾಲಿ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಬಿಟ್ಟುಕೊಟ್ಟು, ಅರಣ್ಯ ಭೂಮಿಯನ್ನು ಕಂದಾಯ ಭೂಮಿಗೆ ಪಡೆಯುವ ಚಿಂತನೆ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.