ADVERTISEMENT

ಚಿಕ್ಕಮಗಳೂರು: ದತ್ತಪೀಠ ಆವರಣದ ನಿಷೇಧಿತ ಪ್ರದೇಶದಲ್ಲಿ ಭಗವಧ್ವಜ ನೆಟ್ಟ ಭಕ್ತ; ಕೆಲ ಕಾಲ ಬಿಗುವಿನ ವಾತಾವರಣ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2017, 11:19 IST
Last Updated 3 ಡಿಸೆಂಬರ್ 2017, 11:19 IST
ಚಿಕ್ಕಮಗಳೂರು: ದತ್ತಪೀಠ ಆವರಣದ ನಿಷೇಧಿತ ಪ್ರದೇಶದಲ್ಲಿ ಭಗವಧ್ವಜ ನೆಟ್ಟ ಭಕ್ತ; ಕೆಲ ಕಾಲ ಬಿಗುವಿನ ವಾತಾವರಣ
ಚಿಕ್ಕಮಗಳೂರು: ದತ್ತಪೀಠ ಆವರಣದ ನಿಷೇಧಿತ ಪ್ರದೇಶದಲ್ಲಿ ಭಗವಧ್ವಜ ನೆಟ್ಟ ಭಕ್ತ; ಕೆಲ ಕಾಲ ಬಿಗುವಿನ ವಾತಾವರಣ   

ಚಿಕ್ಕಮಗಳೂರು: ದತ್ತಪೀಠ ಆವರಣದ ಬೇಲಿ ಏರಿ ಜಿಗಿದು ನಿಷೇಧಿತ ಪ್ರದೇಶದಲ್ಲಿ ಭಾನುವಾರ ಭಗವಧ್ವಜ ನೆಟ್ಟ ದತ್ತಭಕ್ತರೊಬ್ಬರನ್ನು ಪೊಲೀಸರು ಹೊರಕ್ಕೆ ಎಳೆದು ತಂದರು.

ಭಗವಧ್ವಜ ನೆಟ್ಟ ದತ್ತಭಕ್ತನನ್ನು ಇತರ ದತ್ತಮಾಲಾಧಾರಿಗಳು ಹೆಗಲಿನಲ್ಲಿ ಕೂರಿಸಿಕೊಂಡು ಸಂಭ್ರಮಿಸಿದರು. ಬೇಲಿ ಬಳಿ ದತ್ತಭಕ್ತರಿಗೂ ಪೋಲಿಸರಿಗೂ ತಳ್ಳಾಟ, ನೂಕಾಟ ನಡೆಯಿತು. ಈ ಸಂದರ್ಭದಲ್ಲಿ ದತ್ತಪೀಠ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಗೋರಿಯ ನಾಮಫಲಕ ಕಿತ್ತುಹಾಕಿದರು
ದತ್ತಪೀಠ ಆವರಣದ ನಿಷೇಧಿತ ಪ್ರದೇಶದ ತಂತಿಬೇಲಿಯನ್ನು ನುಸುಳಿದ ದತ್ತಭಕ್ತರಿಬ್ಬರು ಅಲ್ಲಿದ್ದ ಒಂದು ಗೋರಿಯ ನಾಮಫಲಕವನ್ನು ಉರುಳಿಸಿದರು.

ADVERTISEMENT

ನಿಷೇಧಿತ ಪ್ರದೇಶಕ್ಕೆ ನುಗ್ಗಿದ್ದವರನ್ನು ಹೊರಹಾಕಲು ಪೊಲೀಸರು ಹರಸಾಹಸಪಟ್ಟರು.

ದತ್ತ ಜಯಂತಿ ಬಂದೋಬಸ್ತ್ ಮಾಡಲಾಗಿದ್ದು, ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಅಂಗಡಿಮುಂಗಟ್ಟುಗಳನ್ನು ಮುಚ್ಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.