ADVERTISEMENT

ಚುನಾವಣಾ ಲೆಕ್ಕಾಚಾರ; ಕಟ್ಟುನಿಟ್ಟಿನ ಆದೇಶ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 8:18 IST
Last Updated 10 ಏಪ್ರಿಲ್ 2013, 8:18 IST

ಮೂಡಿಗೆರೆ:  ಕ್ಷೇತ್ರದಾದ್ಯಂತ ಈಗಾಗಲೇ ಚುನಾವಣಾ ವೀಕ್ಷಕ, ತನಿಖಾ ದಳ ಕಾರ್ಯಪ್ರವೃತ್ತರಾಗಿದ್ದು, ಯಾವುದೇ ಪಕ್ಷದ ಕಾರ್ಯಕರ್ತರು, ಯಾವುದೇ ಸ್ಥಳದಲ್ಲಿ ಯಾವುದೇ ಹೆಸರಿನಲ್ಲಿ ಭೋಜನಕೂಟ ಏರ್ಪಡಿಸಿ ದರೂ ವಸ್ತುಗಳನ್ನು ವಶಪಡಿಸಿಕೊಂಡು ನೀತಿಸಂಹಿತೆ ದೂರು ದಾಖಲಿಸ ಲಾಗುವುದು ಎಂದು ಉಪ ವಿಭಾಗಾಧಿಕಾರಿ ಡಾ. ಪ್ರಶಾಂತ್ ತಿಳಿಸಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ವಿಧಾನ ಸಭಾ ಚುನಾ ವಣೆಯ ಅಂಗವಾಗಿ ತಾಲ್ಲೂಕು ಆಡಳಿತವು ಏರ್ಪಡಿಸಿದ್ದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು.

ಚುನಾವಣಾ ಖರ್ಚು ವೆಚ್ಚದ ಬಗ್ಗೆ ಚುನಾವಣಾ ಆಯೋಗ ವಿಶೇಷ ಗಮನ ನೀಡುತ್ತಿದ್ದು, ಪ್ರತಿ ಪಕ್ಷದ ಅಭ್ಯರ್ಥಿಯು ಚುನಾವಣಾ ಚಟುವಟಿಕೆಗಾಗಿ ಬ್ಯಾಂಕ್ ಖಾತೆ ತೆರೆದು ಶಿಸ್ತುಬದ್ಧವಾಗಿ ಹಣಕಾಸಿನ ಲೆಕ್ಕಾಚಾರ ತೋರಿಸಬೇಕು ಎಂದರು. ರಾಜಕೀಯ ಸಮಾವೇಶಗಳಿಗೆ ಅನುಮತಿ ನೀಡಲು ತಾಲ್ಲೂಕಿನ ವಿವಿಧ ಅಧಿಕಾರಿಗಳು ಸತಾಯಿಸುತ್ತಿದ್ದು, ತಕ್ಷಣ ಅನುಮತಿ ನೀಡುವಂತೆ ಬಿಜೆಪಿಯ ಪುರುಷೊತ್ತಮರಾಜ್ ಅರಸ್ ಒತ್ತಾಯಿಸಿದರು.

ಪಟ್ಟಣದ ಕೆ.ಎಂ. ರಸ್ತೆಯ ಕಾಂಕ್ರಿ ಟಿಕರಣದಿಂದಾಗಿ 700 ಮೀ. ಕ್ರಮಿ ಸಲು ಒಂದು ಗಂಟೆಯಷ್ಟು ಕಾಲಾವಧಿ ಬೇಕಾಗುತ್ತಿದ್ದು, ಇದರಿಂದಾಗಿ ಹ್ಯಾಂಡ್ ಪೋಸ್ಟಿನಿಂದ ಹೊರ ಪ್ರದೇಶಗಳಲ್ಲಿ ಚುನಾವಣಾ ಅಕ್ರಮಗಳು ನಡೆದರೆ ಸ್ಥಳಕ್ಕೆ ತೆರಳಲು ಕಷ್ಟ ಸಾಧ್ಯವಾಗುವುದರಿಂದ ತಕ್ಷಣವೇ ಮುಕ್ತ ಸಂಚಾರಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಪಿಐನ ಬಿ.ಕೆ. ಲಕ್ಷ್ಮಣ್ ಒತ್ತಾಯಿಸಿದರು.

ರಸ್ತೆಯ ಎರಡೂ ಬದಿಯಲ್ಲಿರುವ ವಿದ್ಯುತ್ ಮತ್ತು ದೂರವಾಣಿ ಕಂಬಗಳನ್ನು ಸ್ಥಳಾಂತರಿಸಿ, ಎರಡೂ ಬದಿಗಳಲ್ಲಿ ವಿಸ್ತರಿಸುವಂತೆ ಸಭೆಯಲ್ಲಿ ಸೂಚಿಸಲಾಯಿತು. ಎಲ್ಲಾ ಪಕ್ಷಗಳ ಪದಾಧಿಕಾರಿಗಳಿಗೂ ಪ್ರತಿ ಹೋಬಳಿಯಲ್ಲಿ ಕಾರ್ಯ ನಿರ್ವಹಿಸುವ ಚುನಾವಣಾ ವೀಕ್ಷಕರು, ಗಸ್ತುಪಡೆ, ತನಿಖಾ ದಳಗಳ ದೂರವಾಣಿ ಸಂಖ್ಯೆ ಯನ್ನು ಸಭೆಯಲ್ಲಿ ನೀಡಲಾಯಿತು. ಯಾವುದೇ ಪಕ್ಷದ ಮುಖಂಡರು ಚುನಾವಣಾ ಅಕ್ರಮದಲ್ಲಿ ತೊಡಗಿದರೆ, ನೀತಿ ಸಂಹಿತೆ ಉಲ್ಲಂಘನೆಗಳಾದರೇ ತಕ್ಷಣವೇ ದೂರು ನೀಡುವಂತೆ ತಿಳಿಸಲಾಯಿತು.

ಸಭೆಯಲ್ಲಿ ತಹಶೀಲ್ದಾರ್ ರುದ್ರಪ್ಪಾಜಿರಾವ್, ಸಭೆಗೆ ಕಾಂಗ್ರೆಸ್ ಪದಾಧಿಕಾರಿಗಳು ಗೈರುಹಾಜರಾಗಿದ್ದರೆ, ಬಿಜೆಪಿಯ ಪುರುಷೊತ್ತಮ ರಾಜ್ ಅರಸ್, ಜೆಡಿಎಸ್‌ನ ಎಚ್.ಪಿ. ದೇವರಾಜು, ಸಿಪಿಐನ ಬಿ.ಕೆ. ಲಕ್ಷ್ಮಣ್ ಕುಮಾರ್, ಹಳೆ ಮೂಡಿಗೆರೆ ಗ್ರಾಮ ಪಂಚಾಯಿತಿ ಯೋಗೇಶ್, ಯಾಕೂಬ್ ಮುಂತಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.