ADVERTISEMENT

ಜಿಲ್ಲೆಯ ವಿವಿಧೆಡೆ ನಡುಗಿದ ಭೂಮಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 7:55 IST
Last Updated 15 ಅಕ್ಟೋಬರ್ 2012, 7:55 IST

ಮೂಡಿಗೆರೆ: ತಾಲ್ಲೂಕಿನ ಕೆಲವು ಭಾಗದಲ್ಲಿ ಭಾನುವಾರ ಮಧ್ಯಾಹ್ನ ಭೂಮಿ ನಡುಗಿದ್ದು, ನಾಗರಿಕರು ಆತಂಕಗೊಂಡ ಘಟನೆ ಹಾಲೂರು, ಅಬಚೂರು, ಗಾಂಧೀಘರ್ ಗ್ರಾಮಗಳಲ್ಲಿ ಸಂಭವಿಸಿದೆ.

ಅಬಚೂರಿನಲ್ಲಿ ಭಾನುವಾರ ಮಧ್ಯಾಹ್ನ 2.25 ರ ವೇಳೆಯಲ್ಲಿ ಸುಮಾರು 5 ರಿಂದ 6 ಸೆಕೆಂಡ್‌ಗಳ ಕಾಲ ಭೂಮಿ ನಡುಗಿದ್ದು, ಮನೆಯಲ್ಲಿದ್ದ ವಸ್ತುಗಳು ನೆಲಕ್ಕೆ ಬಿದ್ದಿವು. ಅಲ್ಲದೇ ಭೂಮಿಯ ಒಳಗಿನಿಂದ ಶಬ್ದವಾದ ಅನುಭವ ವಾಯಿತು ಎಂದು ಪ್ರತ್ಯಕ್ಷದರ್ಶಿ ಶ್ರಿನಾಥ್ ಪತ್ರಿಕೆಗೆ ತಿಳಿಸಿದರು.

ಹಾಲೂರು ಮತ್ತು ಗಾಂಧೀಘರ್ ಗ್ರಾಮಗಳಲ್ಲೂ ಇದೇ ಸಮಯದಲ್ಲಿ ಭೂಮಿ ನಡುಗಿದಂತಾಯಿತು ಎಂದು ಅನೇಕ ಗ್ರಾಮಸ್ಥರು ಹೇಳಿದ್ದಾರೆ. ಭೂಮಿಯ ಕಂಪನದಿಂದ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಭಾನುವಾರ ಮಧ್ಯಾಹ್ನದಿಂದ ತಾಲ್ಲೂಕಿನಲ್ಲಿ ಗುಡುಗು ಬರುತ್ತಿದ್ದರಿಂದ ಭೂಮಿ ನಡುಗಿರಬಹುದೇ ಎಂದು ಅನೇಕರು ತಿಳಿದಿದ್ದರು.

ದೃಶ್ಯ ಮಾಧ್ಯಮದಲ್ಲಿ ಭೂಕಂಪ ಸಂಭವಿಸಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಜನತೆ ಆತಂಕದಿಂದ ಸಂಬಂಧಿಕರಿಗೆ ದೂರವಾಣಿ ಕರೆ ಮಾಡಿ ವಿಚಾರಣೆ ಮಾಡುತ್ತಿದ್ದದ್ದು ಕಂಡು ಬಂದಿತು. ಕೆಲ ಗ್ರಾಮಗಳಲ್ಲಿ ಸಂಜೆ ಭೂಕಂಪವಾಗುವ ಸಂಭವವಿದೆ ಎಂಬ ಸುದ್ದಿ ಹರಡಿದ್ದರಿಂದ ಕತ್ತಲೆಯವರೆಗೂ ಮನೆಗಳನ್ನು ಬಿಟ್ಟು ಬಯಲಲ್ಲಿ ದಿನ ಕಳೆದ ಘಟನೆಯೂ ನಡೆದಿದೆ.

ಚಿಕ್ಕಮಗಳೂರಲ್ಲೂ ಅನುಭವ: ನಗರದ ನಾರಾಯಣಪುರ, ಕೋಟೆ, ಬಸವನಹಳ್ಳಿ ಭಾಗದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. 3 ರಿಂದ 4 ಸೆಕೆಂಡ್ ಭೂಮಿ ಕಂಪಿಸಿತು ಎಂದು ನಿವಾಸಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.