ADVERTISEMENT

ತರೀಕೆರೆ: ಮಳೆಯಿಂದ ತೀವ್ರ ಹಾನಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 7:14 IST
Last Updated 5 ಏಪ್ರಿಲ್ 2018, 7:14 IST

ತರೀಕೆರೆ: ಪಟ್ಟಣದ ಸುತ್ತಮುತ್ತ ಬುಧ ವಾರ ಸಂಜೆ ಸುರಿದ ಮಳೆಯಿಂದಾಗಿ ಕೆಲವೆಡೆ ಹಾನಿ ಸಂಭವಿಸಿದೆ.ರೈಲ್ವೆ ನಿಲ್ದಾಣದ ಸಮೀಪದಲ್ಲಿ ಮರವೊಂದು ರೈಲ್ವೆ ಹಳಿಗಳ ಮೇಲೆ ಉರುಳಿಬಿದ್ದ ಪರಿಣಾಮ ತಾಳಗೊ ಪ್ಪದಿಂದ ಮೈಸೂರು ಮಾರ್ಗವಾಗಿ ಹೊರಡುವ ರೈಲು ಕೆಲ ಕಾಲ ತಡವಾಗಿ ನಿಲ್ದಾಣಕ್ಕೆ ಬಂದಿತು. ದುಗ್ಲಾಪುರ ಸೇರಿ ದಂತೆ ಪಟ್ಟಣದಲ್ಲಿ ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದು ಕೆಲವು ಕಡೆ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.ಪಟ್ಟಣದ ಬಿ.ಎಚ್.ರಸ್ತೆ ಹಾಗೂ ಇತರೆಡೆ ಮೆಸ್ಕಾಂ ಇಲಾಖೆಯ ಸಿಬ್ಬಂದಿ ವಿದ್ಯುತ್ ಕಂಬಗಳ ಮೇಲೆ ಬೆಳೆದಿದ್ದ ಮರಗಳ ಬಿಳಲನ್ನು ಕತ್ತರಿಸುವ ಕೆಲಸ ನಡೆಸಿ, ಅಪಾಯವನ್ನು ತಡೆಗಟ್ಟುವ ಪ್ರಯತ್ನ ನಡೆಸಿದರು.

ಪಟ್ಟಣದ ಸಮೀಪದಲ್ಲಿರುವ ಕೆರೆ ಹೊಸಳ್ಳಿ ಗ್ರಾಮದಲ್ಲಿ ಕೃಷ್ಣಮೂರ್ತಿ, ಕರಿಯಮ್ಮ, ಲಕ್ಷ್ಮಿಕಾಂತ, ಗೋವಿಂದಪ್ಪ, ಈರಮ್ಮ ಎಂಬುವವರ ಮನೆಗಳ ಮೇಲ್ಛಾವಣಿಗಳು ಗಾಳಿಯ ರಭಸಕ್ಕೆ ಹಾರಿ ಬೇರೋಬ್ಬರ ಮನೆಗಳ ಮೇಲೆ ಬಿದ್ದು ಹಾನಿ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT