ADVERTISEMENT

ತೋಟಗಾರಿಕೆ ಬೆಳೆಗಳಿಗೆ ರಸಗೊಬ್ಬರ ಶಿಫಾರಸು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 9:45 IST
Last Updated 23 ಸೆಪ್ಟೆಂಬರ್ 2013, 9:45 IST

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಅರೆ ಮಲೆನಾಡಿನ ಪ್ರಮುಖ ತೋಟಗಾರಿಕಾ ಬೆಳೆಗಳಾದ ತೆಂಗು, ಅಡಿಕೆ, ಕಾಳು ಮೆಣಸು, ಮಾವು ಹಾಗೂ ಸಪೋಟ ಬೆಳೆಗಳಿಗೆ ಹಿಂಗಾರು ಹಂಗಾಮಿನ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ವೈಜ್ಞಾನಿಕಕವಾಗಿ ಫಸಲು ಬಿಡುವ ಮರದ ಸುತ್ತಲು ಮರದ ಬುಡದ 1.5 ರಿಂದ 2 ಅಡಿ ಅಂತರದಲ್ಲಿ 15 ಸೆಂ.ಮೀ ಆಳ ಪಾತಿ ಮಾಡಿ ಈ ಕೆಳಕಂಡ ನಿಗದಿತ ರಸಗೊಬ್ಬರದ ಪ್ರಮಾಣ ನೀಡಲು ತೋಟಗಾರಿಕೆ ಉಪನಿರ್ದೇಶಕರು ಶಿಫಾರಸು ಮಾಡಿದ್ದಾರೆ. 

ತೆಂಗು ಪ್ರತಿ ಮರಕ್ಕೆ 330 ಗ್ರಾಂ ಸಾರಜನಕ, 200 ಗ್ರಾಂ ರಂಜಕ, 800 ಗ್ರಾಂ ಪೊಟ್ಯಾಷ್ ಶಿಫಾರಸು ಮಾಡಿದೆ. ಹಾಕಬೇಕಾದ ರಸಗೊಬ್ಬರ ಯೂರಿಯ 716 ಗ್ರಾಂ, ಸಿಂಗಲ್ ಸೂಪರ್ ಫಾಸ್ಪೇಟ್ 1250 ಗ್ರಾಂ, ಮ್ಯೂರೇಟ್ ಆಫ್ ಪೊಟ್ಯಾಷ್ 1328 ಗ್ರಾಂ.
ಅಡಿಕೆ ಪ್ರತಿ ಮರಕ್ಕೆ 50 ಗ್ರಾಂ ಸಾರಜನಕ, 20 ಗ್ರಾಂ ರಂಜಕ, 70 ಗ್ರಾಂ ಪೊಟ್ಯಾಷ್ ಶಿಫಾರಸು ಮಾಡಿದ್ದು, ಹಾಕಬೇಕಾದ ರಸಗೊಬ್ಬರ ಯೂರಿಯ 108 ಗ್ರಾಂ, ಸಿಂಗಲ್ ಸೂಪರ್ ಫಾಸ್ಪೇಟ್ 125 ಗ್ರಾಂ, ಮ್ಯೂರೇಟ್ ಆಫ್ ಪೊಟ್ಯಾಷ್ 116 ಗ್ರಾಂ.
ಕಾಳು ಮೆಣಸು ಪ್ರತಿ ಮರಕ್ಕೆ 50 ಗ್ರಾಂ ಸಾರಜನಕ, 20 ಗ್ರಾಂ ರಂಜಕ, 70 ಗ್ರಾಂ ಪೊಟ್ಯಾಷ್ ಶಿಫಾರಸು ಮಾಡಿದ್ದು, ಹಾಕಬೇಕಾದ ರಸಗೊಬ್ಬರ ಯೂರಿಯ 108 ಗ್ರಾಂ, ಸಿಂಗಲ್ ಸೂಪರ್ ಫಾಸ್ಪೇಟ್ 125 ಗ್ರಾಂ, ಮ್ಯೂರೇಟ್ ಆಫ್ ಪೊಟ್ಯಾಷ್ 116 ಗ್ರಾಂ.
ಮಾವು ಪ್ರತಿಮರಕ್ಕೆ 365 ಗ್ರಾಂ ಸಾರಜನಕ, 90 ಗ್ರಾಂ ರಂಜಕ, 340 ಗ್ರಾಂ ಪೊಟ್ಯಾಷ್ ಶಿಫಾರಸು ಮಾಡಿದ್ದು, ಹಾಕಬೇಕಾದ ರಸಗೊಬ್ಬರ ಯೂರಿಯ 792 ಗ್ರಾಂ, ಸಿಂಗಲ್ ಸೂಪರ್ ಫಾಸ್ಪೇಟ್ 560 ಗ್ರಾಂ, ಮ್ಯೂರೇಟ್ ಆಫ್ ಪೊಟ್ಯಾಷ್ 564 ಗ್ರಾಂ,
ಸಪೋಟ ಪ್ರತೀ ಗಿಡಕ್ಕೆ 200 ಗ್ರಾಂ ಸಾರಜನಕ, 80 ಗ್ರಾಂ ರಂಜಕ, 225 ಗ್ರಾಂ ಪೊಟ್ಯಾಷ್ ಶಿಫಾರಸು ಮಾಡಿದ್ದು, ಹಾಕಬೇಕಾದ ರಸಗೊಬ್ಬರ ಯೂರಿಯ 434 ಗ್ರಾಂ, ಸಿಂಗಲ್ ಸೂಪರ್ ಫಾಸ್ಪೇಟ್ 500 ಗ್ರಾಂ, ಮ್ಯೂರೇಟ್ ಆಫ್ ಪೊಟ್ಯಾಷ್ 374 ಗ್ರಾಂ.
ಬೆಳೆಗಳಿಗೆ ಶಿಫಾರಸ್ಸಿನಂತೆ ಮಾರುಕಟ್ಟೆಯಲ್ಲಿ ದೊರೆಯುವ ಇತರೆ ರಾಸಾಯನಿಕ ರಸಗೊಬ್ಬರಗಳನ್ನು ಹೊಂದಿಸಿ ಹಾಕಬಹುದು.
ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ, ಜಿ.ಪಂ, ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ಚಿಕ್ಕಮಗಳೂರು, ದೂರವಾಣಿ 08262-228267 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.