ADVERTISEMENT

ನಿರ್ಮಾಣ ಕಾಮಗಾರಿ ನಿಗದಿತ ವೇಳೆಗೆ ಮುಗಿಯಲಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 5:45 IST
Last Updated 4 ಅಕ್ಟೋಬರ್ 2012, 5:45 IST

ಬೀರೂರು: ಸರ್ಕಾರದ ವಿವಿಧ ಯೋಜನೆಗಳ ನಿರ್ಮಾಣ ಕಾರ್ಯಗಳು ನಿಗದಿತ ವೇಳೆಯಲ್ಲಿ ಪೂರ್ಣಗೊಂಡರೆ ನಿಗದಿಯಾದ ಮೊತ್ತದಲ್ಲೇ ಕೆಲಸ ಮುಗಿಯುತ್ತದೆ ಇಲ್ಲದಿದ್ದಲ್ಲಿ ಹೆಚ್ಚಿನ ವೆಚ್ಚವಾಗುತ್ತದೆ ಎಂದು ಬೀರೂರು ಪುರಸಭೆ ಸದಸ್ಯ ಕೆ.ಎಂ.ವಿನಾಯಕ ಅಭಿಪ್ರಾಯಪಟ್ಟರು.

 ಬೀರೂರು ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಪುರಸಭೆ ವತಿಯಿಂದ ಐಡಿಎಸ್‌ಎಂಟಿ ಯೋಜನೆಯಡಿ ನಿರ್ಮಿಸಿರುವ ನಿರ್ಮಲನಗರ ಶೌಚಾಲಯ ಉದ್ಘಾಟನಾ ಕಾರ್ಯ ಕ್ರಮದಲ್ಲಿ ಬುಧವಾರ ಅವರು ಮಾತನಾಡಿದರು.

ಶೌಚಾಲಯ ಉದ್ಘಾಟಿಸಿದ ಶಾಸಕ ಡಾ.ವಿಶ್ವನಾಥ್ ಮಾತನಾಡಿ,ನಿರ್ಮಲ ವಾತಾವರಣದಿಂದ ನಿರ್ಮಲ ಮನಸ್ಸು ಮತ್ತು ಉತ್ತಮ ಪರಿಸರ ಉಂಟಾಗುತ್ತದೆ. ಶೌಚಾಲಯಗಳು ಮನುಷ್ಯನ ಅತಿ ಅಗತ್ಯವಾಗಿದ್ದು ಹಳ್ಳಿಗಳಲ್ಲಿ ಇರುವ ಬಯಲು ಶೌಚಾಲಯ ವ್ಯವಸ್ಥೆ ತಪ್ಪಿ ಎಲ್ಲೆಡೆ ಉತ್ತಮ ಪರಿಸರ ನಿರ್ಮಾಣವಾಗಲಿ ಎಂದರು. 

 ಪುರಸಭಾಧ್ಯಕ್ಷ ಎಸ್.ರಮೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷೆ ಸಾಕಮ್ಮ, ಮಾಜಿ ಅಧ್ಯಕ್ಷರಾದ ವಿ.ಜಯರಾಂ, ಬಿ.ಸಿ.ಪ್ರಕಾಶ್, ಸದಸ್ಯರಾದ ಲೋಕೇಶಪ್ಪ, ರುದ್ರಪ್ಪ, ದೇವರಾಜ್, ತಿಪ್ಪೇಶ್, ಶಾಂತಮ್ಮ, ಉಪತಹಶೀಲ್ದಾರ್ ತಿಮ್ಮಾಬೋವಿ, ಮಲ್ಲಪ್ಪ, ದಾಸಪ್ಪ ಬಸವರಾಜ್ ಮತ್ತು ಬಿಜೆಪಿ ಮುಖಂಡರಾದ ಮಣಿ, ಪಾಂಡುರಂಗರಾವ್  ಪಾಲ್ಗೊಂಡಿದ್ದರು

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.