ADVERTISEMENT

ಬಣ್ಣದ ಮೀನುಗಾರಿಕೆ ಸ್ವಾವಲಂಬನೆಗೆ ದಾರಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 7:30 IST
Last Updated 7 ಅಕ್ಟೋಬರ್ 2012, 7:30 IST

ಮೂಡಿಗೆರೆ: ರೈತ ಮಹಿಳೆಯರಿಗೆ ಬಿಡುವಿನ ವೇಳೆಯಲ್ಲಿ  ಬಣ್ಣದ ಮೀನುಗಳ ಸಾಕಾಣಿಕೆ ಲಾಭದಾಯಕ ಕೃಷಿಯಾಗಿದ್ದು. ಸ್ವಾವಲಂಬನೆ ಕಲ್ಪಿಸುತ್ತದೆ ಎಂದು ವಲಯ ಕೃಷಿ ಸಂಶೋಧನಾ ಕೇಂದ್ರದ ಮೀನುಗಾರಿಕೆ ವಿಭಾಗದ ಸಹಾಯಕ ಪ್ರಾಧ್ಯಪಕ ಎ.ವಿ. ಸ್ವಾಮಿ ಹೇಳಿದರು.

ಹ್ಯಾಂಡ್ ಪೋಸ್ಟಿನಲ್ಲಿರುವ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಮಂಗಳವಾರ ಪ್ರಾರಂಭವಾದ ಗ್ರಾಮೀಣ ರೈತ ಮಹಿಳೆಯರಿಗೆ ಬಣ್ಣದ ಮೀನುಗಳ ಸಾಕಾಣಿಕೆಯ ಐದು ದಿನಗಳ ತರಬೇತಿ  ಕಾರ್ಯಕ್ರಮದಲ್ಲಿ ರೈತ ಅನುವುಗಾರರಿಗೆ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.

ಮೀನು ಸಾಕಾಣಿಕೆಯನ್ನು ಕೃಷಿಯ ಜೊತೆ- ಜೊತೆ ಯಲ್ಲಿಯೇ ನಿರ್ವಹಿಸ ಬಹುದಾಗಿರುವುದರಿಂದ  ಇದೊಂ ದು ಉಪ ಆರ್ಥಿಕ ಚಟುವಟಿಕೆಯಾಗಿ ಪರಿಣಮಿಸುತ್ತದೆ ಎಂದರು. ಮೀನುಗಾರಿಕೆ ಇಲಾಖೆಯ ಅಧಿಕಾರಿ ಕುಪ್ಪಣ್ಣ ಮಾತನಾಡಿ, ಮೀನು ಸಾಕಾಣಿಕೆಯ ಈ ತರಬೇತಿಯಲ್ಲಿ ಸಾಕಾನಿಕೆಗೆ ಪ್ರತಿ ವಸ್ತುಗಳನ್ನು ಉಚಿತವಾಗಿ ನೀಡಿ ಮೇಲ್ವಿಚಾರಣೆ ನಡೆಸಲಾಗುತ್ತದೆ.

ಈಗಾಗಲೇ `ಬಣ್ಣದ ಮೀನು ಉತ್ಪಾದಕರ ಸಂಘ~ ವನ್ನು ರಚಿಸುವ ಯೋಜನೆಯಿದ್ದು, ಮಾರಾಟ ವ್ಯವಸ್ಥೆ ಕಲ್ಪಿಸಲಾ ಗುವುದು. ಆಸಕ್ತ ರೈತರು ತಮ್ಮ ಬಿಡುವಿನ ವೇಳೆ ಬಂದು ಮಾಹಿತಿ ಪಡೆಯ ಬಹುದು ಎಂದು ತಿಳಿಸಿದರು. ತರಬೇತಿ ಕಾರ್ಯಾಗಾರದಲ್ಲಿ ಸ್ಥಳೀಯ 30 ಕ್ಕೂ ಹೆಚ್ಚು ರೈತ ಅನುವುಗಾರರು ತರಬೇತಿ ಪಡೆದರು.

ತರಬೇತಿಯ ನಂತರ ಕ್ಷೇತ್ರ ವೀಕ್ಷಣೆ ನಡೆಸಿ ರೈತರಿಗೆ ಮಾಹಿತಿ ಒದಗಿಸಲಾಯಿತು. ಕೇಂದ್ರದ ಕಾರ್ಯಕ್ರಮ ಸಂಯೋಜಕಿ ಡಾ. ಸುಕನ್ಯಾ, ಮೀನುಗಾರಿಕೆ ಇಲಾಖೆಯ ಅಧಿಕಾರಿ ಕುಪ್ಪಣ್ಣ ತರಬೇತಿಯ ನೇತೃತ್ವ ವಹಿಸಿದ್ದು, ಮೀನುಗಾರಿಕಾ ವಿಭಾಗದ ಶ್ರಿನಾಥ್, ಹರೀಶ್, ಶಶಿಧರ್, ವನಜಾಕ್ಷಿ, ಕಾಂತರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.