ADVERTISEMENT

ಬೇಗೂರು: ಉಪ ಆರೋಗ್ಯ ಕೇಂದ್ರ ನಿರುಪಯುಕ್ತ

ಗ್ರಾಮ ಪಂಚಾಯಿತಿ ಆವರಣದಲ್ಲಿಯೇ ಶಿಥಿಲ ಕಟ್ಟಡ, ಬಳಕೆಯಾಗದ ಸುಸ್ಥಿರ ಕಟ್ಟಡ

ಜೆ.ಓ.ಉಮೇಶ್‌ಕುಮಾರ್
Published 21 ಫೆಬ್ರುವರಿ 2017, 5:54 IST
Last Updated 21 ಫೆಬ್ರುವರಿ 2017, 5:54 IST
ಬೇಗೂರು ಗ್ರಾಮ ಪಂಚಾಯಿತಿ ಆವರಣದಲ್ಲಿರುವ ಬಿದ್ದುಹೋಗಿರುವ ಕೃಷಿ ಇಲಾಖೆಗೆ ಸೇರಿದ ಕಟ್ಟಡ.
ಬೇಗೂರು ಗ್ರಾಮ ಪಂಚಾಯಿತಿ ಆವರಣದಲ್ಲಿರುವ ಬಿದ್ದುಹೋಗಿರುವ ಕೃಷಿ ಇಲಾಖೆಗೆ ಸೇರಿದ ಕಟ್ಟಡ.   
ಅಜ್ಜಂಪುರ: ಕುಸಿರುವ ಹಂತದಲ್ಲಿ ಬಳಕೆಯಾಗದೇ, ಆಗಲೋ ಈಗಲೋ ಬೀಳಲು ಸಜ್ಜಾಗಿರುವ ಕೃಷಿ ಇಲಾಖೆ ಕಟ್ಟಡ, ಶಿಥಿಲಾವಸ್ಥೆಯಲ್ಲಿರುವ ಗ್ರಂಥಾ ಲಯ, ಸುಸ್ಥಿರ ಕಟ್ಟಡವಿದ್ದರೂ, ಬಳಕೆ ಯಾಗದ ಆರೋಗ್ಯ ಉಪಕೇಂದ್ರ, ಪಂಚಾಯಿತಿ ಕಟ್ಟಡ ಹಿಂಭಾಗವೇ ಅನು ಪಯುಕ್ತ ಗಿಡ-ಗಂಟಿಗಳು, ಕಸದ ತ್ಯಾಜ್ಯ 
–ಇವು ಪಟ್ಟಣ ಸಮೀಪದ ಬೇಗೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಕಂಡು ಬರುವ ದೃಶ್ಯಗಳು.
 
ಗಾರೆ ಕಳಚಿರುವ, ಬಿರುಕು ಬಿಟ್ಟಿರುವ ಗೋಡೆಗಳ ಹೊದ್ದಿರುವ, ಕಿಟಕಿ ಬಾಗಿಲುಗಳೇ ಇಲ್ಲದ, ಆರ್‌ಸಿಸಿ ಮೇಲ್ಚಾವಣೆ ಗಾರೆ ಕುಸಿದಿದ್ದು,  ಕಟ್ಟಡ ಸಂಪೂರ್ಣ ಹಾಳಾಗಿದೆ. ಇದರ ಬಳಕೆಯೂ ಇಲ್ಲ. ಆದರೆ ಕಟ್ಟಡ ಮಾತ್ರ ತೆರವುಗೊಂಡಿಲ್ಲ. 
 
ಕಟ್ಟಡ ತೆರವಿಗೆ ಒತ್ತಾಯ: ಕಟ್ಟಡ ವನ್ನು ತೆರವುಗೊಳಿಸದಿದ್ದರೆ, ಆಟವಾ ಡುವ ಮಕ್ಕಳು ಅಥವಾ ಬರುವ ಬೀಡಾಡಿ ದನಗಳಿಗೆ ಅಪಾಯ ಉಂಟಾ ಗುವ ಸಂಭವವಿದೆ. ಕೂಡಲೇ ಸಂಬಂಧಪಟ್ಟವರು ಕಟ್ಟಡವನ್ನು ತೆರವುಗೊಳಿಸಲು ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
 
ಪಂಚಾಯಿತಿ ಆವರಣದಲ್ಲಿಯೇ ಇರುವ ಗ್ರಂಥಾಲಯದ ಗೋಡೆಗಳು ಹಾಳಾಗಿದ್ದು,  ಹೆಂಚುಗಳು ಒಡೆದಿವೆ. ಬಾಗಿಲು ಟೊಳ್ಳಾಗಿದ್ದು, ಇಡೀ ಕಟ್ಟಡ ಅದೆಷ್ಟೋ ವರ್ಷಗಳಿಂದ ಸುಣ್ಣ-ಬಣ್ಣ ಕಂಡಿಲ್ಲ. ಅಲ್ಲದೇ ಗ್ರಂಥಾಲಯ ಕಟ್ಟಡದ ಮೆಟ್ಟಿಲು ಹಾಗೂ ಸುತ್ತಮುತ್ತ ಅನುಪ ಯುಕ್ತ ಗಿಡ-ಗಂಟಿಗಳು ಬೆಳೆದಿವೆ.
 
ಗ್ರಂಥಾಲಯ ಕಟ್ಟಡಕ್ಕೆ ಬೇಕು ಕಾಯಕಲ್ಪ: ಶಿಥಿಲಾವಸ್ಥೆಯಲ್ಲಿರುವ ಗ್ರಂಥಾಲ ಯಕ್ಕೆ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಬೇಕು. ಅಲ್ಲದೇ ಗ್ರಂಥಾಲಯ ಸುತ್ತಮುತ್ತಲಿನ ತ್ಯಾಜ್ಯವನ್ನು ಸ್ವಚ್ಛಗೊಳಿಸಿ, ಗ್ರಂಥಾಲಯ ಬಳಕೆದಾರರಿಗೆ ಅನುಕೂಲ ಮಾಡಿ ಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
 
ಗ್ರಾಮದ ಪಂಚಾಯಿತಿ ಆವರ ಣದಲ್ಲಿಯೇ ಇರುವ ಆರೋಗ್ಯ ಉಪ ಕೇಂದ್ರದ ಕಟ್ಟಡ ಸುಸ್ಥಿರವಾಗಿದೆ. ಆದರೆ  ಹಲವು ಕಿಟಕಿಗಳ ಗಾಜು ನುಜ್ಜು ಗುಜ್ಜಾಗಿವೆ. ಒಳಗಿನ ಕುರ್ಚಿ, ಟೇಬಲ್, ಮಂಚಗಳು ಹಾಳಾಗಿವೆ. ಇನ್ನು ಕೊಠಡಿಯೊಳಗೆ ಧೂಳು ಆವರಿಸಿದ್ದು, ಜೇಡ ಸೇರಿದಂತೆ ವಿವಿಧ ಹುಳು-ಉಪ್ಪಟೆಗಳ ಆವಾಸ ತಾಣವಾಗಿ ಮಾರ್ಪ ಟ್ಟಿದೆ. ಇನ್ನು ಇದಕ್ಕೆ ಹೊಂದಿ ಕೊಂಡಿ ರುವ ಶುಶ್ರೂಕಿಯರ ವಸತಿ ನಿಲಯ ಬಳಕೆಯಾಗದೇ ಅನಾಥವಾಗಿದೆ.
 
ಆರೋಗ್ಯ ಉಪ ಕೇಂದ್ರದಲ್ಲಿ ಸೇವೆ ಒದಗಿಸಲು ಮನವಿ: ಗ್ರಾಮದ ಮದ್ಯ ಭಾಗದಲ್ಲಿರುವ ಆರೋಗ್ಯ ಉಪಕೇಂದ್ರ ಇದೆ. ಇಲ್ಲಿ ಶುಶ್ರೂಕಿಯರು ಕರ್ತವ್ಯ ನಿರ್ವಹಿಸುವಂತೆ ಸಂಬಂಧಪಟ್ಟವರು ನೋಡಿ ಕೊಳ್ಳ ಬೇಕು. ಇದರಿಂದ ವಯೋವೃದ್ಧ ಹಾಗೂ ಇನ್ನಿತರ ಸಣ್ಣ-ಪುಟ್ಟ ಕಾಯಿಲೆಗಳಿಂದ ನರಳು ವವರಿಗೆ ಅನುಕೂಲ ಆಗುತ್ತದೆ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. 
 
ಕುಸಿದಿರುವ ಕೃಷಿ ಇಲಾಖೆಗೆ ಸಂಬಂಧಿಸಿದ ಕಟ್ಟಡ, ಶಿಥಿಲಾವಸ್ಥೆ ತಲುಪಿದ್ದರೂ, ಪುನಃಶ್ಚೇತನವಾಗದ ಗ್ರಂಥಾಲಯ, ಲಕ್ಷಾಂತರ ವೆಚ್ಚದಲ್ಲಿ ನಿರ್ಮಾಣವಾಗಿ ಸುಸ್ಥಿರವಾಗಿದ್ದರೂ, ಬಳಕೆಯಾಗದೇ ಉಳಿದಿರುವ ಆರೋಗ್ಯ ಉಪಕೇಂದ್ರಗಳು- ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಸದಾ ಕರ್ತವ್ಯ ನಿರ್ವ ಹಿಸುವ ಪಂಚಾಯಿತಿಯ ಆವರಣ ದಲ್ಲಿದ್ದರೂ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ. ಈಗಲಾದರೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಹಾಗೂ ಶಾಸಕರು ಇತ್ತ ಗಮನ ಹರಿಸಿ, ಸಮಸ್ಯೆಗಳನ್ನು ಪರಿಹರಿಸಿ, ಅನುಕೂಲ ಮಾಡಿ ಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.