ADVERTISEMENT

ರಸ್ತೆ ಬದಿಯಲ್ಲಿ ಮುಚ್ಚಿಟ್ಟಿದ್ದ ನಾಟಾ ಪತ್ತೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2013, 12:40 IST
Last Updated 22 ಜೂನ್ 2013, 12:40 IST

ಮೂಡಿಗೆರೆ: ತಾಲ್ಲೂಕಿನ ಅಣಜೂರಿನ ಪ್ಯಾಟೆಹಿತ್ಲು ಗ್ರಾಮಕ್ಕೆ ತೆರಳುವ ರಸ್ತೆ ಬದಿಯಲ್ಲಿ ಹತ್ತಾರು ನಾಟಾ ಸಂಗ್ರಹ ಮಾಡಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿತು. ಅಕ್ರಮ ಮರಳು ಸಂಗ್ರಹ ಪತ್ತೆಗಾಗಿ ತೆರಳಿದ್ದ ಅಧಿಕಾರಿಗಳು, ಅಣಜೂರಿನಲ್ಲಿ ಸಂಗ್ರಹಿಸಿರುವ ಮರಳ ದಾಸ್ತಾನಿನ ಬಳಿಗೆ ತೆರಳುವಾಗ ರಸ್ತೆ ಬದಿಯಲ್ಲಿ ಏನನ್ನೋ ಮುಚ್ಚಿ ಇಟ್ಟಿರುವಂತೆ ಇರುವುದನ್ನು ಕಂಡ ಅಧಿಕಾರಿಗಳು ಅದನ್ನು ಪರಿಶೀಲನೆ ನಡೆಸಿದಾಗ ಪರವಾನಗಿ ಸೀಲು ಇಲ್ಲದ ಮರದ ದಿಮ್ಮಿಗಳ ಸಂಗ್ರಹ ಬೆಳಕಿಗೆ ಬಂದಿತು.

ಸುಮಾರು ಹದಿನೈದು ನಾಟ ಸಂಗ್ರಹವಾಗಿರುವುದನ್ನು ಕಂಡ ಅಧಿಕಾರಿಗಳು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು.
ವಲಯ ಅರಣ್ಯಾಧಿಕಾರಿ ಸುದರ್ಶನ್ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರದ ದಿಮ್ಮಿಗಳನ್ನು ತಮ್ಮ ವಶಕ್ಕೆ ಪಡೆದು ದೂರು ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.