ADVERTISEMENT

ರಾಮ- ರಾವಣ ನಮ್ಮಳಗೆ ಇದ್ದಾರೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2011, 9:20 IST
Last Updated 22 ಜೂನ್ 2011, 9:20 IST

ಶೃಂಗೇರಿ: ರಾಮ- ರಾವಣರು ನಮ್ಮಳಗೆ ಇದ್ದಾರೆ. ಶಿಷ್ಟ ಹಾಗೂ ದುಷ್ಟ ಗುಣಗಳೆರಡೂ ನಮ್ಮಲ್ಲಿ ಅಡಕವಾಗಿದೆ. ಅಧಿಕಾರ ಹಣ ರೂಪದ ವ್ಯಾಮೋಹ ನಮ್ಮನ್ನು ಬಿಟ್ಟಿಲ್ಲ. ನಾವು ಮನುಜರು ಎಂದು ತೀರ್ಥಹಳ್ಳಿ ತುಂಗಾ ಮಹಾ ವಿದ್ಯಾಲಯದ ಉಪನ್ಯಾಸಕ ಡಾ. ಗಣಪತಿ ತಿಳಿಸಿದರು.

ಇಲ್ಲಿನ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಬಿಜಿಎಸ್ ಸಭಾಂಗಣದಲ್ಲಿ ಮಂಗಳವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಕಾನುವಳ್ಳಿ ರಾಮಣ್ಣಗೌಡ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕುವೆಂಪು ರಾಮಯಣದರ್ಶನಂ ಕುರಿತು ಅವರು ಮಾತನಾಡಿದರು.

ಕುವೆಂಪು ಅವರ ರಾಮಯಣದರ್ಶನಂ ಕೃತಿ ವಾಲ್ಮೀಕಿ ರಾಮಯಣಕ್ಕಿಂತಲೂ ಭಿನ್ನವಾಗಿ ಹೊಸದೃಷ್ಟಿಯೊಂದಿಗೆ ನಮಗೆ ದರ್ಶನ ಮೂಡಿಸುತ್ತದೆ ಎಂದರು. 

ADVERTISEMENT

 ಕುವೆಂಪು ರಾಮಯಣ ದರ್ಶನಂ ಮೂರನೇ ತಲೆಮಾರಿಗೂ ಅರ್ಥವಾಗುವ ಕಾವ್ಯವಾಗಿದೆ ಎಂದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬೇಗಾನೆ ಕಾಡಪ್ಪಗೌಡ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ತಹಸೀಲ್ದಾರ್ ಎಂ.ಆರ್. ಜಗದೀಶ್ ಉದ್ಘಾಟಿಸಿದರು. ಬಿಜಿಎಸ್ ಕಾಲೇಜು ಪ್ರಾಂಶುಪಾಲ ಕೆ.ಸಿ. ನಾಗೇಶ್, ಕಸಾಪ ಅಜೀವ ಸದಸ್ಯೆ ಒ.ಕೆ. ಸುಮಿತ್ರಮ್ಮ ಕಸಾಪ ಹೋಬಳಿ ಘಟಕದ ಅಧ್ಯಕ್ಷ ಎಚ್.ಎಸ್. ಸಿದ್ಧಪ್ಪ ತಾ.ಕಸಾಪ ಗೌರವ ಕಾರ್ಯದರ್ಶಿ ವಸಂತಿ ರಾಮಣ್ಣ ಹಾಗೂ ಶ್ರೀ ಕೃಷ್ಣ ಅಹಿತಾನಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.