ADVERTISEMENT

ವಿಶ್ವಕರ್ಮರ ಅವಹೇಳನ ಸಲ್ಲ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 9:45 IST
Last Updated 4 ಅಕ್ಟೋಬರ್ 2011, 9:45 IST

ತರೀಕೆರೆ: ಅಮರಶಿಲ್ಪಿ ಜಕಣಾಚಾರಿಯವರನ್ನು ಕಾಲ್ಪನಿಕ ವ್ಯಕ್ತಿಯೆಂದು ಬಿಂಬಿಸು ಪ್ರಯತ್ನದಿಂದಾಗಿ ವಿಶ್ವಕರ್ಮ ಸಮುದಾಯಕ್ಕೆ ಅವಹೇಳನ ಮತ್ತು ಆಕ್ರಮಣ ಹಾಗೂ ದಮನಕಾರಿ ಪ್ರಯತ್ನ ಮಾಡಲಾಗುತ್ತಿದೆ ಎಂದು ಹಾಸನ ಜಿಲ್ಲೆ ಅರೆಮಾದನಹಳ್ಳಿಯ ವಿಶ್ವಕರ್ಮ ಜಗದ್ಗುರು ಗುರು ಸುಜ್ಞಾನ ಮೂರ್ತಿ ಸ್ವಾಮಿ ವಿಷಾದಿಸಿದರು.

ಇಲ್ಲಿನ ಆಚಾರ್‌ಬೀದಿಯಲ್ಲಿ ಶನಿವಾರ 14ನೇ ವರ್ಷದ ದುರ್ಗಾಷ್ಟಮಿ, ಪ್ರಸಾದ ನಿಲಯದ ಉದ್ಘಾಟನೆ ಮತ್ತು ಸಮುದಾಯ ಭವನದ ಶಂಖುಸ್ಥಾಪನೆ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಆರ್ಶಿವಚನ ನೀಡಿ ಅವರು ಮಾತನಾಡಿದರು.

ಶಾಸಕ ಡಿ.ಎಸ್.ಸುರೇಶ್ ಮಾತನಾಡಿ, ತಾಲ್ಲೂಕಿನ ಲಿಂಗದಹಳ್ಳಿ, ಜಾವೂರು, ಬುಕ್ಕಾಂಬುದಿಯ ವಿಶ್ವಕರ್ಮ ಸಮಾಜದ ಸಮುದಾಯ ಭವನಗಳಿಗೆ ತಲಾ 3 ಲಕ್ಷ ಶಾಸಕರ ಅನುದಾನವನ್ನು ನೀಡಲಾಗಿದೆ ಎಂದರು.  ವಡ್ನಾಳು ಸಂಸ್ಥಾನದ ಕಾಶಿಮಠ ಸಾವಿತ್ರಿ ಪೀಠದ ಶ್ರೀ ಅಭಿನವ ದೇವಣ್ಣಚಾರ್ಯ ಸ್ವಾಮಿ ಸಾನಿಧ್ಯ ವಹಿಸಿದ್ದರು.

 ಜಿಲ್ಲಾ ಪಂಚಾಯಿತಿ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್.ಆನಂದಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಆರ್.ರವಿ, ಪುರಸಭಾಧ್ಯಕ್ಷೆ ಹೇಮಲತಾ, ಸದಸ್ಯ ಆಶೋಕ್, ಗಿರಿಜಮ್ಮ ಮಾಜಿ ಅಧ್ಯಕ್ಷ ಟಿ.ಆರ್.ನಾಗರಾಜ್, ಎನ್.ಮಂಜುನಾಥ್, ತಾಲ್ಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಪರಮ ಶಿವಾಚಾರ್, ಜಿಲ್ಲಾ ಘಟಕದ ಅಧ್ಯಕ್ಷ ರತ್ನಕರಾಚಾರ್, ಎಸಿಫ್ ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.