ಕಡೂರು: ಯಶಸ್ವಿನಿ ಯೋಜನೆ ಯಲ್ಲಿ ನೋಂದಾಯಿಸಿದ್ದರೂ ಖಾಸಗಿ ನರ್ಸಿಂಗ್ ಹೋಂನಲ್ಲಿ ಹೆಚ್ಚಿನ ಹಣ ವಸೂಲಿ ಮಾಡಿದ್ದಾರೆ ಎಂದು ಆರೋ ಪಿಸಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಸಿಂಗಟಗೆರೆ ಹೋಬಳಿಯ ಸೋಮನ ಹಳ್ಳಿಯ ಅನುಸೂಯ ಅವರು ಗರ್ಭ ಕೋಶದ ತೊಂದರೆಯಿಂದ ಚಿಕಿತ್ಸೆಗಾಗಿ 22ರ ಸೋಮವಾರ ಟಿ.ಬಿ.ರಸ್ತೆಯಲ್ಲಿ ರುವ ಬಾಲಾಜಿ ನರ್ಸಿಂಗ್ ಹೋಂನಲ್ಲಿ ದಾಖಲಾಗಿದ್ದರು. ದಾಖಲಾದ ಕೂಡಲೇ ₨2 ಸಾವಿರವನ್ನು ಔಷಧಿ ಮತ್ತು ರಕ್ತ ನೀಡಲು ₨1600 ಪಡೆದುಕೊಂಡಿದ್ದಾರೆ. ನಂತರ ಗರ್ಭಕೋಶದ ಶಸ್ತ್ರ ಚಿಕಿತ್ಸಗೆ ₨10 ಸಾವಿರ ಹಾಗೂ ಇತರೆ ವೆಚ್ಚ ನೀಡಬೇಕೆಂದು ವೈದ್ಯರು ಕೇಳಿದ್ದಾರೆ.
ಅನುಸೂಯ ಅವರು ತಮ್ಮ ಯಶಸ್ವಿನಿ ಯೋಜನೆಯ ಕಾರ್ಡ್ ಇದೆ ಎಂದು ಹೇಳಿ ಶಸ್ತ್ರಚಿಕಿತ್ಸೆ ವೆಚ್ಚ ವಿನಾ ಯಿತಿ ಮಾಡಲು ಕೇಳಿದರೂ ವೈದ್ಯರು ಒಪ್ಪಿಲ್ಲ. ಆಗ ಅನುಸೂಯಮ್ಮ ಅವರ ಪತಿ ತಿರುಮಲಯ್ಯ ಅವರು ಕರವೇ ಕಾರ್ಯ ಕರ್ತರಿಗೆ ಈ ವಿಷಯ ತಿಳಿಸಿದ್ದಾರೆ.
ಬುಧವಾರ ಬೆಳಿಗ್ಗೆ ನರ್ಸಿಂಗ್ ಹೋಂ ಮುಂದೆ ಜಮಾಯಿಸಿದ ಕರವೇ ಕಾರ್ಯ ಕರ್ತರು ವೈದ್ಯರ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು. ಪ್ರತಿಭಟನಾ ಕಾರರ ಬಳಿ ಬಂದ ನರ್ಸಿಂಗ್ ಹೋಂ ವ್ಯವಸ್ಥಾಪಕ ಡಾ.ರಮೇಶ್ ಘಟನೆ ಬಗ್ಗೆ ಪ್ರತಿಕ್ರಿಯಿಸಿ ಸರ್ಕಾರದ ಯಶಸ್ವಿನಿ ಕಾರ್ಡಿನ ಪ್ರಕಾರ ಕೇವಲ ₨12 ಸಾವಿರ ಮೊತ್ತವನ್ನು ಮಾತ್ರ ಶಸ್ತ್ರ ಚಿಕಿತ್ಸೆಗಾಗಿ ವಿನಾಯ್ತಿ ಇರುತ್ತದೆ. ಉಳಿದ ಎಕ್ಸರೇ, ರಕ್ತಪರೀಕ್ಷೆ, ಸ್ಕ್ಯಾನಿಂಗ್ ಮತ್ತಿತರ ಪರೀಕ್ಷೆ ಗಳಿಗೆ ರೋಗಿಗಳು ಶುಲ್ಕವನ್ನು ಭರಿಸ ಬೇಕಾಗುತ್ತದೆ ಎಂದು ಉತ್ತರಿಸಿದರು.
ಇದರಿಂದ ತೃಪ್ತರಾಗದ ಕರವೇ ಕಾರ್ಯಕರ್ತರು ಈ ಬಗ್ಗೆ ಜಿಲ್ಲಾ ವೈದ್ಯಾಧಿ ಕಾರಿಗಳಿಗೆ ಹಾಗೂ ಯಶಸ್ವಿನಿ ಯೋಜ ನೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿ ಕ್ರಮ ಕೈಗೊಳ್ಳಲು ಒತ್ತಾಯಿ ಸುವುದಾಗಿ ತಿಳಿಸಿದರು. ಕ್ರಮ ಕೈಗೊಳ್ಳಲು ತಡ ಮಾಡಿದರೆ ಹೋರಾಟ ತೀವ್ರಗೊಳಿ ಸುವುದಾಗಿ ಎಚ್ಚರಿಸಿದರು.
ಕರವೇ(ಪ್ರವೀಣ್ ಶೆಟ್ಟಿ ಬಣ) ಜಿಲ್ಲಾ ಧ್ಯಕ್ಷ ವಿಶ್ವನಾಥ್ ಕಾಶಿ, ತಾಲ್ಲೂಕು ಅಧ್ಯಕ್ಷ ವಿಜಯಕುಮಾರ್, ತರೀಕೆರೆ ದಿನೇಶ್, ಪ್ಯಾಟ್ರಿಕ್ ಆನಂದ್, ಜಾನ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.