ADVERTISEMENT

ಸುಪ್ರೀಂನಿಂದ ವರದಿ ಅನುಮೋದನೆಗೆ ಸ್ವಾಗತ: ಕೆ.ಎಲ್‌. ಅಶೋಕ್‌

ಶ್ರೀಗುರು ದತ್ತಾತ್ರೇಯ ಬಾಬಾಬುಡುನ್‌ ಸ್ವಾಮಿ ದರ್ಗಾ ವಿವಾದ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2018, 7:33 IST
Last Updated 7 ಏಪ್ರಿಲ್ 2018, 7:33 IST

ಚಿಕ್ಕಮಗಳೂರು: ‘ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ದಾಸ್‌ ನೇತೃತ್ವದ ಸಮಿತಿ ಸಲ್ಲಿಸಿದ್ದ ವರದಿಯನ್ನು ಸುಪ್ರೀಂ ಕೋರ್ಟ್‌ ಅನುಮೋದಿಸಿರುವುದು ಕರ್ನಾಟಕದ ಜಾತ್ಯತೀತ ಪರಂಪರೆಗೆ ಸಂದ ಜಯ’ ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ಎಲ್‌.ಅಶೋಕ್‌ ಹೇಳಿದರು.

‘ಬಾಬಾಬುಡನ್‌ಗಿರಿಯು ಬಹು ಸಂಸ್ಕೃತಿಯ ವೈವಿಧ್ಯದ ರೂಪಕ. ಆ ವೈವಿಧ್ಯ ಉಳಿಯಲೇಬೇಕು ಎಂದು ಹೋರಾಟ ಮಾಡಿದ್ದೆವು. 15 ವರ್ಷಗಳ ಹೋರಾಟ ಈಗ ತಾರ್ಕಿಕ ಅಂತ್ಯ ಕಂಡಿದೆ. ಅವೈದಿಕ ಪಂಥಗಳ (ನಾಥ, ದತ್ತ, ಸೂಫಿ ಪಂಥ) ಆಚರಣೆಗಳು ಅಲ್ಲಿ ಮುಂದುವರಿಯಬೇಕು ಎಂಬುದು ಐತಿಹಾಸಿಕ ಹೆಜ್ಜೆ’ ಎಂದು ಅವರು ಶುಕ್ರವಾರ ‘ಪ್ರಜಾವಾಣಿ’ಗೆ ತಿಳಿಸಿದರು.ಸೌಹಾರ್ದ ಪರಂಪರೆಗೆ ಸಂದ ಗೆಲುವು: ವರದಿಯನ್ನು ಒಪ್ಪಿಕೊಂಡಿರುವುದು ಸೌಹಾರ್ದ ಪರಂಪರೆಗೆ ಸಂದ ಗೆಲುವು ಎಂದು ಸಿಪಿಐ ಮುಖಂಡ ಬಿ.ಅಮ್ಜದ್‌ ಹೇಳಿದರು.

ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾವು ಹಿಂದೂ ಮತ್ತು ಮುಸ್ಲಿಮರು ಶ್ರದ್ಧಾಭಕ್ತಿಯಿಂದ ನಡೆದುಕೊಳ್ಳುವ ಭಾವೈಕ್ಯ ಕೇಂದ್ರ. ಸುಪ್ರೀಂಕೋರ್ಟ್‌ ನಡೆಯು ಸಂತಸ ತಂದಿದೆ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.