ADVERTISEMENT

ಸೋಲು, ಗೆಲುವಿನ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳು

ವಿಧಾನಸಭಾ ಚುನಾವಣಾ ಫಲಿತಾಂಶ

ಕೆ.ವಿ.ನಾಗರಾಜ್
Published 17 ಮೇ 2018, 8:45 IST
Last Updated 17 ಮೇ 2018, 8:45 IST

ನರಸಿಂಹರಾಜಪುರ: ಚುನಾವಣಾ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಗೆದ್ದ ಅಭ್ಯರ್ಥಿಯ ಪಕ್ಷದವರು ಗೆಲುವಿಗೆ ಕಾರಣ, ಪರಾಜಿತ ಅಭ್ಯರ್ಥಿಯ ಪಕ್ಷದ ಕಾರ್ಯಕರ್ತರು ಸೋಲಿನ ವಿಮರ್ಶೆಯಲ್ಲಿ ತೊಡಗಿದ್ದಾರೆ.

1999ರ ಚುನಾವಣೆಯಲ್ಲಿ ಡಿ.ಬಿ.ಚಂದ್ರೇಗೌಡರ ಗೆಲುವಿನ ನಂತರ ಕ್ಷೇತ್ರದಲ್ಲಿ ಗೆಲುವಿಗಾಗಿ ಕಾಂಗ್ರೆಸ್‌ ಹಪಹಪಿಸುತ್ತಿತ್ತು. ಕಳೆದ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಸಹ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಚುನಾವಣೆಯಲ್ಲಿ ಸೋತರೂ ಕೂಡ ಕ್ಷೇತ್ರದ ಜನರ ನಡುವೆ ನಿರಂತರ ಸಂಪರ್ಕದಲ್ಲಿದ್ದ ಟಿ.ಡಿ.ರಾಜೇ
ಗೌಡ ಅವರು ಕ್ರೀಡೆ, ಸಾಂಸ್ಕೃತಿಕ, ಧಾರ್ಮಿಕ ಚಟುವಟಿಕೆಗಳಿಗೆ ಉದಾರ ನೆರವು ನೀಡುತ್ತಾ, ಸಾಮಾನ್ಯರ ಕಷ್ಟ ಸುಖಗಳಿಗೆ ಸ್ಪಂದಿಸಿದ್ದು ಅವರ ಜನಪ್ರಿಯತೆ ಹೆಚ್ಚಿಸಿತು. ಇದು ಅವರ ಗೆಲುವಿಗೆ ಕಾರಣವಾಯಿತು ಎಂಬುದು ಮುಖಂಡರ ಅಭಿಪ್ರಾಯವಾಗಿದೆ.

ಮೂರು ಚುನಾವಣೆಗಳಲ್ಲಿ ಗೆದ್ದು ಬೀಗಿದ್ದ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ ಅವರಿಗೆ ನಾಲ್ಕನೇ ಚುನಾ
ವಣೆಯಲ್ಲಿ ಮತದಾರರು ಸೋಲಿನ ರುಚಿ ತೋರಿಸಿದ್ದಾರೆ. 2004ರವರೆಗೂ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜನತಾ ಪರಿವಾರದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾ ಬಂದಿದ್ದರು. ನಂತರದ ಅವಧಿಯಲ್ಲಿ ಜಿಲ್ಲೆಯಲ್ಲಿ ಶ್ರೀಗುರುದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಪೀಠ ವಿಷಯವನ್ನು ಮುಂದಿಟ್ಟುಕೊಂಡು ಹಿಂದೂ ಸಂಘಟನೆಗಳು ಹೋರಾಟ ಆರಂಭಿಸಿದವು. ಇದರ ಲಾಭ ಪಡೆದುಕೊಂಡ ಬಿಜೆಪಿ ಹಿಂದುತ್ವದ ಆಧಾರದಲ್ಲಿ ಚುನಾವಣೆಯನ್ನು ಎದುರಿಸಿ 2004
ರಲ್ಲಿ ಮೊದಲಬಾರಿಗೆ ಶಾಸಕರಾಗಿ ಜೀವರಾಜ್ ಆಯ್ಕೆಯಾದರು. ನಂತರ 2008ರ ಚುನಾವಣೆಯಲ್ಲಿ ಕೂಡ ಹಿಂದುತ್ವದ ಆಧಾರದ ಮೇಲೆ ಗೆದ್ದು ಬಂದರು.  2013ರ ಚುನಾವಣೆಯಲ್ಲಿ ಅಭಿವೃದ್ಧಿ ವಿಚಾರ ಮುಂದಿಟ್ಟುಕೊಂಡು ಚುನಾವಣೆ ಎದುರಿಸಿ ಗೆದ್ದರು.

ADVERTISEMENT

ಶಾಸಕರಾದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದರು. ಆದರೆ, ಎರಡನೇ ಬಾರಿ ಚುನಾವಣೆ ಗೆದ್ದ ನಂತರ ಪಕ್ಷಕ್ಕಾಗಿ ದುಡಿದಿದ್ದ ಮೂಲ ಕಾರ್ಯಕರ್ತರನ್ನು ಕಡೆಗಣಿಸುತ್ತಾ ಬಂದರು. ಜತೆಗೆ ಹೊಸ ಅಭ್ಯರ್ಥಿಯನ್ನು ಈ ಬಾರಿ ಪಕ್ಷ ಚುನಾವಣೆಯಲ್ಲಿ ಪರಿಗಣಿಸದಿರುವುದು ಪಕ್ಷ ಕ್ಷೇತ್ರದಲ್ಲಿ ಸೋಲಲು ಪ್ರಮುಖ ಕಾರಣವಾಗಿದೆ ಎಂದು ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿ ತಿಳಿಸಿದರು.

ಜೆಡಿಎಸ್‌ ಎಚ್.ಜಿ.ವೆಂಕಟೇಶ್ ಅವರನ್ನು ಕಣಕ್ಕಿಳಿಸಿದ್ದು ಕಳೆದ ಚುನಾವಣೆಗಳಿಗಿಂತಲೂ ಈ ಬಾರಿ ಸಾಕಷ್ಟು ಸ್ಪರ್ಧೆ ನೀಡಿ ಹೆಚ್ಚು ಮತ ಪಡೆಯಬಹುದೆಂದು ಭಾವಿಸಲಾಗಿತ್ತು. ಆದರೆ, ಕೂನೆ ಕ್ಷಣದಲ್ಲಿ ಪಕ್ಷ ಕಾರ್ಯಚಟುವಟಿಕೆಯನ್ನು ಸ್ಥಗಿತಗೊಳಿಸಿದ್ದು ಅಭ್ಯರ್ಥಿ ಹೆಚ್ಚು ಮತ ಪಡೆಯಲು ಸಾಧ್ಯವಾಗಲಿಲ್ಲ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿ ಕೇಳಿ ಬರುತ್ತಿದೆ.

ಚುನಾವಣಾ ಫಲಿತಾಂಶದ ಮೇಲೆ ಪಕ್ಷೇತರ ಅಭ್ಯರ್ಥಿಗಳು ತೆಗೆದುಕೊಂಡಿರುವ ಮತಗಳು ಸಹ ಒಬ್ಬ ಅಭ್ಯರ್ಥಿ
ಯ ಗೆಲುವಿಗೆ ಸಹಕಾರಿಯಾಗದಿದ್ದರೂ ಸೋಲಿಗೆ ಕಾರಣವಾಗಿವೆ. ಪ್ರಮುಖವಾಗಿ ಕ್ಷೇತ್ರದಲ್ಲಿ ಹಿಂದೆಂದಿಗಿಂತಲೂ ನೋಟಾ ಮತಗಳು ( 1,015) ಚಲಾವಣೆಯಾಗಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.