ಚಿಕ್ಕಮಗಳೂರು: `ಹಣ, ಹೆಂಡ, ತೋಳ್ಬಲ ನಡೆಯುವುದಿಲ್ಲ. ಪ್ರಾಮಾಣಿಕ ವ್ಯಕ್ತಿಗೆ ಮಾತ್ರ ಮನ್ನಣೆ ಎನ್ನುವುದನ್ನು ಈ ಚುನಾವಣೆಯಲ್ಲಿ ಮತದಾರರು ಸಾಬೀತು ಮಾಡಲಿದ್ದಾರೆ~ ಎಂದು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಂ.ಎಲ್.ಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಮಿಷಗಳನ್ನು ಮೆಟ್ಟಿ ನಿಲ್ಲುವ ಪ್ರದರ್ಶನ ಭಾನುವಾರ ಮತದಾನದ ವೇಳೆ ನಡೆಯಲಿದೆ. ನಾಡಿನ ಜನತೆಗೆ ವಂಚನೆ ಮಾಡಿರುವ ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳಿಗೆ ಮತದಾರರು ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಮೌಲ್ಯಾಧಾರಿತ ರಾಜಕಾರಣಿಗಳಿಗೆ ಅರ್ಧಚಂದ್ರ ತೋರಿಸಿರುವ ಸಂಸ್ಕೃತಿ ಜೆಡಿಎಸ್ ಪಕ್ಷದ್ದು. ಈಗ ಧರ್ಮೇಗೌಡ ಮತ್ತು ಭೋಜೇಗೌಡರನ್ನು ಹರಕೆ ಕುರಿ ಮಾಡಲು ದೇವೇಗೌಡರು ಹೊರಟಿದ್ದಾರೆ. ಕಾಂಗ್ರೆಸ್‌ಗೆ ಹಿನ್ನಡೆ ಮಾಡಲು ಅಭ್ಯರ್ಥಿ ಹಾಕಿದ್ದಾರೆ. ಈಗ ಅದೇ ಅವರಿಗೆ ತಿರುಗು ಬಾಣವಾಗಲಿದೆ.
ಇನ್ನೂ ಸಾಲು ಸಾಲು ಹಗರಣಗಳಲ್ಲಿ ಬಿಜೆಪಿ ಮುಳುಗಿ ಹೋಗಿದೆ. ಬಿಜೆಪಿಯದು ಗೆಲ್ಲುವವರೆಗೆ ಪ್ರಣಾಳಿಕೆ. ಗೆದ್ದ ನಂತರ ಸ್ವಾರ್ಥ ಪ್ರಣಾಳಿಕೆ ಜಾರಿಗೆ ತರುತ್ತದೆ. ಸ್ವಜನಪಕ್ಷಪಾತ, ಅಧಿಕಾರ ದುರುಪ ಯೋಗ, ಏನನ್ನು ಮಾಡದೆ, ಎಲ್ಲ ವನ್ನೂ ಮಾಡಿರುವುದಾಗಿ ಬಿಂಬಿಸಿ ಕೊಳ್ಳುವ ಬಿಜೆಪಿಯನ್ನು ಮತದಾರರು ತಿರಸ್ಕರಿಸುತ್ತಾರೆ ಎಂದರು.
ಶಾಸಕ ಸಿ.ಟಿ.ರವಿ ವ್ಯಾಖ್ಯಾನಿ ಸಿರುವಂತೆ ಬಿಪಿಎಲ್ ಸುನೀಲ್ ಕುಮಾರ್ ಇಂದು ಎಪಿಎಲ್ ಪಟ್ಟಿಗೆ ಹೇಗೆ ಬಂದಿದ್ದಾರೆ ಎನ್ನುವುದು ಮತದಾರರಿಗೆ ಗೊತ್ತಿದೆ. ಅಭ್ಯ ರ್ಥಿಯೇ ಘೋಷಿಸಿಕೊಂಡಿರು ವಂತೆ ಅವರ ಆಸ್ತಿ ಮೊತ್ತ 5 ಕೋಟಿ ಮೀರುತ್ತದೆ. ಬಿಜೆಪಿ ಅಭ್ಯರ್ಥಿ ಪ್ರಚಾ ರಕ್ಕೆ ಹೋಗಿರುವ ಅನೇಕ ಕಡೆ ಅವರದೇ ಪಕ್ಷದ ಕಾರ್ಯಕರ್ತರು ಛೀಮಾರಿ ಹಾಕಿ ಕಳುಹಿಸಿದ್ದಾರೆ.
ಮುಖ್ಯಮಂತ್ರಿ ಸದಾನಂದಗೌಡಿಗೂ ಈ ಚುನಾವಣೆ ಬಿಜೆಪಿಗೆ ಕಷ್ಟ ಎನ್ನುವುದು ಹಲವು ಕಡೆ ಅನುಭವಕ್ಕೆ ಬಂದಿದೆ. ನಮ್ಮ ಪಕ್ಷದ ಅಭ್ಯರ್ಥಿಯ ವೈಯಕ್ತಿಕ ವರ್ಚಸ್ಸು ಮತ್ತು ಪಕ್ಷಕ್ಕೆ ಎಲ್ಲೆಡೆ ಸಿಗುತ್ತಿರುವ ಬೆಂಬಲ ಕಾಂಗ್ರೆಸ್ ಗೆಲುವನ್ನು ಖಾತ್ರಿ ಪಡಿಸಿದೆ ಎಂದು ಹೇಳಿದರು.ಪಕ್ಷದ ಮುಖಂಡರಾದ ಸೋಮ ಶೇಖರ್, ಎ.ಎನ್.ಮಹೇಶ್ ಇನ್ನಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.