ADVERTISEMENT

‘ಬಂಜಾರ ಸಮುದಾಯ ಭವನಕ್ಕೆ 10ಲಕ್ಷ’

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 6:34 IST
Last Updated 4 ಮಾರ್ಚ್ 2014, 6:34 IST

ತರೀಕೆರೆ: ಬಂಜಾರ ಜನಾಂಗ ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಹೊಂದಿದ್ದು, ಜನಾಂಗದ ಮಹಿಳೆಯರು ಧರಿಸುವ ಉಡುಪುಗಳು ಅವರ ಸಂಸ್ಕೃತಿಯ ಪ್ರತಿಬಿಂಬ  ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ತಿಳಿಸಿದರು.

ಪಟ್ಟಣದಲ್ಲಿ ಸೋಮವಾರ ನಡೆದ ಸಂತ ಶ್ರೀ ಸೇವಾಲಾಲ್ ಮಹಾರಾಜರ 275 ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
ಅತ್ಯಂತ ಶ್ರಮ ಕಾಯಕದ ಮೂಲಕ ರಾಜ್ಯದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿರುವ ಈ ಸಮುದಾಯದ ಪ್ರಗತಿಗೆ  ಸರ್ಕಾರ ನಿಗಮದ ಮೂಲಕ ಕೋಟ್ಯಂತರ ರೂಪಾಯಿಗಳ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಂಡಿದ್ದು,  ಸಮಾಜದ ಮುಖಂಡರನ್ನು ವಿವಿಧ ಹುದ್ದೆಗಳಿಗೆ ನಾಮ ನಿರ್ದೇಶನ ಮಾಡಲಾಗಿದೆ  ಎಂದರು.

ತಾಲ್ಲೂಕಿನ 46 ತಾಂಡಗಳಲ್ಲಿ ₨ 20 ಕೋಟಿ  ವೆಚ್ಚದಲ್ಲಿ ಮೂಲ ಸೌಕರ್ಯ ಕಲ್ಪಿಸಿದ್ದು, ಬಂಜಾರ ಸಮುದಾಯ ಭವನಕ್ಕೆ ಅಗತ್ಯ ಇರುವ ನಿವೇಶನ ನೀಡಲು ಎಲ್ಲಾ ರೀತಿಯ ಕ್ರಮ ಕೈಗೊಂಡು ಭವನ ₨10 ಲಕ್ಷವನ್ನು ಸಹ ನೀಡಲಾಗುವುದು ಎಂದರು. ಸೇವಾಲಾಲ್ ಜಯಂತಿಯನ್ನು ಸರ್ಕಾ ರದ ವತಿಯಿಂದ  ಪ್ರತಿ ವರ್ಷ ನಡೆ ಸುವ ಕುರಿತು ಮುಖ್ಯಮಂತ್ರಿಗಳು ಮತ್ತು ಸಂಬಂಧಪಟ್ಟ ಸಚಿವರ ಜೊತೆ ಮಾತುಕತೆ ನಡೆಸಲಾಗುವುದು ಎಂದರು.

ಶಿಕ್ಷಕ ಗಣೇಶ್ ಮಾತನಾಡಿ ಸಂಘಟನೆ ಸ್ವಾಭಿಮಾನದ ಸಂಕೇತ, ಬಲವಾದ ಸಂಘಟನೆ ಇಲ್ಲದೆ ಏನನ್ನು ಸಾಧಿಸಲು ಸಾಧ್ಯವಿಲ್ಲ. ಸೌಲಭ್ಯ ಪಡೆದು ಮೇಲಕ್ಕೇರಿದ ನಂತರ ಕೆಳ ಹಂತ ದಲ್ಲಿರುವ ಜನಾಂಗದವರ ಕೈ ಹಿಡಿಯ ಬೇಕಾದುದು ಪ್ರತಿಯೊಬ್ಬರ ಕರ್ತವ್ಯ. ಜನ ಜಾಗೃತಿ ಮೂಡಿಸುವ ಮೂಲಕ ಸಂಘಟನೆಯನ್ನು ಬಲ ಪಡಿ ಸುವಲ್ಲಿ ಎಲ್ಲರೂ ಶ್ರಮಿಸ ಬೇಕಾಗಿದೆ. ಸ್ವಾರ್ಥ ಕೈಬಿಟ್ಟು ಜನಾಂಗದ ಅಭಿವೃದ್ಧಿಗೆ ಗಮನಹರಿಸುವಂತೆ ಕರೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಮಾಲಿನಿ ಬಾಯಿ ಮಾತನಾಡಿ, ನಮ್ಮ ಸಂಸ್ಕೃತಿಯ ಪ್ರತೀಕವಾದ ಲಂಬಾಣಿ ಉಡುಪನ್ನು ಧರಿಸುವುದು ನಮ್ಮ ಹೆಮ್ಮೆಯಾಗಬೇಕೆ ವಿನಃ ನಾಚಿಕೆ ಪಡುವಂತಾಗಬಾರದು ಎಂದರು. ಅಧ್ಯಕ್ಷತೆಯನ್ನು ಬಂಜಾರ ಬಳಗದ ಅಧ್ಯಕ್ಷ ಯೋಗೇಂದ್ರ ಕುಮಾರನಾಯ್ಕ ವಹಿಸಿದ್ದರು.

ಭಾರತ ಬಂಜಾರ ಸೇವಾಲಾಲ್ ಸೇನೆಯ ಅಧ್ಯಕ್ಷ ಎಚ್.ಶಿವಶಂಕರ ನಾಯ್ಕ ಸೇವಾಲಾಲ್  ಮಹಾರಾಜರ ಭಾವಚಿತ್ರ ಅನಾವರಣಗೊಳಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಪಿ. ಕುಮಾರ್, ಹೇಮಾವತಿ,  ಮಾಲಿನೀ ಬಾಯಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಧ್ರುವಕುಮಾರ್,  ಮುಖಂಡ ರಾದ ಕೃಷ್ಣನಾಯ್ಕ, ರಾಮಾನಾಯ್ಕ, ಲೋಕ್ಯಾನಾಯ್ಕ, ಎಚ್.ರಾಮಪ್ಪ, ಎಚ್.ಶಿವಶಂಕರನಾಯ್ಕ, ಭೀಮಾ ನಾಯ್ಕ, ಜಯನಾಯ್ಕ, ಎಚ್. ಎಲ್. ಮಂಜುನಾಥ, ಹಾಲಾನಾಯ್ಕ, ಗೋವಿಂದ ನಾಯ್ಕ, ಚಂದ್ರಾನಾಯ್ಕ, ಸೋಬ್ಯಾನಾಯ್ಕ, ಬಿ.ಶೇಖರ ನಾಯ್ಕ, ಡಾ. ಪ್ರವೀಣ್, ಟಿ.ಶೇಖರಪ್ಪ, ಡಾ. ಅನಂತ್‌ನಾಗ್, ಸೇವಾನಾಯ್ಕ, ಕೆ. ಶಿವಮೂರ್ತಿ, ಬಿ. ಮಂಜುನಾಥ ಇನ್ನಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.