ADVERTISEMENT

110 ಕಿ.ಮೀ ವಿಭಾಗ: ಪೌಲ್ ಗಿಬ್ಲಿನ್‌ ಪ್ರಥಮ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2017, 5:56 IST
Last Updated 9 ಅಕ್ಟೋಬರ್ 2017, 5:56 IST
110 ಕಿ.ಮೀ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ಪೌಲ್‌ ಗಿಬ್ಲಿನ್‌
110 ಕಿ.ಮೀ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ಪೌಲ್‌ ಗಿಬ್ಲಿನ್‌   

ಚಿಕ್ಕಮಗಳೂರು: ಜಿಲ್ಲೆಯ ಲಾಲ್‌ಬಾಗ್‌ ಎಸ್ಟೇಟ್‌ನಲ್ಲಿ ಎರಡು ದಿನ ನಡೆದ ಕಾಫಿ ಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್ ಓಟ ಸ್ಪರ್ಧೆಯ 110 ಕಿ.ಮೀ ವಿಭಾಗದಲ್ಲಿ ಸ್ಕಾಟ್ಲೆಂಡ್‌ನ ಪೌಲ್ ಗಿಬ್ಲಿನ್‌ 12 ಗಂಟೆ 48 ನಿಮಿಷದಲ್ಲಿ ಕ್ರಮಿಸಿ ಪ್ರಥಮ ಸ್ಥಾನ ಗಳಿಸಿದರು. ಕಳೆದ ವರ್ಷ ಬೆಂಗಳೂರಿನ ಆತ್ರೇಯ ಚಿದಂಬಿ ಅವರು 13 ಗಂಟೆ 55 ನಿಮಿಷದಲ್ಲಿ ಕ್ರಮಿಸಿದ್ದರು.

ಈ ಬಾರಿ ಆತ್ರೇಯ ಚಿದಂಬಿ ಅವರು 13 ಗಂಟೆ 11 ನಿಮಿಷದಲ್ಲಿ ಗುರಿ ತಲುಪಿ ದ್ವಿತೀಯ ಹಾಗೂ ಸಂಪತ್‌ ಕುಮಾರ್‌ ಸುಬ್ರಮಣಿಯನ್‌ ಅವರು 13 ಗಂಟೆ 22 ನಿಮಿಷದಲ್ಲಿ ಕ್ರಮಿಸಿ ತೃತೀಯ ಸ್ಥಾನ ಪಡೆದಿದ್ದಾರೆ. ಈ ವಿಭಾಗಕ್ಕೆ 24 ಗಂಟೆ ಅವಧಿ ನಿಗದಿಪಡಿಸಲಾಗಿತ್ತು.

80 ಕಿ.ಮೀ ವಿಭಾಗದಲ್ಲಿ ಬೆಂಗಳೂರಿನ ಡಿ.ಧರ್ಮೇಂದ್ರ ಅವರು 9 ಗಂಟೆ 44 ನಿಮಿಷಗಳಲ್ಲಿ ಗುರಿ ತಲುಪಿ ಪ್ರಥಮ ಸ್ಥಾನ ಪಡೆದಿದ್ದಾರೆ. ಹರಿಹಂತ್‌ ರೆಡ್ಡಿ ಅವರು 10 ಗಂಟೆ 24 ನಿಮಿಷದಲ್ಲಿ ಗುರಿ ತಲುಪಿ ದ್ವಿತೀಯ ಹಾಗೂ ಹರಿ ಅವರು 10 ಗಂಟೆ 44 ನಿಮಿಷದಲ್ಲಿ ಕ್ರಮಿಸಿ ತೃತೀಯ ಸ್ಥಾನ ಪಡೆದಿದ್ದಾರೆ. ಈ ವಿಭಾಗಕ್ಕೆ 15 ಗಂಟೆ ಅವಧಿ ನಿಗದಿಪಡಿಸಲಾಗಿತ್ತು.

ADVERTISEMENT

ಶನಿವಾರ ಬೆಳಿಗ್ಗೆ ಸ್ಪರ್ಧೆ ಆರಂಭವಾಗಿತ್ತು. ಮಲೆನಾಡಿನ ಕಾಫಿ ಕಣಿವೆಯ ಸರ್ಪಸುತ್ತಿನ ಹಾದಿಗಳಲ್ಲಿ ನಡೆದ ಈ ಮ್ಯಾರಥಾನ್‌ನಲ್ಲಿ ದೇಶವಿದೇಶಗಳ 441 ಓಟಗಾರರು ಭಾಗವಹಿಸಿದ್ದರು. ನಿಗದಿ ಅವಧಿಯೊಳಗೆ ಗುರಿ ತಲುಪಿದ 220 ಓಟಗಾರರಿಗೆ ಪದಕ ಮತ್ತು ಪ್ರಮಾಣಪತ್ರ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.