ಚಿಕ್ಕಮಗಳೂರು: 2ಜಿ ಸ್ಪ್ರೆಕ್ಟ್ರಂ ಹಗರಣ ದಿಂದ ಬಿಎಸ್‌ಎನ್‌ಎಲ್‌ನಂಥ ದೊಡ್ಡ ಸಂಸ್ಥೆಗೆ ಹಿನ್ನಡೆಯಾಗಿದೆ ಎಂದು ಸಂಚಾರ್ ನಿಗಮ ಎಕ್ಸಿಕ್ಯುಟಿವ್ ಅಸೋಸಿಯೇಷನ್ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಜಿ.ಎಲ್. ಯೋಗಿ ತಿಳಿಸಿದರು.ಸಂಚಾರ್ ನಿಗಮದ ಎಕ್ಸಿಕ್ಯುಟಿವ್ ಅಸೋಸಿಯೇಷನ್ ವತಿಯಿಂದ ಹಮ್ಮಿ ಕೊಂಡಿದ್ದ 4ನೇ ವಲಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಎಸ್‌ಎನ್‌ಎಲ್ ಒಂದು ಸರ್ಕಾರಿ ಸಂಸ್ಥೆಯಾಗಿದೆ. ಇದು ಗ್ರಾಮೀಣ ಮಟ್ಟದಲ್ಲಿ ಸಾಮಾಜಿಕ ಬದ್ಧತೆಯಿಂದ ಕೆಲಸ ಮಾಡುತ್ತಿದೆ. ಈ ಸಂಸ್ಥೆಗೆ ಗ್ರಾಮೀಣ ಮಟ್ಟದಲ್ಲಿ ಆಗುತ್ತಿರುವ ಸೇವಾ ನಷ್ಟ ತುಂಬಿಸಿ ಕೊಡಲು ಸರ್ಕಾರ ಯಾವುದೇ ಪ್ರಯತ್ನಮಾಡುತ್ತಿಲ್ಲವೆಂದು ಟೀಕಿಸಿದರು.
ಖಾಸಗಿ ಕಂಪನಿಗಳು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಬೇಕೆಂಬ ನಿಯಮಗಳಿವೆ. ಆದರೆ ಅವು ಈ ನಿಯಮವನ್ನು ಪಾಲಿಸದೆ ತಮ್ಮ ಜವಾ ಬ್ದಾರಿಯಿಂದ ನುಣು ಚಿಕೊಳ್ಳುತ್ತಿವೆ. ಇಲಾಖೆಯಲ್ಲಿ ಎಲ್ಲಾ ರೀತಿಯ ಕೆಲಸ ಮಾಡುವ ಪರಿಣಿತ ತಂತ್ರಜ್ಞರಿದ್ದರೂ ಉದ್ದೇಶಪೂರ್ವಕವಾಗಿ ಹೊರಗುತ್ತಿಗೆ ನೀಡಿ ಸಂಸ್ಥೆಗೆ ನಷ್ಟ ಉಂಟು ಮಾಡ ಲಾಗುತ್ತಿದೆ ಎಂದು ಅವರು ತಿಳಿಸಿದರು.
ಈ ಸಂಸ್ಥೆ ಕೇಂದ್ರ ಸರ್ಕಾರದ ಅತಿದೊಡ್ಡ ಸಾರ್ವಜನಿಕ ಸೇವಾಸಂಸ್ಥೆ ಯಾಗಿದೆ. ಇಂಥ ಸಂಸ್ಥೆಯನ್ನು ಮುನ್ನಡೆಸುವ ಉನ್ನತ ಹುದ್ದೆಗಳಾದ ಛೇರ್‌ಮನ್ ಮತ್ತು ನಿರ್ದೇಶಕರ ಸ್ಥಾನಕ್ಕೆ ಸೂಕ್ತ ವ್ಯಕ್ತಿಗಳನ್ನು ನೇಮಕಮಾಡಲು ಸರ್ಕಾರಕ್ಕೆ ಇದುವರೆಗೂ ಸಾಧ್ಯವಾಗಿಲ್ಲ ಎಂದು ಅವರು ಮಾಹಿತಿ ನೀಡಿದರು.ಬಿಎಸ್‌ಎನ್‌ಎಲ್ ಕರ್ನಾಟಕ ವೃತ್ತದ ಪ್ರಧಾನ ಮಹಾಪ್ರಬಂಧಕ ರಾಘವನ್ ಸಮ್ಮೇಳನ ಉದ್ಘಾಟಿಸಿ ಇಲಾಖೆಯಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ವ್ಯವಸ್ಥೆಯಲ್ಲಿರುವ ಲೋಪದೋಷಗಳನ್ನು ತಿದ್ದಿಕೊಂಡು ಇಲಾಖೆಯ ಪ್ರಗತಿಗೆ ನೌಕರರು ಶ್ರಮಿಸಬೇಕೆಂದು ಮನವಿ ಮಾಡಿದರು.
ಖಾಸಗಿ ಸಂಸ್ಥೆಗಳೊಂದಿಗೆ ಸ್ಪರ್ಧೆ ನಡೆಸಲು ಶಕ್ತಿಮೀರಿ ಪ್ರಯತ್ನಿಸ ಬೇಕಾಗಿದೆ ಎಂದು ಸಂಚಾರ ನಿಗಮದ ಎಕ್ಸಿಕ್ಯುಟಿವ್ ಅಸೋಸಿಯೇಷನ್ ಹಿರಿಯ ಮುಖಂಡ ಶೇಷಗಿರಿರಾವ್ ತಿಳಿಸಿದರು. ಮಾರುಕಟ್ಟೆ ವಿಭಾಗದ ಮಹಾ ಪ್ರಬಂಧಕ ಚಂದ್ರಶೇಖರ್, ಆಡಳಿತ ವಿಭಾಗದ ಮಹಾಪ್ರಬಂಧಕ ಚಂದ್ರ ಮೌಳಿ, ಚಿಕ್ಕಮಗಳೂರು ದೂರ ಸಂಪರ್ಕ ಮಹಾಪ್ರಬಂಧಕ ಸತ್ಯನಾ ರಾಯಣ್, ಕಾಫಿ ಮಂಡಳಿ ಸದಸ್ಯೆ ರಾಧಿಕಾ ಯತಿರಾಜ್, ಕಾಫಿ ಮಂಡಳಿ ಮಾಜಿ ಸದಸ್ಯ ಡಿ.ಬಿ.ಸುಬ್ಬೇಗೌಡ, ಕುಲಶೇಖರ್ ಮಾತನಾಡಿದರು.
ನಿಗಮದ ಎಕ್ಸಿಕ್ಯುಟಿವ್ ಅಸೋಸಿ ಯೇಷನ್ ವಲಯ ಕಾರ್ಯದರ್ಶಿ ಎಸ್.ಬಿ.ನಾಗವಿ, ವಲಯ ಅಧ್ಯಕ್ಷ ಮುಕುಂದನ್, ರಾಷ್ಟ್ರೀಯ ಸಹಕಾರ್ಯ ದರ್ಶಿ ಎಂ.ಎಚ್.ಗೊಂಬಿ, ವಲಯ ಜಂಟಿ ಕಾರ್ಯದರ್ಶಿ ರಾಜನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.