ಕೊಪ್ಪ: ‘ಪಟ್ಟಣದ ಬಸ್ ನಿಲ್ದಾಣದಿಂದ ಬಾಳಗಡಿಗೆ ಪ್ರತಿ ಅರ್ಧ ಗಂಟೆಗೆ ಒಮ್ಮೆ ಸರ್ಕಾರಿ ಬಸ್ ಓಡಾಟದ ವ್ಯವಸ್ಥೆ ಕಲ್ಪಿಸಲು ಯೋಜಿಸಲಾಗಿದೆ’ ಎಂದು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಓಣಿತೋಟ ರತ್ನಾಕರ್ ತಿಳಿಸಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, 'ಬಸ್ ವ್ಯವಸ್ಥೆಯಿಂದ ತಾಲ್ಲೂಕು ಕಚೇರಿಗೆ ಬಂದು ಹೋಗುವ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಮುಂದಿನ ಸಭೆಯ ಹೊತ್ತಿಗೆ ನಿರ್ಧಾರವಾಗಲಿದೆ’ ಎಂದರು.
ಆಹಾರ ನಿರೀಕ್ಷಕ ಶ್ರೀಕಾಂತ್ ಮಾತನಾಡಿ, ‘ತಾಲ್ಲೂಕಿನಲ್ಲಿ 16 ಸಾವಿರ ಪಡಿತರ ಚೀಟಿಗಳ ಪೈಕಿ 145 ಅನರ್ಹ ಕಾರ್ಡ್‌ಗಳನ್ನು ಮಾತ್ರ ವಜಾ ಮಾಡಲಾಗಿದೆ. ಸರ್ಕಾರಿ ಕೆಲಸ, ಜಮೀನು, ಐಟಿ ರಿಟರ್ನ್ಸ್ ಇದ್ದವರ ಅರ್ಜಿ ವಜಾ ಮಾಡಲಾಗಿದೆ. ಅರ್ಹತೆ ಇರುವವರ ಕಾರ್ಡ್ ವಜಾ ಆಗಿದ್ದರೆ ಕೂಡಲೇ ಸಮರ್ಪಕ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಿದರೆ ಬಿಪಿಎಲ್ ಕಾರ್ಡ್‌ಗೆ ಅವಕಾಶ ಕೊಡಲಾಗುವುದು' ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಸಂತೋಷ್ ಡಿ.ಎಸ್., ವಸಂತಿ ಪಾಂಡುರಂಗ, ಶೋಭಾ, ಪೂರ್ಣಿಮಾ, ಪ್ರವೀಣ್, ಎಸ್.ಪಿ.ಪ್ರವೀಣ್, ರಾಘವೇಂದ್ರ ಆರ್.ಜಿ., ವಿಜಯಾನಂದ, ನಾಗೇಂದ್ರ ಪ್ರಸಾದ್, ಎಚ್.ಎಸ್.ಆದರ್ಶ, ನರೇಂದ್ರ ಶೆಟ್ಟಿ, ವಿಜಯಕುಮಾರ್, ಎಸ್.ಎ.ಅಬ್ದುಲ್ ಖಾದರ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.