ಅಜ್ಜಂಪುರ: ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆಯ ಫಲಿತಾಂಶವು ಶೇ 90ರಷ್ಟಾಗಿದೆ.
ಶಾಲೆ ಗುಣಾತ್ಮಕ ಕಲಿಕೆಯಲ್ಲಿ ಶೇ 76.07 ಗುರಿ ಸಾಧಿಸಿದ್ದು, ಮೈಸೂರು ವಿಭಾಗದ ಉರ್ದು ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಶಾಲೆಯಾಗಿ ಹೊರಹೊಮ್ಮಿದೆ. ಜತೆಗೆ ಎ ಗ್ರೇಡ್ ಪಡೆದಿದೆ.
ಆಯಷಾ ಶೇ 86.72 , ಇಕ್ರಾಖಾನಂ ಶೇ 85.28, ತಕ್ಕಯ್ಯ ತಸ್ಲೀಮ್ ಶೇ 83.68 ಅಂಕ ಪಡೆದಿದ್ದಾರೆ.
ಪರೀಕ್ಷೆಗೆ ಹಾಜರಾದ 10 ವಿದ್ಯಾರ್ಥಿಗಳಲ್ಲಿ ಇಬ್ಬರು ವಿಶಿಷ್ಟ ದರ್ಜೆ, ನಾಲ್ವರು ಪ್ರಥಮ ದರ್ಜೆ, ಮೂವರು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.