ADVERTISEMENT

ಅಜ್ಜಂಪುರ ತಾಲ್ಲೂಕು ಪಂಚಾಯಿತಿ: ಸುಚಿತ್ರಾ ಬಾಬು ನೂತನ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 3:12 IST
Last Updated 3 ನವೆಂಬರ್ 2020, 3:12 IST
ಅಜ್ಜಂಪುರದ ತಾಲ್ಲೂಕು ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿಯ ಸುಚಿತ್ರಾ ಬಾಬು ಅವಿರೋಧವಾಗಿ ಆಯ್ಕೆಯಾದರು. ಅವರನ್ನು ಶಾಸಕ ಡಿ.ಎಸ್. ಸುರೇಶ್, ಮತ್ತಿತರರು ಅಭಿನಂದಿಸಿದರು.
ಅಜ್ಜಂಪುರದ ತಾಲ್ಲೂಕು ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿಯ ಸುಚಿತ್ರಾ ಬಾಬು ಅವಿರೋಧವಾಗಿ ಆಯ್ಕೆಯಾದರು. ಅವರನ್ನು ಶಾಸಕ ಡಿ.ಎಸ್. ಸುರೇಶ್, ಮತ್ತಿತರರು ಅಭಿನಂದಿಸಿದರು.   

ಅಜ್ಜಂಪುರ: ಇಲ್ಲಿನ ತಾಲ್ಲೂಕು ಪಂಚಾ ಯಿತಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿಯ ಸುಚಿತ್ರಾ ಬಾಬು ಸೋಮವಾರ ಅವಿರೋಧವಾಗಿ ಆಯ್ಕೆಯಾದರು.

ಅಧಿಕಾರ ಹಂಚಿಕೆಯ ಸೂತ್ರದಡಿ ಈಚೆಗೆ ಪ್ರೇಮ ಮಂಜುನಾಥ್ ಅಧ್ಯಕ್ಷ ಸ್ಥಾನಕ್ಕೆ ಈಚೆಗೆ ರಾಜೀನಾಮೆ ನೀಡಿ ದ್ದರು. ಈ ಸ್ಥಾನಕ್ಕೆ ನಡೆದ ಚುನಾವಣೆ ಯಲ್ಲಿ ಸುಚಿತ್ರಾ ಬಾಬು ಮಾತ್ರ ನಾಮ ಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ರೇಣುಕಾಪ್ರಸಾದ್ ಕಾರ್ಯ ನಿರ್ವಹಿಸಿದರು.

ಬಳಿಕ ಮಾತನಾಡಿದ ಸುಚಿತ್ರಾ ಬಾಬು, ಪಂಚಾಯಿತಿ ಅಧ್ಯಕ್ಷೆಯಾಗಿ ಅವಿರೋಧ ಆಯ್ಕೆಯಾಗಲು ಬೆಂಬಲ ಸೂಚಿಸಿದ ಸದಸ್ಯರಿಗೆ ಹಾಗೂ ಸಹಕಾರ ನೀಡಿದ ಶಾಸಕ ಡಿ.ಎಸ್. ಸುರೇಶ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ADVERTISEMENT

‘ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಪಂಚಾಯಿತಿಗಳಿಗೂ ಬೇಟಿ ನೀಡಲಾಗುವುದು. ಅಲ್ಲಿನ ಸಮಸ್ಯೆ ಮತ್ತು ಕೊರತೆಗಳನ್ನು ತಿಳಿದು, ಅವುಗಳಿಗೆ ಪರಿಹಾರ ಕಲ್ಪಿಸುವ ಕೆಲಸ ನಿರ್ವಹಿಸುತ್ತೇನೆ’ ಎಂದರು.

ನೂತನ ಅಧ್ಯಕ್ಷೆ ಸುಚಿತ್ರಾ ಬಾಬು ಅವರನ್ನು ಅಭಿನಂದಿಸಿದ ಶಾಸಕ ಡಿ.ಎಸ್. ಸುರೇಶ್, ಸದಸ್ಯರ ಸಲಹೆ, ಸಹಕಾರ ಪಡೆದು ತಾಲ್ಲೂಕು ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳ ಕುಡಿಯುವ ನೀರು ಮತ್ತು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುವಂತೆ ಮನವಿ ಮಾಡಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಸುರೇಶ್ ಕುಮಾರ್, ಸದಸ್ಯ ಕೃಷ್ಣಪ್ಪ, ನಂಜುಂಡಪ್ಪ, ಗಂಗಾಧರಪ್ಪ, ಪ್ರತಿಮಾ ಸೋಮಶೇಖರ್, ಪ್ರೇಮ ಮಂಜು ನಾಥ್, ತಾಲ್ಲೂಕು ಪಂಚಾಯಿತಿ ಇಒ ರಾಮ್ ಕುಮಾರ್, ಪಿಎಸ್‌ಐ ಬಸವರಾಜು ಇದ್ದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್. ಆನಂದಪ್ಪ, ಜಿಲ್ಲಾ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಟಿ.ಎಲ್. ರಮೇಶ್, ತರೀಕೆರೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ ಸಂಜೀವ್ ಕುಮಾರ್, ಮುಖಂಡ ಜಾವೂರು ಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.