ADVERTISEMENT

ಕೂದುವಳ್ಳಿ ಲೂರ್ದು ಚರ್ಚ್‌ನಲ್ಲಿ ಶಾಶ್ವತ ಕನ್ಯಾ ವೃತ್ತ ಸಂಸ್ಕಾರ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 1:59 IST
Last Updated 3 ಜುಲೈ 2022, 1:59 IST
ಕೂದುವಳ್ಳಿ ಲೂರ್ದು ಮಾತೆ ಚರ್ಚ್‌ನಲ್ಲಿ ಶಾಶ್ವತ ಕನ್ಯಾ ವೃತ್ತ ಸಂಸ್ಕಾರದಲ್ಲಿ ಬಿಷಪ್ ಡಾ.ಟಿ. ಅಂತೋಣಿ ಸ್ವಾಮಿ ಶನಿವಾರ ಪಾಲ್ಗೊಂಡರು.
ಕೂದುವಳ್ಳಿ ಲೂರ್ದು ಮಾತೆ ಚರ್ಚ್‌ನಲ್ಲಿ ಶಾಶ್ವತ ಕನ್ಯಾ ವೃತ್ತ ಸಂಸ್ಕಾರದಲ್ಲಿ ಬಿಷಪ್ ಡಾ.ಟಿ. ಅಂತೋಣಿ ಸ್ವಾಮಿ ಶನಿವಾರ ಪಾಲ್ಗೊಂಡರು.   

ಆಲ್ದೂರು: ಇಲ್ಲಿಗೆ ಸಮೀಪದ ಕೂದುವಳ್ಳಿಯ ಲೂರ್ದು ಮಾತೆ ಚರ್ಚ್‌ನಲ್ಲಿ ಶಾಶ್ವತ ಕನ್ಯಾ ವೃತ್ತ ಸಂಸ್ಕಾರ ಧಾರ್ಮಿಕ ಆಚರಣೆ ಶನಿವಾರ ನಡೆಯಿತು.

ಚಿಕ್ಕಮಗಳೂರಿನ ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಡಾ.ಟಿ.ಅಂತೋಣಿ ಸ್ವಾಮಿ ಬಲಿಪೂಜೆಯನ್ನು ಅರ್ಪಿಸಿದರು. ಸಿಸ್ಟರ್ ಅರ್ಚನಾ ಅವರಿಗೆ ಶಾಶ್ವತ ಕನ್ಯಾ ವೃತ್ತದ ಸಂಸ್ಕಾರ ನೆರವೇರಿಸಿದರು.

‘ಉತ್ತಮ ಕನ್ಯಾ ಸಹೋದರಿಯಾಗಿ ಸೇವೆ ಸಲ್ಲಿಸಲು ಬ್ರಹ್ಮಚರ್ಯ, ಕನ್ಯತ್ವ, ವಿಧೇಯತೆ ಮೂರು ಮುಖ್ಯ ಗುಣಗಳು ಅವಶ್ಯಕತೆ ಪರಿಪಾಲಿಸಬೇಕು. ಸೇವಾ ಜೀವನವನ್ನೂ ಸಮಾಜಕ್ಕೂ ದೇವರಿಗೂ ಸರಳತೆಯ ನಡೆನುಡಿಗಳ ಮೂಲಕ ಮುಡಿಪಾಗಿರಬೇಕು’ ಎಂದು ಬಿಷಪ್‌ ಪ್ರಬೋಧನೆ ನೀಡಿದರು.

ADVERTISEMENT

ಕೂದುವಳ್ಳಿ ಲೂರ್ದು ಮಾತೆ ದೇವಾಲಯದ ಧರ್ಮಕೇಂದ್ರ ಗುರು ಡೆಂಜಿಲ್ ಲೋಬೊ, ಸಂತ ಜೋಸೆಫರ ಪ್ರಧಾನಾಲಯದ ಸಹಾಯಕ ಗುರುವಿನಯ್, ಅಮರ್ ಆಂಡ್ರೂ ಮ್ಯಾಥ್ಯೂ, ಸಿಸ್ಟರ್ ಮೇರಿ ಮೈಸೂರು, ಸಿಸ್ಟರ್ ವೆರೋನಿಕ, ಧರ್ಮ ಕೇಂದ್ರದ ಪಾಲನಾ ಸಮಿತಿಯ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.