ಆಲ್ದೂರು: ಕೂದುವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ವಿ.ಎನ್. ಉಮೇಶ್ ವಳಗೇರಹಳ್ಳಿ, ಉಪಾಧ್ಯಕ್ಷರಾಗಿ ವಿ.ಆರ್. ಜಯಪ್ರಕಾಶ್ ವಳಗೇರಹಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗುರುವಾರ ಅಧ್ಯಕ್ಷ– ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಚಿಕ್ಕಮಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆನಂದ್, ದೀಪಕ್ ದೊಡ್ಡಯ್ಯ, ಎಚ್.ಎಸ್. ಕವೀಶ್, ಡಿ.ಜೆ. ಸುರೇಶ್, ಟಿ.ಕೆ.ನಾರಾಯಣಗೌಡ, ವಿ.ಪಿ. ಕೃಷ್ಣೇಗೌಡ ಮತ್ತು ಸಿ.ಡಿ. ಭವಾನಿ ಶಂಕರ್, ಸಂಘದ ನಿರ್ದೇಶಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.