ADVERTISEMENT

ಅಲೆಕಾನು: ಕಾಡುಹಂದಿ ಕಚ್ಚಿ ರೈತನ ಕೈ ಬೆರಳು ತುಂಡು

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 6:16 IST
Last Updated 15 ಜುಲೈ 2025, 6:16 IST
ಮೂಡಿಗೆರೆ ತಾಲ್ಲೂಕಿನ ಅಲೆಕಾನು ಗ್ರಾಮದಲ್ಲಿ ಕಾಡುಹಂದಿ ದಾಳಿಯಿಂದ ಉಪೇಂದ್ರ ಎಂಬುವರ ಕೈ ಬೆರಳು ಗಾಯವಾಗಿದೆ
ಮೂಡಿಗೆರೆ ತಾಲ್ಲೂಕಿನ ಅಲೆಕಾನು ಗ್ರಾಮದಲ್ಲಿ ಕಾಡುಹಂದಿ ದಾಳಿಯಿಂದ ಉಪೇಂದ್ರ ಎಂಬುವರ ಕೈ ಬೆರಳು ಗಾಯವಾಗಿದೆ   

ಮೂಡಿಗೆರೆ: ತಾಲ್ಲೂಕಿನ ಅಲೆಕಾನು ಗ್ರಾಮದಲ್ಲಿ ದನಗಳನ್ನು ಮೇಯಿಸಲು ಹೋಗಿದ್ದ ರೈತನೊಬ್ಬನ ಮೇಲೆ ಕಾಡು ಹಂದಿಯ ದಾಳಿ ನಡೆಸಿದೆ. ರೈತನ ಕೈ ಬೆರಳುನ್ನು ಕಚ್ಚಿ ತುಂಡು ಮಾಡಿದೆ.

ಅಲೆಕಾನು ನಿವಾಸಿ ಉಪೇಂದ್ರ ಗಾಯಗೊಂಡ ವ್ಯಕ್ತಿ. ದನಗಳನ್ನು ಮೇಯಿಸಿಮರಳುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ್ದ ಹಂದಿಯು, ಕೈ ಬೆರಳನ್ನು ಕಚ್ಚಿತು.  ಒಂದು ಬೆರಳು ಸಂಪೂರ್ಣ ತುಂಡಾಗಿದೆ. ತಕ್ಷಣ ಸ್ಥಳೀಯರ ನೆರವಿನಿಂದ ಉಪೇಂದ್ರ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.


ಘಟನೆಯ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಆದರೂ ಯಾವುದೇ ಅಧಿಕಾರಿ  ಸ್ಥಳಕ್ಕೆ ಬಂದಿಲ್ಲ. ಗಾಯಗೊಂಡು ಆಸ್ಪತ್ರೆಗೆ ದಾಖಲಾದರೂ ಸೌಜನ್ಯಕ್ಕಾಗಿಯೂ ಅಧಿಕಾರಿಗಳು ಅವರನ್ನು ಭೇಟಿ ಮಾಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ADVERTISEMENT


ಅರಣ್ಯ ಇಲಾಖೆಯು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.