ADVERTISEMENT

ಪರಿಶಿಷ್ಟರ ಮನೆ ಮೇಲೆ ದಾಳಿ ಆರೋಪ: ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಜುಲೈ 2023, 13:16 IST
Last Updated 4 ಜುಲೈ 2023, 13:16 IST
ತರೀಕೆರೆ ತಾಲ್ಲೂಕಿನ ಯರೇಹಳ್ಳಿ ತಾಂಡ್ಯಾದ ನಾಗಲಾಪುರದಲ್ಲಿ ಪರಿಶಿಷ್ಟರ ಮನೆ ಮೇಲೆ ದಾಳಿ ನಡೆದಿದ ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಮುಖಂಡರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು
ತರೀಕೆರೆ ತಾಲ್ಲೂಕಿನ ಯರೇಹಳ್ಳಿ ತಾಂಡ್ಯಾದ ನಾಗಲಾಪುರದಲ್ಲಿ ಪರಿಶಿಷ್ಟರ ಮನೆ ಮೇಲೆ ದಾಳಿ ನಡೆದಿದ ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಮುಖಂಡರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು   

ಚಿಕ್ಕಮಗಳೂರು: ತರೀಕೆರೆ ತಾಲ್ಲೂಕಿನ ಯರೇಹಳ್ಳಿ ತಾಂಡ್ಯಾದ ನಾಗಲಾಪುರದಲ್ಲಿ ಪರಿಶಿಷ್ಟರ ಮನೆ ಮೇಲೆ ದಾಳಿ ನಡೆಸಿ ನಷ್ಟ ಉಂಟು ಮಾಡಿರುವ ಗ್ರಾಮಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.

‘ನಾಗಲಾಪುರದ ಸರ್ವೆ ನಂಬರ್ 31ರಲ್ಲಿ ಮನೆ ನಿರ್ಮಿಸಿಕೊಂಡು 13 ವರ್ಷಗಳಿಂದ ವಾಸಿಸುತ್ತಿರುವ ರುದ್ರಮ್ಮ ಎಂಬವರ ಮನೆ ಮೇಲೆ ಈಚೆಗೆ ಗ್ರಾಮಸ್ಥರು ದಾಳಿ ನಡೆಸಿ ಸಿಮೆಂಟ್ ಶೀಟ್‍, ಹೆಂಚು ಮತ್ತು ಕಿಟಕಿಗಳನ್ನು ಒಡೆದು ದೌರ್ಜನ್ಯ ನಡೆಸಿದ್ದಾರೆ’ ಎಂದು ಆರೋಪಿಸಿದರು.

ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಆಗ್ರಹಿಸಿದರು. 

ADVERTISEMENT

ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಬಿ.ಕೃಷ್ಣಪ್ಪ ಸ್ಥಾಪಿತ ಬಣ) ಜಿಲ್ಲಾ ಸಂಚಾಲಕ ಎಲ್.ಎಸ್.ಶ್ರೀಕಾಂತ್, ಸಂಘಟನಾ ಸಂಚಾಲಕ ಡಿ.ರಾಮು, ಶೃಂಗೇರಿ ಕ್ಷೇತ್ರ ಪ್ರಧಾನ ಸಂಚಾಲಕ ಎಸ್.ಹನುಮಂತ, ಪಿ.ಎ.ಜಾರ್ಜ್, ಸಂತ್ರಸ್ತರಾದ ರುದ್ರಮ್ಮ, ರಾಮ ಭೋವಿ, ರಂಜಿತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.