ಕಡೂರು: ಪಟ್ಟಣದ ಬಿಇಒ ಕಚೇರಿ ಬಳಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಎದುರು ₹20 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಅಂಗನವಾಡಿ ಕಟ್ಟಡ ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಸೋಮವಾರ ಚಾಲನೆ ನೀಡಿದರು.
‘ಅಶ್ವತ್ಥ್ ನಗರದಲ್ಲಿ ಅಂಗನವಾಡಿ ಕಟ್ಟಡ ಬಹುದಿನಗಳ ಬೇಡಿಕೆಯಾಗಿತ್ತು. ಇಲ್ಲಿ ಹಲವು ಅಡೆತಡೆಗಳಿದ್ದವು. ಅನುದಾನ ದೊರೆತರೂ ಜಾಗದ ಸಮಸ್ಯೆ ಇತ್ತು. ಈಗ ಪುರಸಭೆ ಅಂಗನವಾಡಿ ಕಟ್ಟಡಕ್ಕೆ ಭೂಮಿ ನೀಡಿದೆ. ಕೆಆರ್‌ಐಡಿಎಲ್ ಮೂಲಕ ಸುಸಜ್ಜಿತ ಕಟ್ಟಡ ನಿರ್ಮಾಣಗೊಳ್ಳಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗ್ರಾಮೀಣ ಪ್ರದೇಶದಲ್ಲಿ ಅಂಗನವಾಡಿಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಪಟ್ಟಣದಲ್ಲೂ ನೀಡಬೇಕು’ ಎಂದರು.
ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ‘ಪಟ್ಟಣದಲ್ಲಿ ಎಲ್ಲೆಲ್ಲಿ ಅಂಗನವಾಡಿ ಅಗತ್ಯವಿದೆಯೋ ಅಲ್ಲಿ ಜಾಗ ನೀಡುವ ಜವಾಬ್ದಾರಿ ಪುರಸಭೆಯದ್ದು’ ಎಂದರು.
ಬಿಇಒ ಸಿದ್ದರಾಜುನಾಯ್ಕ, ಸಿಡಿಪಿಒ ಶಿವಪ್ರಕಾಶ್, ಕೆಆರ್‌ಐಡಿಎಲ್ ಎಇಇ ಅಶ್ವಿನಿ, ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಮುಖ್ಯಾಧಿಕಾರಿ ಮಂಜುನಾಥ್, ಸದಸ್ಯರಾದ ಮರುಗುದ್ದಿ ಮನು, ಸಯ್ಯದ್ ಇಕ್ಬಾಲ್, ಇಕ್ಬಾಲ್, ಸುಧಾ ಉಮೇಶ್, ಹಾಲಮ್ಮ, ಜ್ಯೋತಿ ಆನಂದ್, ಆಸಂದಿ ಕಲ್ಲೇಶ್, ಗುಮ್ಮನಹಳ್ಳಿ ಅಶೋಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.