ಬಾಳೆಹೊನ್ನೂರು: ‘ಪ್ರತಿ ಕುಟುಂಬದಿಂದ ಕನಿಷ್ಠ ಒಬ್ಬರಾದರೂ ಸೇನೆಯಲ್ಲಿ ಕಾರ್ಯನಿರ್ವಹಿಸುವ ಮೂಲಕ ದೇಶದ ಋಣ ತೀರಿಸಬೇಕು’ ಎಂದು ನಿವೃತ್ತ ಯೋಧ ಮುತ್ತಿನ ಕೊಪ್ಪದ ಕೆ.ಎಲ್ ಉಪೇಂದ್ರ ಗೌಡ ಹೇಳಿದರು.
ಬನ್ನೂರಿನಲ್ಲಿ ಕೃಷಿಕ ಬಿ.ಎಸ್.ಶ್ರೀನಿವಾಸ್ ಗೌಡ ಅವರ ಮನೆಯಂಗಳದಲ್ಲಿ ನಡೆದ ‘ಬಾಂಧವ್ಯ ಬೆಸುಗೆ’ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಆಚಾರ ವಿಚಾರಗಳು ಏನೇ ಇದ್ದರೂ, ದೇಶ ಮೊದಲು ಎಂಬುದಕ್ಕೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು ಎಂದರು.
ಆಯೋಜಕ ಬಿ.ಎಸ್.ಶ್ರೀನಿವಾಸ್ ಗೌಡ ಮಾತನಾಡಿ, ‘ಕುಟುಂಬದಲ್ಲಿ ನಡೆಯುವ ಶುಭ ಸಮಾರಂಭಗಳಲ್ಲಿ ಸಾಧಕರನ್ನು ಗುರುತಿಸಿ, ಗೌರವಿಸುವುದು ಯುವ ತಲೆಮಾರಿಗೆ ಸಾಧನೆಗೆ ಸ್ಫೂರ್ತಿಯಾಗುತ್ತದೆ’ ಎಂದರು.
ಸವಿನ, ಬ್ರಿಜೇಶ್, ರಾಜೇಶ್, ಅಭಿಷೇಕ್, ಪ್ರವಲ್ಲಿಕ ಮತ್ತು ವೆಂಕಟೇಶ್, ಸುಮಾ ಶ್ರೀನಿವಾಸ ಗೌಡ, ಮಾನ್ವಿಕ್ ಗೌಡ, ಚೈತನ್ಯ ವೆಂಕಿ, ಅವನಿ, ತೇಜಸ್ವಿನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.