
ಮೂಡಿಗೆರೆ: ಪಟ್ಟಣದ ಕೆ.ಎಂ.ರಸ್ತೆಯಲ್ಲಿರುವ ಶ್ರೀ ಹಿರೇದೇವಿರಮ್ಮನ ಬನದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಭಾನುವಾರ ಮಂಡಲ ಉತ್ಸವದ ಅಂಗವಾಗಿ ವಿಶೇಷ ಪೂಜೆಗಳು ನಡೆದವು.
ಬೆಳಿಗ್ಗೆ ಹಿರೇದೇವಿರಮ್ಮ, ಅಯ್ಯಪ್ಪಸ್ವಾಮಿ, ಸುಬ್ರಹ್ಮಣ್ಯ, ಗಣಪತಿ ಹಾಗೂ ನಾಗದೇವತೆಗೆ ವಿಶೇಷ ಅಭಿಷೇಕ ನಡೆಸಲಾಯಿತು. ದೇವಾಲಯದಲ್ಲಿ ಮಹಾಗಣಪತಿ ಹೋಮ ನಡೆಸಿ, ತ್ರಿಕಾಲ ಪೂಜೆಗೆ ಚಾಲನೆ ನೀಡಲಾಯಿತು. ಗೋಧೂಳಿ ಲಗ್ನದಲ್ಲಿ ಅಗ್ನಿಪೂಜೆ ನಡೆಸಿ ತ್ರಿಕಾಲ ದಾಸೋಹಕ್ಕೆ ಚಾಲನೆ ಕೊಡಲಾಯಿತು. ರಾತ್ರಿ ಪಡಿಪೂಜೆ, ಭಜನೆ ಹಾಗೂ ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು.
ವಿವಿಧೆಡೆಯಿಂದ ಬಂದಿದ್ದ ಭಕ್ತರು ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡರು. ದೇವಾಲಯ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.