ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಹೊನ್ನಳ್ಳಿ ಎಂಬಲ್ಲಿ ಒತ್ತುವರಿ ಮಾಡಿಕೊಂಡಿದ್ದ 33 ಎಕರೆ ಅರಣ್ಯ ಪ್ರದೇಶವನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
ತನೂಡಿ ಮೀಸಲು ಅರಣ್ಯದ ಸರ್ವೇ ನಂ 29 ಹಾಗೂ ಹಲಸೂರು ಸ್ಟೇಟ್ ಫಾರೆಸ್ಟ್ ಸರ್ವೇ ನಂ 55ರಲ್ಲಿ ದೇವರಾಜು ಎಂಬುವವರು 33 ಎಕರೆ ಪ್ರದೇಶದಲ್ಲಿ ಒತ್ತುವರಿ ಮಾಡಿ ಬೆಳೆದಿದ್ದ ಕಾಫಿ, ಅಡಿಕೆ, ಕಾಳುಮೆಣಸನ್ನು ಇಲಾಖೆ ಅಧಿಕಾರಿಗಳು ಕಾರ್ಮಿಕರನ್ನು ಬಳಸಿಕೊಂಡು ಕಡಿದು ಹಾಕಿದರು.
ಎಸಿಎಫ್ ಮೋಹನ್ ಕುಮಾರ್, ಪ್ರಭಾರ ಆರ್‌ಎಫ್ಒ ಮಧುಕರ್, ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.