ಮೂಡಿಗೆರೆ: ತಾಲ್ಲೂಕಿನ ಬೆಟ್ಟಗೆರೆ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷದ ಬೆಂಬಲಿತ ಅಭ್ಯರ್ಥಿ ಕೋಳೂರು ಕುಮಾರ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಕೋಳೂರು ಕುಮಾರ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ನವೀನ್ ಕುಮಾರ್ ಪ್ರಕಟಿಸಿದರು.
ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಝಾಕೀರ್ ಹುಸೇನ್, ‘ಬೆಟ್ಟಗೆರೆ ಗ್ರಾಮ ಪಂಚಾಯಿತಿಯನ್ನು ನಮ್ಮ ರಾಜ್ಯದಲ್ಲೇ ಮಾದರಿ ಗ್ರಾಮ ಪಂಚಾಯಿತಿಯಾಗಿ ನೋಡಬಹುದಾಗಿದೆ. ಯಾವುದೇ ಪಕ್ಷ , ಜಾತಿಗೆ ಅಂಟಿಕೊಳ್ಳದೆ ವಿಶ್ವಾಸದಿಂದ ಅಧಿಕಾರ ಹಂಚಿಕೊಂಡು 5 ವರ್ಷಗಳ ಅವಧಿಯನ್ನು ಪೂರ್ಣಗೊಳಿಸುತ್ತಿರುವುದು ಅಭಿನಂದನಾರ್ಹ. ಬಿಎಸ್‌ಪಿಯಲ್ಲಿ ವಿವಿಧ ಹುದ್ದೆಗಳನ್ನು ಜವಾಬ್ದಾರಿಯಿಂದ ನಿರ್ವಹಿಸಿರುವ ಕುಮಾರ್, ಅಧ್ಯಕ್ಷರಾಗಿಯೂ ಉತ್ತಮ ಕಾರ್ಯ ನಿರ್ವಹಿಸುತ್ತಾರೆ ಎಂಬ ವಿಶ್ವಾಸವಿದೆʼ ಎಂದರು.
ಮಾಜಿ ಅಧ್ಯಕ್ಷ ದಿನೇಶ್ ಗೌಡ, ಗೋಪಾಲ್ ಗೌಡ, ಹೂವಮ್ಮ, ಸುಶೀಲಾ, ಕೃತಿ, ಸುಂದರಿ, ಎಲ್. ಬಿ ರಮೇಶ್, ಶಂಕರ್, ಬಕ್ಕಿ ಮಂಜುನಾಥ್, ,ಅಣ್ಣಪ್ಪ, ಲಕ್ಷ್ಮಣ್ ದೊಡ್ಡಯ್ಯ, ಶ್ರೀಕಾಂತ್, ಅಣ್ಣಪ್ಪ, ಸುಮಿತ್ರಾ, ಹೊನ್ನೇಶ್, ಲೋಕೇಶ್, ಪ್ರಾಣೇಶ್, ಸುರೇಶ್ ಸಂದೀಪ್, ಚಂದ್ರಶೇಖರ್ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.