ADVERTISEMENT

ಭದ್ರಾ ಜಲಾಶಯದಲ್ಲಿ ಶವ ಪತ್ತೆ: ಆತ್ಮಹತ್ಯೆ ಶಂಕೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2021, 12:29 IST
Last Updated 25 ಆಗಸ್ಟ್ 2021, 12:29 IST
ಶನೇಶ್ವರ ದೇಗುಲ ಹಿಂಭಾಗದಲ್ಲಿನ ಭದ್ರಾ ಮೇಲ್ದಂಡೆ ನಾಲೆ ಗೇಟ್‌ ಪ್ರದೇಶ.
ಶನೇಶ್ವರ ದೇಗುಲ ಹಿಂಭಾಗದಲ್ಲಿನ ಭದ್ರಾ ಮೇಲ್ದಂಡೆ ನಾಲೆ ಗೇಟ್‌ ಪ್ರದೇಶ.   

ಚಿಕ್ಕಮಗಳೂರು: ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಹೋಬಳಿ ರಾಜಸ್ವ ನಿರೀಕ್ಷಕ(ಆರ್‌ಐ) ಸೋಮಶೇಖರ್‌(51) ಶವ ಭದ್ರಾ ಜಲಾಶಯದಲ್ಲಿ ಪತ್ತೆಯಾಗಿದೆ.

ಜಲಾಶಯದ ಸಮೀಪ ನಿಂತಿದ್ದ ಕಾರಿನಲ್ಲಿ ‘ಡೆತ್‌ ನೋಟ್‌’ ಸಿಕ್ಕಿದೆ. ‘ನನ್ನ ಸಾವಿಗೆ ಬಗರ್‌ ಹುಕುಂ ಧನಪಾಲ್‌ ಸಂಪೂರ್ಣ ಕಾರಣರಾಗಿರುತ್ತಾರೆ. ಏಕೆಂದರೆ ಅವರೇ ಎಲ್ಲಾ ವಹಿಸಿಕೊಂಡು ನನ್ನ ಮೇಲೆ ಹೇಳುವುದು ಹಾಗೂ ಮಳಿಕೊಪ್ಪ ಸ್ಮಶಾನದ ಬಗ್ಗೆ ಒತ್ತಡ ಸುಖಾಸುಮ್ಮನೆ ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುತ್ತೇನೆ. ಕಾರಣಕರ್ತರು 1.ರಮೇಶಣ್ಣ ಬಟ್ಟೆ ಅಂಗಡಿ, 2.ಸಂಜೀವಕುಮಾರ್‌ ಸ್ಮಶಾನದ ಬಗ್ಗೆ ಒತ್ತ ಹಾಕಿದವರು. (ಸಹಿ), ಲಕ್ಕವಳ್ಳಿ ಹೋಬಳಿ ತರೀಕೆರೆ’ ಎಂದು ‘ಡೆತ್‌ನೋಟ್‌’ನಲ್ಲಿ ಬರೆಯಲಾಗಿದೆ.

‘ಜಲಾಶಯಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಶನೇಶ್ವರ ದೇಗುಲ ಹಿಂಭಾಗದಲ್ಲಿನ ಭದ್ರಾ ಮೇಲ್ದಂಡೆ ನಾಲೆ ಗೇಟ್‌ ಪ್ರದೇಶದಲ್ಲಿ ಶವ ಸಿಕ್ಕಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ತರೀಕೆರೆಗೆ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.