ADVERTISEMENT

ಕಡೂರು: ಭರತ್ ಕೆಂಪರಾಜು ಕಾರಿಗೆ ಕಿಡಿಗೇಡಿಗಳಿಂದ ಹಾನಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 12:54 IST
Last Updated 2 ಜೂನ್ 2025, 12:54 IST
ಕಿಡಿಗೇಡಿಗಳು ಹಾನಿಗೊಳಿಸಿರುವ ಭರತ್ ಕೆಂಪರಾಜು ಅವರ ಕಾರು
ಕಿಡಿಗೇಡಿಗಳು ಹಾನಿಗೊಳಿಸಿರುವ ಭರತ್ ಕೆಂಪರಾಜು ಅವರ ಕಾರು   

ಕಡೂರು: ಬಿಜೆಪಿ ಯುವಮೋರ್ಚಾ ಜಿಲ್ಲಾ ಘಟಕದ ಉಪಾಧ್ಯಕ್ಷ ಭರತ್ ಕೆಂಪರಾಜು ಅವರ ಕಾರನ್ನು ಕಿಡಿಗೇಡಿಗಳು ಹಾನಿಗೊಳಿಸಿದ್ದಾರೆ.

ಭರತ್‌ ಅವರು ಭಾನುವಾರ ರಾತ್ರಿ ಪಟ್ಟಣದ ವಿದ್ಯಾನಗರದಲ್ಲಿರುವ ಮನೆ ಮುಂದೆ ಕಾರು ನಿಲ್ಲಿಸಿದ್ದರು. ಕಿಡಿಗೇಡಿಗಳು ಕಾರಿನ ಬಾನೆಟ್, ಮುಂದಿನ ಗಾಜನ್ನು ಕಲ್ಲುಗಳಿಂದ ಜಜ್ಜಿದ್ದಾರೆ. ಮನೆ ಆವರಣದ ಪಾಟ್‌ಗಳನ್ನು ಧ್ವಂಸಗೊಳಿಸಿದ್ದಾರೆ. ಸೋಮವಾರ ಬೆಳಿಗ್ಗೆ ಘಟನೆ ಗಮನಕ್ಕೆ ಬಂದಿದೆ.

‘ಯಾವ ಕಾರಣಕ್ಕಾಗಿ ಈ ರೀತಿ ಮಾಡಿದ್ದಾರೆಂಬುದು ಗೊತ್ತಿಲ್ಲ. ರಾಜಕೀಯವಾಗಿ ನನ್ನ ಮನಸ್ಥೈರ್ಯ ಕುಗ್ಗಿಸಲು ಇದರಿಂದ ಸಾಧ್ಯವಿಲ್ಲ. ಈ ಕುರಿತು ಪೊಲೀಸರಿಗೆ ದೂರು ನೀಡಿದ್ದೇನೆ. ಅವರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ವಿಶ್ವಾಸ ಇದೆ’ ಎಂದು ಭರತ್ ಕೆಂಪರಾಜು ತಿಳಿಸಿದರು.

ADVERTISEMENT

ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್, ತಾಲ್ಲೂಕು ಯುವಮೋರ್ಚಾ ಅಧ್ಯಕ್ಷ ಅಜ್ಜಯ್ಯ ಒಡೆಯರ್, ಬೀರೂರು ರಂಭಾಪುರಿ ಶಾಖಾ ಮಠದ ರುದ್ರಮುನಿ ಸ್ವಾಮೀಜಿ ಭರತ್ ಮನೆಗೆ ಭೇಟಿ ನೀಡಿದ್ದಾರೆ. ಕೃತ್ಯ ನಡೆದ ಸ್ಥಳಕ್ಕೆ ಪಿಎಸ್‌ಐ ಪವನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.