ADVERTISEMENT

‘ವಚನ ಸಾಹಿತ್ಯದಿಂದ ಮಹಿಳಾ ಸಾಹಿತ್ಯ ಮುನ್ನೆಲೆಗೆ’

ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಮುಕ್ತಾಂಬಾ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 5:29 IST
Last Updated 23 ಜನವರಿ 2023, 5:29 IST
ಕೊಪ್ಪ ತಾಲ್ಲೂಕು ಭಂಡಿಗಡಿಯಲ್ಲಿ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷೆ ಎಸ್.ಎನ್.ಚಂದ್ರಕಲಾ ಉದ್ಘಾಟಿಸಿದರು.
ಕೊಪ್ಪ ತಾಲ್ಲೂಕು ಭಂಡಿಗಡಿಯಲ್ಲಿ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷೆ ಎಸ್.ಎನ್.ಚಂದ್ರಕಲಾ ಉದ್ಘಾಟಿಸಿದರು.   

ಕೊಪ್ಪ: ‘ಸುಮಾರು 10ನೇ ಶತಮಾನದ ಆದಿಯಿಂದಲೂ ಕನ್ನಡ ಮಹಿಳಾ ಸಾಹಿತ್ಯ ರೂಪುಗೊಳ್ಳುತ್ತಾ ಬಂದಿದೆಯಾದರೂ ವಚನಗಳ ಸಾಹಿತ್ಯದ ಮೂಲಕ ಪ್ರಕಾರವಾದ ಮಹಿಳಾ ಸಾಹಿತ್ಯ ಮುನ್ನೆಲೆಗೆ ಬಂದಿತು’ ಎಂದು ಹರಿಹರಪುರದ ಅಭಿನವ ರಾಮಾನಂದ ಸರಸ್ವತಿ ಪದವಿಪೂರ್ವ ಕಾಲೇಜು ಉಪನ್ಯಾಸಕಿ ಮುಕ್ತಾಂಬಾ ಹೇಳಿದರು.

ತಾಲ್ಲೂಕಿನ ಭಂಡಿಗಡಿ ದುರ್ಗಾಪರಮೇಶ್ವರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹರಿಹರಪುರ ಹೋಬಳಿ ಘಟಕ ವತಿಯಿಂದ ಈಚೆಗೆ ಆಯೋಜಿಸಿದ್ದ ದಿ. ಸಿ.ವಿ.ಸುವರ್ಣ ಕೃಷ್ಣಮೂರ್ತಿ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು, ಮಹಿಳಾ ಸಾಹಿತ್ಯ ಕುರಿತು ಉಪನ್ಯಾಸ ನೀಡಿದರು.

‘ಅಕ್ಕಮಹಾದೇವಿ ವಚನಗಳು ನಂತರ ಆಧುನಿಕತೆಯಲ್ಲಿ ಹಲವಾರು ಮಹಿಳಾ ಸಾಹಿತಿಗಳು ಕಥೆ, ಕಾದಂಬರಿ ನಾಟಕಗಳ ಮೂಲಕ ಜನಮಾನಸದಲ್ಲಿ ಇಂದಿಗೂ ನೆಲೆಸಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಹರಿಹರಪುರ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಬಿ.ಆರ್.ಅಂಬರೀಶ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ನಿರಂತರವಾಗಿ ಪುಸ್ತಕಗಳನ್ನು ಓದುವಂತಹ ಹಾಗೂ ಬರವಣಿಗೆ ಅಭ್ಯಾಸದಿಂದ ಜ್ಞಾನ ಅಭಿವೃದ್ಧಿಯಾಗುತ್ತದೆ. ಮಕ್ಕಳು ಕಥೆ, ಕವನ, ಚುಟುಕುಗಳನ್ನು ಬರೆಯುವ ಅಭ್ಯಾಸ ಮಾಡಬೇಕು’ ಎಂದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಎಸ್.ಎನ್.ಚಂದ್ರಕಲಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ‘ಕನ್ನಡ ಸಾಹಿತ್ಯದಲ್ಲಿ ದತ್ತಿ ನಿಧಿಯ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.

ಭಂಡಿಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯು.ನಾಗಶ್ರೀ, ಹರಿಹರಪುರ ಕಸಾಪ ಹೋಬಳಿ ಘಟಕದ ನಿಕಟಪೂರ್ವಾಧ್ಯಕ್ಷ ಎಚ್.ಆರ್.ದುರ್ಗೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಪಿ. ಮಹೇಂದ್ರ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಿ.ಎನ್.ಬಿಷೇಜ, ಚಾವಲ್ಮನೆ ಸುರೇಶ್ ನಾಯ್ಕ ಮಾತನಾಡಿದರು.

ಹಿರಿಯರಾದ ರತ್ನಮ್ಮ ವೆಂಕಟಪ್ಪ ನಾಯ್ಕ, ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸೀತಾದೇವಿ ಎಂ.ಜಿ. ಅವರನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿ, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಪ್ರೌಢ ಶಾಲೆ ಮುಖ್ಯ ಶಿಕ್ಷಕ ಎನ್.ಎಸ್.ಸುರೇಂದ್ರ, ಸಿ.ಎಸ್.ಸುಬ್ರಮಣ್ಯ, ಬಿ.ಎಚ್.ರಾಮಚಂದ್ರ, ಶುಕುರ್ ಅಹಮದ್, ಫಿರೋಜ್ ಪಾಷಾ, ಬಿ.ಎಚ್.ಚಂದ್ರಮೌಳಿ, ಸವಿತಾ ಶ್ರೀಹರ್ಷ, ಜೆ.ಪಿ.ಹರೀಶ್, ಆಶಾ, ಸುಮಾ, ಸುರೇಖಾ, ಅನಿಲ್ ಕುಮಾರ್, ಸುಮಿತ್ರ ನಾರಾಯಣ್, ಎ.ಓ.ವೆಂಕಟೇಶ್, ಶಿಕ್ಷಕಿ ಅಸ್ಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.