ADVERTISEMENT

ಚಿಕ್ಕಮಗಳೂರು: ಚಾರ್ಮಾಡಿ ಘಾಟಿ ಅರಣ್ಯದಲ್ಲಿ ಬೆಂಕಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2022, 14:13 IST
Last Updated 27 ಡಿಸೆಂಬರ್ 2022, 14:13 IST
ಚಾರ್ಮಾಡಿ ಘಾಟಿ
ಚಾರ್ಮಾಡಿ ಘಾಟಿ    

ಚಿಕ್ಕಮಗಳೂರು: ಜಿಲ್ಲೆಯ ಚಾರ್ಮಾಡಿ ಘಾಟಿ ಮಾರ್ಗದ ಬದಿಯ ಕಾಡಿನಲ್ಲಿ ಮಂಗಳವಾರ ಬೆಂಕಿ ಹೊತ್ತಿಕೊಂಡು ಪೊದೆಗಳು, ಗಿಡಗಳು ಸುಟ್ಟಿವೆ.

ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ. ಬೆಟ್ಟದಲ್ಲಿ ಉದ್ದಕ್ಕೂ ಬೆಂಕಿ ವ್ಯಾಪ್ತಿಸಿದೆ. ಘಾಟಿ ಮಾರ್ಗದಲ್ಲಿ ಸಾಗುವ ವಾಹನಗಳವರು ಬೆಂಕಿ ನೋಡಿದ್ದಾರೆ.

ಚಾರ್ಮಾಡಿ ಭಾಗದಲ್ಲಿ ಬೆಂಕಿ, ಹೊಗೆ ಆವರಿಸಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.

ADVERTISEMENT

ಚಾರ್ಮಾಡಿ ಘಾಟಿ ಮಾರ್ಗದ (ಅಣ್ಣಪ್ಪಸ್ವಾಮಿ ದೇಗುಲದಿಂದ ಬೆಳ್ತಂಗಡಿ ಕಡೆಗೆ ಸುಮಾರು ಮೂರು ಕಿ.ಮೀ ಮುಂದೆ) ಕಾಡುಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಎಂದು ಪ್ರತ್ಯಕ್ಷ ದರ್ಶಿ ಬಿ.ಎಸ್‌.ದೇಸಾಯಿ ತಿಳಿಸಿದರು.

‘ಚಾರ್ಮಾಡಿ ಘಾಟಿ ಮಾರ್ಗದಲ್ಲಿ ಬೆಳ್ತಂಗಡಿ ಮತ್ತು ಮೂಡಿಗೆರೆ ಗಡಿ( (ಕೊಡೆಕಲ್‌, ರಾಮಲಕ್ಷ್ಮಣ ಮರ) ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ. ಸಿಬ್ಬಂದಿ ಬೆಂಕಿ ನಂದಿಸುವ ಕೆಲಸದಲ್ಲಿ ತೊಡಗಿದ್ದಾರೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಜೇಶ್‌ ನಾಯಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.