ADVERTISEMENT

ನರಸಿಂಹರಾಜಪುರ ಪಿಸಿಎಆರ್‌ಡಿ ಬ್ಯಾಂಕ್‌: ಅಧ್ಯಕ್ಷರಾಗಿ ನಿಲುವಾನಿ ರಂಗನಾಥ್

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 7:57 IST
Last Updated 19 ಮಾರ್ಚ್ 2023, 7:57 IST
ನರಸಿಂಹರಾಜಪುರದ ಪಿಸಿಎಆರ್‌ಡಿ ಬ್ಯಾಂಕಿನ ನೂತನ ಅಧ್ಯಕ್ಷ ನಿಲುವಾನಿ ರಂಗನಾಥ್, ಉಪಾಧ್ಯಕ್ಷ ಎ.ಎಲ್.ಮಹೇಶ್ ಅವರನ್ನು ಅಭಿನಂದಿಸಲಾಯಿತು
ನರಸಿಂಹರಾಜಪುರದ ಪಿಸಿಎಆರ್‌ಡಿ ಬ್ಯಾಂಕಿನ ನೂತನ ಅಧ್ಯಕ್ಷ ನಿಲುವಾನಿ ರಂಗನಾಥ್, ಉಪಾಧ್ಯಕ್ಷ ಎ.ಎಲ್.ಮಹೇಶ್ ಅವರನ್ನು ಅಭಿನಂದಿಸಲಾಯಿತು   

ನರಸಿಂಹರಾಜಪುರ: ಇಲ್ಲಿನ ಪಿಸಿಎಆರ್‌ಡಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ನಿಲುವಾನಿ ರಂಗನಾಥ್, ಉಪಾಧ್ಯಕ್ಷರಾಗಿ ಅರಸಿನಗೆರೆಯ ಎ.ಎಲ್.ಮಹೇಶ್ ಅವಿರೋಧವಾಗಿ ಆಯ್ಕೆಯಾದರು.

ಬ್ಯಾಂಕಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದ ಜಿ.ವಿ.ಸಂದೇಶ್ ಹಾಗೂ ಉಪಾಧ್ಯಕ್ಷರಾಗಿದ್ದ ವಿ.ಕೆ.ಸನ್ನಿ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಬ್ಯಾಂಕಿನ ಸಭಾಂಗಣದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರೇ ನಾಮಪತ್ರಸಲ್ಲಿಸಿದ್ದರಿಂದ ತರೀಕೆರೆಯ ಸಹಕಾರ ಸಂಘಗಳ ಸಹಾಯಕ ನಿಬಂಧಕ ಹರೀಶ್ ಅವರು ಅಧ್ಯಕ್ಷ–ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.

ADVERTISEMENT

ನೂತನ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಎಚ್.ಎಂ.ಅರುಣ್ ಕುಮಾರ್, ರೈತ ಸ್ನೇಹಿಯಾಗಿ, ಎಲ್ಲಾ ನಿರ್ದೇಶಕರ ಸಲಹೆ ಪಡೆದು ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಬ್ಯಾಂಕಿನ ನೂತನ ಅಧ್ಯಕ್ಷ ನಿಲುವಾನಿ ರಂಗನಾಥ್ ಮಾತನಾಡಿ, ಕಳೆದ ಸಾಲಿನಲ್ಲಿ ಬ್ಯಾಂಕ್ ಸಾಲ ವಸೂಲಾತಿಯಲ್ಲಿ ಜಿಲ್ಲೆಯಲ್ಲಿ ಮೊದಲ ಸ್ಥಾನ ಹಾಗೂ ರಾಜ್ಯದಲ್ಲಿ ಹತ್ತನೇ ಸ್ಥಾನದಲ್ಲಿದೆ. ಈ ಅವಧಿಯಲ್ಲೂ ಉತ್ತಮ ಕಾರ್ಯಮಾಡಿ ಬ್ಯಾಂಕಿಗೆ ಉತ್ತಮ ಹೆಸರು ತರಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು ಎಂದರು.

ಬಿಜೆಪಿ ಮುಖಂಡರಾದ ಕೆ.ಪಿ. ಸಂಪತ್ ಕುಮಾರ್, ಬಿ.ಎಸ್. ಆಶೀಶ್ ಕುಮಾರ್, ಜಯಶ್ರೀಮೋಹನ್, ಜಿ.ವಿ. ಸಂದೇಶ್, ವಿ.ಕೆ. ಸನ್ನಿ, ವೈ.ಎಸ್. ರವಿ, ಅಶ್ವನ್, ಸುಬ್ರಹ್ಮಣ್ಯ, ಬೆಮ್ಮನೆ ಮೋಹನ್, ಕೆಸವಿ ಮಂಜುನಾಥ್, ಗೋಪಾಲ್, ನಿಲೇಶ್, ವಿಜಯ ಕುಮಾರ್, ಕೆ.ಟಿ.ಮಂಜುನಾಥ್, ನಾಗೇಶ್, ಜಯಪಾಲ್, ರಮೇಶ್, ಮಂಜುನಾಥ್ ಲಾಡ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.