ಚಿಕ್ಕಮಗಳೂರು: ಜಿಲ್ಲೆಯ ಐದೂ ಕ್ಷೇತ್ರಗಳ ಮತಯಂತ್ರಗಳನ್ನು ಐಡಿಎಸ್‌ಜಿ ಕಾಲೇಜಿನಲ್ಲಿ ಭದ್ರತಾ ಕೊಠಡಿಗಳಲ್ಲಿ ಇಟ್ಟು, ಕೊಠಡಿಗಳನ್ನು ಸೀಲ್ ಮಾಡಲಾಗಿದೆ.
ಐಡಿಎಸ್‌ಜಿ ಕಾಲೇಜಿನಲ್ಲಿ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಸಿ.ಸಿ. ಟಿವಿ ಕ್ಯಾಮೆರಾ ಕಣ್ಗಾವಲು ನಿಗಾ ಇದೆ.
ಇದೇ 13ರಂದು ಐಡಿಎಸ್‌ಜಿ ಕಾಲೇಜಿಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಎಲ್ಲರ ಚಿತ್ತ ಮತ ಎಣಿಕೆ ದಿನದತ್ತ ನೆಟ್ಟಿದೆ.
ಜಿಲ್ಲೆಯಲ್ಲಿ 9.73 ಲಕ್ಷ ಮತದಾರರ ಪೈಕಿ 7.62 ಲಕ್ಷ (ಶೇ 78.30) ಮತದಾರರು ಮತದಾನ ಮಾಡಿದ್ದಾರೆ. ಕಳೆದ ಬಾರಿ 2018ರ ವಿಧಾನಸಭಾ ಚುನಾವಣೆಯಲ್ಲಿ 9.37 ಲಕ್ಷ ಮತದಾರರ ಪೈಕಿ 7.32 ಲಕ್ಷ (ಶೇ 78.15) ಮತದಾರರು ಮತದಾನ ಮಾಡಿದ್ದರು. ಈ ಬಾರಿ ಮತದಾನ ಪ್ರಮಾಣ ಶೇ 0.15 ಹೆಚ್ಚಳವಾಗಿದೆ.
ಕಳೆದ ಬಾರಿ 2018ರ ಚುನಾವಣೆಯಲ್ಲಿ ಪುರುಷರು 3.62 ಲಕ್ಷ (ಶೇ 79.07) ಹಾಗೂ ಮಹಿಳೆಯರು 3.70 ಲಕ್ಷ (ಶೇ 77.25) ಮತದಾನ ಮಾಡಿದ್ದರು. ಕಳೆದ ಬಾರಿಗಿಂತ ಈ ಬಾರಿ ಮತದಾನ ಪ್ರಮಾಣ ಪುರುಷರು ಶೇ 0.29 ಹಾಗೂ ಮಹಿಳೆಯರು ಶೇ 0.02 ಹೆಚ್ಚಳವಾಗಿದೆ.
ಸೋಲು–ಗೆಲುವಿನ ಲೆಕ್ಕಾಚಾರ: ಬಹುತೇಕ ಎಲ್ಲ ಕಡೆ ಈಗ ಸೋಲುಗೆಲುವಿನ ಲೆಕ್ಕಾಚಾರದ ಮಾತುಗಳು ಜೋರಾಗಿವೆ.
ಹಿಂದಿನ ಚುನಾವಣೆಗಳಲ್ಲಿ ಪಡೆದಿದ್ದ ಮತಗಳು, ಈ ಬಾರಿ ಕ್ಷೇತ್ರದಲ್ಲಿನ ಚುನಾವಣೆ ವಿದ್ಯಮಾನಗಳು ಮೊದಲಾದವುಗಳನ್ನು ಆಧರಿಸಿ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಪಕ್ಷಗಳವರು ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶ ಮೊದಲಾದವನ್ನು ಪರಿಗಣಿಸಿ ಇಷ್ಟು ಮತಗಳ ಮುನ್ನಡೆ, ಹಿನ್ನಡೆ ಆಗಬಹುದು ಎಂಬ ಲೆಕ್ಕದಲ್ಲಿ ತೊಡಗಿದ್ದಾರೆ.
ಪ್ರಚಾರ, ಮತಯಾಚನೆ ನಿಟ್ಟಿನಲ್ಲಿ ಒಂದು ತಿಂಗಳಿನಿಂದ ಬೆವರಿಳಿಸಿದ ಅಭ್ಯರ್ಥಿಗಳು, ಮುಖಂಡರು, ಕಾರ್ಯಕರ್ತರು ಗುರುವಾರ ರಿಲ್ಯಾಕ್ಸ್ ಮೂಡ್‌ನಲ್ಲಿ ಇದ್ದದ್ದು ಕಂಡುಬಂತು.
Quote - ಮತಗಟ್ಟೆಗಳಿಂದ ಬಂದ ದಾಖಲೆಗಳನ್ನು ರಾಜಕೀಯ ಪಕ್ಷಗಳ ಮುಖಂಡರು ಚುನಾವಣಾ ವೀಕ್ಷಕರ ಸಮಕ್ಷಮದಲ್ಲಿ ಪರಿಶೀಲನೆ ಮಾಡಲಾಗಿದೆ. ಎಲ್ಲ ಮತಯಂತ್ರಗಳನ್ನು ಭದ್ರತಾ ಕೊಠಡಿಗಳಲ್ಲಿ ಇಟ್ಟು ಕೊಠಡಿಗಳನ್ನು ಸೀಲ್ ಮಾಡಲಾಗಿದೆ. ಕೆ.ಎನ್.ರಮೇಶ್ ಜಿಲ್ಲಾ ಚುನಾವಣಾಧಿಕಾರಿ
Cut-off box - ಪಟ್ಟಿ ಕ್ಷೇತ್ರವಾರು ಮತದಾನ ಪ್ರಮಾಣ ಅಂಕಿ–ಅಂಶ ಕ್ಷೇತ್ರ;ಪುರುಷ;ಶೇ;ಮಹಿಳೆ;ಶೇ; ತೃತೀಯ ಲಿಂಗಿ; ಶೇ; ಒಟ್ಟು; ಶೇಕಡಾವಾರು ಶೃಂಗೇರಿ; 69350;82.93;70684;81.35;1;100;140035;82.13 ಮೂಡಿಗೆರೆ;66379;78.93;66691;75.87;2;33.33;133072;77.37 ಚಿಕ್ಕಮಗಳೂರ;83944;73.61;84368;72.39;5;23.81;168317;72.99 ತರೀಕೆರೆ;77746;80.87;75919;77.86;1;100;153666;79.35 ಕಡೂರು;84677;81.75;82293;79.97;3;50;166973;80.86 ಒಟ್ಟು;38209679.36379955;77.27;12;34.29;762063;78.30
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.