ADVERTISEMENT

‘ಮತದಾನಕ್ಕಾಗಿ ಮಾತ್ರ ಭಾಗವಹಿಸುವಿಕೆ ಸಲ್ಲದು’

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2022, 4:19 IST
Last Updated 17 ನವೆಂಬರ್ 2022, 4:19 IST
ಬಾಳೆಹೊನ್ನೂರಿನಲ್ಲಿ ಸಹಕಾರ ಸಪ್ತಾಹವನ್ನು ಕರ್ನಾಟಕ ಮಹಿಳಾ ಸಹಕಾರ ಬ್ಯಾಂಕ್ ಅಧ್ಯಕ್ಷೆ ಬಿ.ಸಿ.ಗೀತಾ ಉದ್ಘಾಟಿಸಿದರು
ಬಾಳೆಹೊನ್ನೂರಿನಲ್ಲಿ ಸಹಕಾರ ಸಪ್ತಾಹವನ್ನು ಕರ್ನಾಟಕ ಮಹಿಳಾ ಸಹಕಾರ ಬ್ಯಾಂಕ್ ಅಧ್ಯಕ್ಷೆ ಬಿ.ಸಿ.ಗೀತಾ ಉದ್ಘಾಟಿಸಿದರು   

ಬಾಳೆಹೊನ್ನೂರು: ಮತದಾನದ ಉದ್ದೇಶದಿಂದ ಮಾತ್ರ ಸಹಕಾರಿ ಸಭೆಗಳಲ್ಲಿ ಭಾಗವಹಿಸಿದರೆ, ವ್ಯವಸ್ಥೆ ದುರ್ಬಲಗೊಳ್ಳುತ್ತದೆ ಎಂದು ರಾಜ್ಯ ಅಡಿಕೆ ಸಹಕಾರ ಸಂಘಗಳ ಮಹಾಮಂಡಳಿ ಅಧ್ಯಕ್ಷ ವೈ.ಎಸ್.ಸುಬ್ರಹ್ಮಣ್ಯ ಹೇಳಿದರು.

ಬಾಳೆಹೊನ್ನೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ವಿವಿಧ ಸಹಕಾರ ಯೂನಿಯನ್, ಸಹಕಾರ ಮಹಾಮಂಡಳ ಸಹಯೋಗದಲ್ಲಿ ಆಯೋಜಿಸಿದ್ದ ಸಹಕಾರ ಸಪ್ತಾಹದಲ್ಲಿ ಅವರು ಮಾತನಾಡಿದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಗೃಹ, ವಾಹನ ಸಾಲ ನೀಡುವ ಮೂಲಕ ಸಹಕಾರ ಕ್ಷೇತ್ರ ಬದಲಾವಣೆಯೊಂದಿಗೆ ದಾಪುಗಾಲು ಇಡುತ್ತಿದೆ ಎಂದರು.

ADVERTISEMENT

ಬಾಳೆಹೊನ್ನೂರು ಸಂಘದ ಅಧ್ಯಕ್ಷ ಟಿ.ಎಂ.ಉಮೇಶ್ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಆದ್ಯತೆ ಮೇಲೆ ಸಾಲ ನೀಡಲಾಗುತ್ತಿದೆ. ರೈತರಿಗೆ ಅಡಿಕೆ ಸುಲಿಯುವ ಯಂತ್ರದ ಖರೀದಿಗೆ ನಮ್ಮ ಸಂಘದಲ್ಲಿ ಸಾಲ ನೀಡಲಾಗುತ್ತಿದೆ ಎಂದರು.

ಹಿರಿಯ ಪಿಗ್ಮಿ ಸಂಗ್ರಾಹಕ ಯಜ್ಞಪುರುಷಭಟ್ ಅವರನ್ನು ಗೌರವಿಸಲಾಯಿತು. ಕರ್ನಾಟಕ ಮಹಿಳಾ ಸಹಕಾರ ಬ್ಯಾಂಕ್ ಅಧ್ಯಕ್ಷೆ ಬಿ.ಸಿ.ಗೀತಾ, ಲ್ಯಾಂಪ್ಸ್ ಸಹಕಾರ ಮಹಾಮಂಡಳಿ ಅಧ್ಯಕ್ಷ ಬಿ.ಎನ್.ಮುತ್ತಪ್ಪ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಿ.ಎಸ್.ಮಹಾಬಲ, ಸಹಕಾರ ಮಹಾಮಂಡಳಿ ನಿರ್ದೇಶಕ ಎಚ್.ಕೆ.ದಿನೇಶ್, ಕೆ.ಟಿ.ವೆಂಕಟೇಶ್, ಎಚ್.ಎಸ್.ಇನೇಶ್, ಎಂ.ಎಸ್.ಪ್ರವೀಣ್, ಕೆ.ಆರ್.ರಾಘವೇಂದ್ರ, ಸುಧಾ ಎಸ್ ಪೈ, ಸುರೇಂದ್ರ, ಸಂದೀಪ್ ಕುಮಾರ್, ಎಂ.ಸಿ ಚಂದ್ರಶೇಖರ್, ಚೈತನ್ಯ ವೆಂಕಿ, ಕೆ.ಟಿ.ಗೋವಿಂದೇಗೌಡ, ಹಿರಿಯಣ್ಣ, ಸಿಇಒ ಎಚ್‌.ಉಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.