ADVERTISEMENT

‘ಪ್ರಜೆಗಳು ಪ್ರಾಮಾಣಿಕರಾದರೆ ಕಲ್ಯಾಣ ರಾಜ್ಯ’

ಮೋಟಮ್ಮ ಆತ್ಮಕಥನ ‘ಬಿದಿರು ನೀನ್ಯಾರಿಗಲ್ಲದವಳು’ ಕೃತಿ ಅವಲೋಕನ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 4:59 IST
Last Updated 5 ಜುಲೈ 2022, 4:59 IST
ಮೂಡಿಗೆರೆ ರೈತಭವನದಲ್ಲಿ ನಡೆದ ಮೋಟಮ್ಮ ಅವರ ಆತ್ಮಕಥನ ಅವಲೋಕನವನ್ನು ಮಾಜಿ ಸಚಿವ ಡಿ.ಬಿ.ಚಂದ್ರೇಗೌಡ ಉದ್ಘಾಟಿಸಿದರು. ಮಾಜಿ ಸಭಾಪತಿ ಬಿ.ಎಲ್. ಶಂಕರ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಎಂ.ಕೆ. ಪ್ರಾಣೇಶ್, ಪತ್ರಕರ್ತ ಬಿ.ಎಂ.ಹನೀಫ್, ಬಿ.ಕೆ. ಹರಿಪ್ರಸಾದ್, ಬಿ.ಎಸ್. ಜಯರಾಂ, ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮೋಟಮ್ಮ, ಗಿರಿಜಾಶಂಕರ್, ಬಿ.ಬಿ. ನಿಂಗಯ್ಯ ಇದ್ದರು.
ಮೂಡಿಗೆರೆ ರೈತಭವನದಲ್ಲಿ ನಡೆದ ಮೋಟಮ್ಮ ಅವರ ಆತ್ಮಕಥನ ಅವಲೋಕನವನ್ನು ಮಾಜಿ ಸಚಿವ ಡಿ.ಬಿ.ಚಂದ್ರೇಗೌಡ ಉದ್ಘಾಟಿಸಿದರು. ಮಾಜಿ ಸಭಾಪತಿ ಬಿ.ಎಲ್. ಶಂಕರ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಎಂ.ಕೆ. ಪ್ರಾಣೇಶ್, ಪತ್ರಕರ್ತ ಬಿ.ಎಂ.ಹನೀಫ್, ಬಿ.ಕೆ. ಹರಿಪ್ರಸಾದ್, ಬಿ.ಎಸ್. ಜಯರಾಂ, ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮೋಟಮ್ಮ, ಗಿರಿಜಾಶಂಕರ್, ಬಿ.ಬಿ. ನಿಂಗಯ್ಯ ಇದ್ದರು.   

ಮೂಡಿಗೆರೆ: ‘ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಪ್ರಾಮಾಣಿಕರಾಗಿ ಪ್ರತಿನಿಧಿಗಳನ್ನು ಆರಿಸಿದಾಗ ಮಾತ್ರ ಕಲ್ಯಾಣ ರಾಜ್ಯದ ನಿರ್ಮಾಣದ ಸಾಧ್ಯ’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. .

ಪಟ್ಟಣದ ರೈತ ಭವನದಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ ನಾಯಕಿ ಮೋಟಮ್ಮ ಅವರ ಆತ್ಮಕಥನ ‘ಬಿದಿರು ನೀನ್ಯಾರಿಗಲ್ಲದವಳು’ ಕೃತಿಯ ಅವಲೋಕನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ‘ಶುದ್ಧ ರಾಜಕಾರಣ ನಡೆಸಿರುವ ರಾಜಕಾರಣಿಗಳಲ್ಲಿ ಮೋಟಮ್ಮ ಒಬ್ಬರು. ದುರ್ಬಲ ವರ್ಗಗಳ ಜೀವನ ಸುಧಾರಣೆಗೆ ಶ್ರಮಿಸಿದ್ದಾರೆ. ಸ್ತ್ರೀ ಶಕ್ತಿ ಸಂಘಗಳನ್ನು ಹುಟ್ಟು ಹಾಕುವ ಮೂಲಕ ಮಹಿಳೆಯರ ಏಳಿಗೆಗಾಗಿ ದುಡಿದು, ಸ್ತ್ರೀ ಕುಲಕ್ಕೆ ಗೌರವ ತಂದು ಕೊಟ್ಟಿದ್ದಾರೆ. ಮೋಟಮ್ಮ ಅವರು ರಾಜಕೀಯ ನಿವೃತ್ತಿ ಹೊಂದದೇ ಜನರ ಸೇವೆಯನ್ನು ಮುಂದುವರಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ‘ರಾಜಕಾರಣದಲ್ಲಿ ಜಾತಿ ಭೇದ ಮಾಡಿಲ್ಲ. ಆದರೂ ತನ್ನ ವಿರುದ್ಧ ಅಪಪ್ರಚಾರವಾಗಿದೆ. ಅವುಗಳಿಗೆ ಕಾರಣ ಇಂದಿಗೂ ತಿಳಿಯಲು ಸಾಧ್ಯವಾಗಿಲ್ಲ. ಸ್ವಚ್ಛ ರಾಜಕಾರಣಿಯಾಗಿದ್ದೇನೆಂಬ ತೃಪ್ತಿ ನನಗಿದೆ’ ಎಂದರು.

ಮಾಜಿ ಸಚಿವ ಡಿ.ಬಿ.ಚಂದ್ರೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಕೃತಿಯ ಕುರಿತು ಪತ್ರಕರ್ತ ಬಿ.ಎಂ. ಹನೀಫ್ ಮಾತನಾಡಿದರು. ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಂ, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಎಸ್.ಎಲ್. ಭೋಜೇಗೌಡ, ಐವನ್ ಡಿಸೋಜಾ, ಶಾಸಕ ಎಂ.ಪಿ. ಕುಮಾರಸ್ವಾಮಿ, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಗಾಯಿತ್ರಿ ಶಾಂತೇಗೌಡ, ಎ.ಎನ್. ಮಹೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.