ADVERTISEMENT

ಶಾಸಕರ ವಜಾಕ್ಕೆ ಕಾಂಗ್ರೆಸ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 1:44 IST
Last Updated 23 ಸೆಪ್ಟೆಂಬರ್ 2020, 1:44 IST
ದುರ್ವರ್ತನೆ ತೋರಿದ ಕಡೂರು ಶಾಸಕರನ್ನು ವಿಧಾನಸಭೆ ಸದಸ್ಯತ್ವದಿಂದ ವಜಾ ಮಾಡಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ದುರ್ವರ್ತನೆ ತೋರಿದ ಕಡೂರು ಶಾಸಕರನ್ನು ವಿಧಾನಸಭೆ ಸದಸ್ಯತ್ವದಿಂದ ವಜಾ ಮಾಡಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರಕ್ಕೆ ಮನವಿ ಸಲ್ಲಿಸಿದರು.   

ಕಡೂರು: ವಿಧಾನಸೌಧದಂತಹ ಪವಿತ್ರ ತಾಣದಲ್ಲಿ ಪರಸ್ಪರ ಬಡಿದಾಡಿಕೊಂಡ ಆಕ್ರಮಣಕಾರಿ ಪ್ರವೃತ್ತಿಯ ಸಚಿವ- ಶಾಸಕರನ್ನು ರಾಜ್ಯಪಾಲರು ಕೂಡಲೇ ವಜಾ ಮಾಡಬೇಕು ಎಂದು ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್ ಆಗ್ರಹಿಸಿದರು.

ಕಡೂರು-ಬೀರೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಡೂರಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿ ಭಟನೆಯಲ್ಲಿ ಅವರು ಮಾತನಾಡಿದರು.

‘ವಿಧಾನಸಭೆಯ ಅಧಿವೇಶನದಲ್ಲಿ ಶಾಸಕರಿಗೆ ಪ್ರಸ್ತಾಪಿಸಲು ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳಿವೆ. ಬರಪೀಡಿತ ಪ್ರದೇಶಕ್ಕೆ ಉಪಯೋಗಕಾರಿಯಾಗು ವಂತಹ ವಿಷಯಗಳ ಬಗ್ಗೆ ಚರ್ಚೆ ನಡೆಸುವುದು ಬಿಟ್ಟು ವರ್ಗಾವಣೆ ಯಂತಹ ವಿಚಾರದಲ್ಲಿ ಸಚಿವರ ಬಳಿ ವಾಗ್ವಾದ ನಡೆಸಿ, ಹಲ್ಲೆಗೂ ಮುಂದಾ ಗುವ ಶಾಸಕರ ಮನಸ್ಥಿತಿ ಕಡೂರಿಗೆ ಕಪ್ಪುಚುಕ್ಕೆಯಾಗಿದೆ’ ಎಂದರು.

ADVERTISEMENT

‘ಕಡೂರಿನಲ್ಲಿ ಕೆ.ಎಂ. ಕೃಷ್ಣಮೂರ್ತಿ, ವೈ.ಸಿ.ವಿಶ್ವನಾಥ್, ವೈ.ಎಸ್.ವಿ.ದತ್ತ ಅವರಂತಹ ಶಾಸಕರು ಒಂದು ಘನತೆ ತಂದು ಕೊಟ್ಟವರು. ರಾಜ್ಯದಜನತೆ ಗಮನಿಸುತ್ತಿದ್ದಾರೆಂಬ ಪರಿವೆಯೂ ಇಲ್ಲದೆ ದುರ್ವತನೆ ತೋರಿದ ಸಚಿವರು ಮತ್ತು ಶಾಸಕರನ್ನು ವಿಧಾನಸಭೆ ಸದಸ್ಯತ್ವದಿಂದ ವಜಾ ಮಾಡಬೇಕು. ಇಡೀ ಘಟನೆಯನ್ನು ತನಿಖೆಗೆ ಒಳಪಡಿಸಬೇಕು’ ಎಂದು ಆಗ್ರಹಿಸಿದರು.

ಈ ಕುರಿತು ಮನವಿಯನ್ನು ಶಿರಸ್ತೇದಾರ ಶಾಮಾನಾಯ್ಕ ಅವರಿಗೆ ಸಲ್ಲಿಸಲಾಯಿತು. ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಪಂಚನಹಳ್ಳಿ ಪ್ರಸನ್ನ, ಕಡೂರು- ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ.ಬಾಸೂರು ಚಂದ್ರಮೌಳಿ, ಆಸಂದಿ ಕಲ್ಲೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಶರತ್ ಕೃಷ್ಣಮೂರ್ತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪ್ರೇಮಾಬಾಯಿ ಕೃಷ್ಣಮೂರ್ತಿ, ಸದಸ್ಯ ಚಂದ್ರಪ್ಪ, ಜಿಮ್ ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.