ADVERTISEMENT

ಬ್ರಾಹ್ಮೀ ಅಲಂಕಾರದಲ್ಲಿ ಕಂಗೊಳಿಸಿದ ಶೃಂಗೇರಿ ಶಾರದಾಂಬೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 1:58 IST
Last Updated 19 ಅಕ್ಟೋಬರ್ 2020, 1:58 IST
 ಭಾನುವಾರ ಶರನ್ನವರಾತ್ರಿಯಲ್ಲಿ  ಬ್ರಾಹ್ಮೀ ಅಲಂಕಾರದಲ್ಲಿ ಕಂಗೊಳಿಸಿದ ಶೃಂಗೇರಿ ಶಾರದೆ.
 ಭಾನುವಾರ ಶರನ್ನವರಾತ್ರಿಯಲ್ಲಿ  ಬ್ರಾಹ್ಮೀ ಅಲಂಕಾರದಲ್ಲಿ ಕಂಗೊಳಿಸಿದ ಶೃಂಗೇರಿ ಶಾರದೆ.   

ಶೃಂಗೇರಿ: ಶೃಂಗೇರಿ ಶಾರದೆ ಭಾನುವಾರ ಬ್ರಾಹ್ಮೀ ಅಲಂಕಾರದಲ್ಲಿ ಕಂಗೊಳಿಸಿದಳು. ಶಾರದೆ ಕೈಯಲ್ಲಿ ಕಮಂಡಲು, ಅಕ್ಷರಮಾಲೆ, ಪುಸ್ತಕ, ಪಾಶ ಮತ್ತು ಚಿನ್ಮುದ್ರೆ ಧರಿಸಿ ಹಂಸವಾಹನಾರೂಢಳಾಗಿ ಬ್ರಹ್ಮನ ಪಟ್ಟದ ರಾಣಿಯಾದ ಅಲಂಕಾರದಲ್ಲಿ ಭಕ್ತರಿಗೆ ದರ್ಶನ ನೀಡಿದಳು.

ಉಭಯ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರಭಾರತಿ ಸ್ವಾಮೀಜಿ ಅವರು ಶಾರದೆಗೆ ವಿಶೇಷಪೂಜೆ ಸಲ್ಲಿಸಿದರು.

ಸರಳವಾಗಿ ನಡೆದ ದರ್ಬಾರು: ರಾತ್ರಿ ಶಾರದೆಯ ಸನ್ನಿಧಿಯಲ್ಲಿ ಸರಳವಾಗಿ ದರ್ಬಾರು ಕಾರ್ಯಕ್ರಮ ನೆರವೇರಿತು. ಮಠದ ಅಧಿಕಾರಿಗಳು, ಪುರೋಹಿತರು ಹಾಗೂ ಸಿಬ್ಬಂದಿ ಮಾತ್ರ ದರ್ಬಾರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ADVERTISEMENT

ಅಂತರವನ್ನು ಕಾಪಾಡಿಕೊಂಡು ದೇವಾಲಯದ ಒಳ ಪ್ರಾಂಗಣದಲ್ಲಿ ಮೂರು ಸುತ್ತು ರಥೋತ್ಸವ ನೆರವೇ ರಿತು. ಬಳಿಕ ಸಿಂಹಾಸನದಲ್ಲಿ ಅಸೀನ ರಾದ ಮಠದ ಕಿರಿಯ ಗುರುಗಳಾದ ವಿಧುಶೇಖರಭಾರತೀ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಶಾರದಾಂಬೆಗೆ ಮಹಾಮಂಗಳಾರತಿಯಾದ ಬಳಿಕ ನಾಲ್ಕು ವೇದಗಳ ಪಾರಾಯಣ, ಪಂಚಾಂಗ ಶ್ರವಣ, ಸರ್ವವಾದ್ಯ ಸೇವೆ ನೆರವೇರಿತು.

‘ಸರಳ ದಸರಾ’

ಬೀರೂರು: ಇಲ್ಲಿನ ಸರಸ್ವತೀಪುರಂ ಬಡಾವಣೆಯ ಮೈಲಾರಲಿಂಗ ಸ್ವಾಮಿಯವರ ದಸರಾ ಮಹೋತ್ಸವ ವನ್ನು ಸರಳವಾಗಿ ಆಚರಿಸಲು ನಿರ್ಧರಿಸ ಲಾಗಿದೆ’ ಎಂದು ದೇವಾಲಯ ವಿಶ್ವಸ್ಥ ಸಮಿತಿಯ ಎಂ.ಪಿ.ವಿಶ್ವೇಶ್ವರಾಚಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದಸರಾ ಸಂದರ್ಭದಲ್ಲಿ ನಡೆಯುವ ಕಾರಣಿಕ ಮಹೋತ್ಸವ ವೀಕ್ಷಿಸಲು ರಾಜ್ಯದ ನಾನಾ ಕಡೆಗಳಿಂದ ಸಾವಿ ರಾರು ಜನ ಬರುತ್ತಿದ್ದರು. ಆದರೆ, ಈ ಬಾರಿ ನಾಡು ಮಳೆ ಅನಾಹುತ, ರೈತ ಸಂಕಷ್ಟಗಳ ಜತೆಗೆ ಕೋವಿಡ್-19ನಿಂದಲೂ ನಲುಗಿದೆ. ಇಂತಹ ಸನ್ನಿವೇಶದಲ್ಲಿ ಮೈಲಾರಲಿಂಗ ಸ್ವಾಮಿಯವರ ಮೆರವಣಿಗೆ, ಗಾಳಿಹಳ್ಳಿ ಬಳಿ ಪಾದಕ್ಕೆ ತೆರಳಿ ಸಾಮೂಹಿಕ ಪೂಜೆ ಸಲ್ಲಿಕೆ, ಬನ್ನಿ ಮುಡಿಯಲು ಮಹಾನವಮಿ ಬಯಲಿನವರೆಗೆ ತೆರಳುವ ಸಮಯದಲ್ಲಿ ನಿಗದಿತ ಸಂಖ್ಯೆಯಲ್ಲಿ ಭಕ್ತರು ದೇವರನ್ನು ಹೊತ್ತು ಸಾಗಲು ಸೂಚಿಸಲಾಗಿದೆ. ಮಹಾನವಮಿ ಬಯಲಿನಲ್ಲಿ ಸಂಪ್ರದಾಯದಂತೆ ಕಾರಣಿಕ ಮಹೋತ್ಸವ ವಿಜಯದಶಮಿಯ ರಾತ್ರಿ ಜರುಗಲಿದ್ದು, ಅಲ್ಲಿ ಕೂಡಾ ಜನರು ಸ್ವಯಂ ನಿರ್ಬಂಧ ಅನುಸರಿಸಬೇಕು’ ಎಂದು ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.