ADVERTISEMENT

ಚಿಕ್ಕಮಗಳೂರು: ಪೌರಕಾರ್ಮಿಕರ ಕಾಲು ತೊಳೆದು ಸನ್ಮಾನ

ಪೌರಕಾರ್ಮಿಕ ಕುಟುಂಬದವರ ಜೊತೆ ದೀಪಾವಳಿ ಆಚರಣೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2022, 4:27 IST
Last Updated 26 ಅಕ್ಟೋಬರ್ 2022, 4:27 IST
ಶಾಸಕ ಸಿ.ಟಿ.ರವಿ ಅವರ ಪೌರಕಾರ್ಮಿಕ ಮಹಿಳೆಯ ಪಾದ ತೊಳೆದರು.
ಶಾಸಕ ಸಿ.ಟಿ.ರವಿ ಅವರ ಪೌರಕಾರ್ಮಿಕ ಮಹಿಳೆಯ ಪಾದ ತೊಳೆದರು.   

ಚಿಕ್ಕಮಗಳೂರು: ನಗರಸಭೆ ಮತ್ತು ಪೌರಕಾರ್ಮಿಕರ ಸಂಘದ ವತಿಯಿಂದ ಏರ್ಪಡಿಸಿದ್ದ ಪೌರಕಾರ್ಮಿಕರ ಕುಟುಂಬದ ಜೊತೆಗೆ ದೀಪಾವಳಿ ಆಚರಣೆಯಲ್ಲಿ ಶಾಸಕ ಸಿ.ಟಿ. ರವಿ ಪಾಲ್ಗೊಂಡರು. ಪೌರಕಾರ್ಮಿಕರ ಕಾಲು ತೊಳೆದು ಸನ್ಮಾನಿಸಿದರು.

ನಗರದ ಪೆನ್‌ಷನ್‌ ಮೊಹಲ್ಲಾದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರವಿ ಅವರು ಪೌರ ಕಾರ್ಮಿಕರ ಕಾಲಿಗೆ ಎರಗಿ ನಮಸ್ಕರಿಸಿದರು. ಶಾಲು ಹೊದಿಸಿ ಸನ್ಮಾನಿಸಿದರು.

ಶಾಸಕ ರವಿ ಮಾತನಾಡಿ, ‘ಪ್ರಧಾನಿ ಮೋದಿ ಅವರು ಗಡಿಯಲ್ಲಿ ಯೋಧರ ಜೊತೆ ದೀಪಾವಳಿ ಆಚರಣೆಯಲ್ಲಿ ತೊಡಗಿದ್ದಾರೆ. ನಾವು ನಗರದ ಸ್ವಚ್ಛತೆ, ಜನರ ಆರೋಗ್ಯ ರಕ್ಷಣೆಗಾಗಿ ಪ್ರತಿನಿತ್ಯ ಶ್ರಮಿಸುವ ಪೌರಕಾರ್ಮಿಕ ಬಂಧುಗಳ ಜೊತೆಯಲ್ಲಿ ದೀಪಾವಳಿ ಆಚರಣೆ ಮಾಡಿದ್ದೇವೆ’ ಎಂದು ಹೇಳಿದರು.

ADVERTISEMENT

‘ಮಹಾತ್ಮ ಗಾಂಧಿ ಅವರು ರಾಮರಾಜ್ಯ ಕನಸು ಕಂಡಿದ್ದರು. ರಾಮರಾಜ್ಯ ಎಂದರೆ ರಾಮನ ಫೋಟೊ ಇಟ್ಟುಕೊಂಡು ಪೂಜಿಸುವುದಲ್ಲ, ಅವರ ಆದರ್ಶಗಳನ್ನು ಪಾಲಿಸುವುದು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಮಾತಿಗೂ ಬೆಲೆ ಇರುವಂತೆ ನಡೆದುಕೊಳ್ಳುವುದು. ಎಲ್ಲರಿಗೂ ಗೌರವ ನೀಡುವುದು’ ಎಂದರು.

ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್‌, ಉಪಾಧ್ಯಕ್ಷೆ ಉಮಾದೇವಿ ಕೃಷ್ಣಪ್ಪ, ನಗರಸಭೆ ಆಯುಕ್ತ ಬಿ.ಸಿ. ಬಸವರಾಜು, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಆಧ್ಯಕ್ಷ ಕೆ.ಪಿ. ವೆಂಕಟೇಶ್‌, ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆನಂದ್‌, ಆಶ್ರಯ ಸಮಿತಿಯ ನಾರಾಯಣಸ್ವಾಮಿ, ನಗರಸಭೆ ಸದಸ್ಯರಾದ ಶಾಬಾದ್‌, ಕವಿತಾ ಶೇಖರ್‌, ಅನುಮಧುಕರ್‌,ರೂಪಾಕುಮಾರ್‌, ಕುಮಾರ್‌, ಪೌರ ಕಾರ್ಮಿಕರ ಸಂಘದ ಅಣ್ಣಯ್ಯ, ಶ್ರೀನಿವಾಸ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.