ADVERTISEMENT

ಹೊರನಾಡಿನಲ್ಲಿ ಕಾರ್ತಿಕ ದೀಪೋತ್ಸವ: ಆರೋಗ್ಯ ಶಿಬಿರ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 13:13 IST
Last Updated 9 ನವೆಂಬರ್ 2022, 13:13 IST

ಕಳಸ: ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಡೆಯುವ ಕಾರ್ತಿಕ ದೀಪೋತ್ಸವದ ಪ್ರಯಕ್ತ ನ. 11 ಮತ್ತು 12ರಂದು ವಿವಿಧ ಆರೋಗ್ಯ ತಪಾಸಣಾ ಶಿಬಿರಗಳು ನಡೆಯಲಿವೆ.

11ರಂದು ಬೆಳಿಗ್ಗೆ 10 ಗಂಟೆಯಿಂದ ಭಕ್ತನಿವಾಸದಲ್ಲಿ ಮೈಸೂರಿನ ಡಾ.ಡಿ.ಎಸ್.ವಿದ್ಯಾಶಂಕರ್ ಮತ್ತು ತಂಡದವರು ಉಚಿತ ನೇತ್ರ ತಪಾಸಣಾ ಶಿಬಿರ ನಡೆಸಲಿದ್ದಾರೆ.

ಅಂದು ಬೆಳಿಗ್ಗೆ 10 ಗಂಟೆಗೆ ಅಂಬಾ ನಿವಾಸದಲ್ಲಿ ಶಿವಮೊಗ್ಗ ರೋಟರಿ ಕ್ಲಬ್ ಉಚಿತ ರಕ್ತದಾನ ಶಿಬಿರ ನಡೆಸುತ್ತಿದೆ. 12ರಂದು ಬೆಳಿಗ್ಗೆ 11 ಗಂಟೆಯಿಂದ ಭಕ್ತನಿವಾಸದಲ್ಲಿ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ. ನರ, ಹೃದಯ, ಮೂಳೆ, ಮಕ್ಕಳ ಆರೋಗ್ಯ, ಸ್ತ್ರೀರೋಗಕ್ಕೆ ಸಂಬಂಧಿಸಿದ ಪರೀಕ್ಷೆ , ಹೃದಯ ತಪಾಸಣೆ, ಇಸಿಜಿ, ರಕ್ತ ಪರೀಕ್ಷೆ ನಡೆಯಲಿದೆ.ತಜ್ಷ ವೈದ್ಯರ ತಂಡ ಭಾಗವಹಿಸಲಿದೆ.

ADVERTISEMENT

ಭಕ್ತರು ಈ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ದೇವಸ್ಥಾನದ ಮುಖ್ಯಸ್ಥ ಜಿ.ಭೀಮೇಶ್ವರ ಜೋಷಿ ಕೋರಿದ್ದಾರೆ.

11 ಮತ್ತು 12ರಂದು ಸಂಜೆ 7ರಿಂದ 8ರವರೆಗೆ ಬೆಂಗಳೂರು ಮತ್ತು ಪುತ್ತೂರಿನ ತಂಡಗಳು ಭರತನಾಟ್ಯ ಪ್ರದರ್ಶನ ನೀಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.