ADVERTISEMENT

ಕೊಂಬೆ ಹನನ– ವೃಕ್ಷಗಳು ಬೋಳು

ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 16:41 IST
Last Updated 5 ಅಕ್ಟೋಬರ್ 2021, 16:41 IST
ಚಿಕ್ಕಮಗಳೂರಿನ ಜಿಲ್ಲಾ ಆಸ್ಪತ್ರೆಯ ಆವರಣದ ವೃಕ್ಷಗಳ ಕೊಂಬೆಗಳನ್ನು ಕಡಿದು ವೃಕ್ಷಗಳನ್ನು ಬೊಳಾಗಿಸಿರುವುದು.
ಚಿಕ್ಕಮಗಳೂರಿನ ಜಿಲ್ಲಾ ಆಸ್ಪತ್ರೆಯ ಆವರಣದ ವೃಕ್ಷಗಳ ಕೊಂಬೆಗಳನ್ನು ಕಡಿದು ವೃಕ್ಷಗಳನ್ನು ಬೊಳಾಗಿಸಿರುವುದು.   

ಚಿಕ್ಕಮಗಳೂರು: ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿನ ವೃಕ್ಷಗಳ ರೆಂಬೆಕೊಂಬೆಗಳನ್ನು ಕಡಿದು ಬೋಳಾಗಿಸಲಾಗಿದೆ.

ಆಸ್ಪತ್ರೆಯ ಒಳರೋಗಿ ವಿಭಾಗದ ಸುತ್ತಮುತ್ತಲಿನ ಮರಗಳ ಟೊಂಗೆಗಳನ್ನು ಕಡಿಯಲಾಗಿದೆ. ಮರಗಳು ಬೋಳಾಗಿವೆ. ಆಸ್ಪತ್ರೆ ಆವರಣದ ನೆರಳು ಮರೆಯಾಗಿದೆ. ‘ಆಸ್ಪತ್ರೆ ಪ್ರವೇಶ ದ್ವಾರದಲ್ಲಿದ್ದ ಅರಳಿ ಮರದ ಟೊಂಗೆಗಳನ್ನು ಕಡಿದಿದ್ದರು. ಈಗ ಆಸ್ಪತ್ರೆ ಆವರಣದಲ್ಲಿನ ಹಲವು ಮರಗಳ ಕೊಂಬೆಗಳನ್ನು ಕಡಿದಿದ್ದಾರೆ. ಮರಗಳು ನೆರಳು, ಆಮ್ಲಜನಕ ನೀಡುತ್ತಿದ್ದವು. ‘ಅಂಗಾಂಗ’ ಕತ್ತರಿಸಿ ಹಸಿರು ಹೊದಿಕೆ ಹಾಳುಗೆಡವಿದ್ದಾರೆ’ ಪರಿಸರಾಸಕ್ತರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು. ‘ಒಳರೋಗಿ ವಿಭಾಗದ ಸುತ್ತಲಿನ ಎಂಟು ಮರಗಳ ರೆಂಬೆಗಳನ್ನು ಮಾತ್ರ ಕಡಿಯಲಾಗಿದೆ. ಮರಗಳ ಮರೆಯಲ್ಲಿ ಅನೈತಿಕ ಚಟುವಟಿಕೆಗಳ ನಡೆಯುತ್ತಿದ್ದವು. ರೋಗಿಗಳ ಸುರಕ್ಷತೆ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಆಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮೋಹನಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮರಗಳ ಕೊಂಬೆ ಪಡೆಯಲು ಅನುಮತಿ ಪಡೆದಿದ್ದಾರೆ. ಕಟ್ಟಡ ವಿಸ್ತರಣೆ, ಇತರ ಕಾರಣ ನೀಡಿದ್ದಾರೆ’ ಎಂದು ಉಪ ಅರಣ್ಯಸಂರಕ್ಷಣಾಧಿಕಾರಿ ಎನ್‌.ಇ. ಕ್ರಾಂತಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.