ADVERTISEMENT

ಕೊಪ್ಪದಲ್ಲಿ ದುರ್ಗಾದೇವಿ ಪ್ರತಿಷ್ಠಾಪನೆ: ನವರಾತ್ರಿಯ ವಿಶೇಷ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 6:33 IST
Last Updated 27 ಸೆಪ್ಟೆಂಬರ್ 2022, 6:33 IST
ಕೊಪ್ಪದ ಮಾರ್ಕೆಟ್‌ ರಸ್ತೆಯಲ್ಲಿ ಪ್ರತಿಷ್ಠಾಪಿಸಿರುವ ವಿಘ್ನೇಶ್ವರನ ಪಕ್ಕದಲ್ಲಿ ನವರಾತ್ರಿ ಮೊದಲ ದಿನ ಪ್ರತಿಷ್ಠಾಪಿಸಿದ ದುರ್ಗಾದೇವಿ ವಿಗ್ರಹ.
ಕೊಪ್ಪದ ಮಾರ್ಕೆಟ್‌ ರಸ್ತೆಯಲ್ಲಿ ಪ್ರತಿಷ್ಠಾಪಿಸಿರುವ ವಿಘ್ನೇಶ್ವರನ ಪಕ್ಕದಲ್ಲಿ ನವರಾತ್ರಿ ಮೊದಲ ದಿನ ಪ್ರತಿಷ್ಠಾಪಿಸಿದ ದುರ್ಗಾದೇವಿ ವಿಗ್ರಹ.   

ಕೊಪ್ಪ: ಫ್ರೆಂಡ್ಸ್ ಸರ್ಕಲ್ ಗೆಳೆಯರ ಬಳಗ, ಗಣೇಶ-ದುರ್ಗಾ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ಮಾರ್ಕೇಟ್ ರಸ್ತೆಯಲ್ಲಿನ ಬಲಮುರಿ ವೀರಗಣಪತಿ ದೇವಸ್ಥಾನದ ಭವನದಲ್ಲಿ ನವರಾತ್ರಿ ಆರಂಭದ ದಿನವಾದ ಸೋಮವಾರ ದುರ್ಗಾದೇವಿ ಪ್ರತಿಷ್ಠಾಪನೆ ನೆರವೇರಿಸಲಾಯಿತು.

ದುರ್ಗಾ ದೇವಿಯ ಮೂಲ ವಿಗ್ರಹಕ್ಕೆ ಕುಂಭಾಭಿಷೇಕ ನೆರವೇರಿಸಲಾಯಿತು. ಬಳಿಕ ನೂರಾರು ಮಂದಿ ಭಕ್ತರ ಸಮ್ಮುಖದಲ್ಲಿ ದೇವಿಯ ಪ್ರತಿಷ್ಠಾಪನೆ, ಪ್ರಸಾದ ವಿನಿಯೋಗ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಸಂಜೆ ಗಾನ ಶಂಕರ ಮಿತ್ರ ವೃಂದ ವತಿಯಿಂದ ‘ಜಾನಪದ ವೈಭವ’ ಆಯೋಜಿಸಲಾಗಿತ್ತು. ಫ್ರೆಂಡ್ಸ್ ಸರ್ಕಲ್ ಗೆಳೆಯರ ಬಳಗದ ಅಧ್ಯಕ್ಷ ಕೆ.ಎನ್.ಪ್ರಸನ್ನ ಶೆಟ್ಟಿ, ಸಮಿತಿ ಸದಸ್ಯರು ಇದ್ದರು.

ಗೌರಿ ಗಣೇಶ ಹಬ್ಬದಂದು 45ನೇ ವರ್ಷದಲ್ಲಿ ವಿಘ್ನೇಶ್ವರ ಪ್ರತಿಷ್ಠಾಪನೆ ಮಾಡಲಾಗಿದೆ. 36 ದಿನಗಳ ಪರ್ಯಂತ ಧಾರ್ಮಿಕ ವಿವಿಧ ಕಾರ್ಯಕ್ರಮ, ಸಾಂಸ್ಕೃತಿ ಕಾರ್ಯಕ್ರಮದ ಬಳಿಕ ಅ.5 ರಂದು ಗಣೇಶ-ದುರ್ಗಾ ರಾಜಬೀದಿ ಉತ್ಸವ ಹಾಗೂ ವಿಜೃಂಭಣೆಯ ವಿಸರ್ಜನಾ ಮಹೋತ್ಸವ ನೆರವೇರಲಿದೆ. ನವರಾತ್ರಿಯ ಪ್ರತಿನಿತ್ಯ ದೇವಿ ಪಾರಾಯಣ, ಕುಂಕುಮಾರ್ಚನೆ, ವಿಶೇಷ ಅಲಂಕಾರ ಮಾಡಲಾಗುತ್ತಿದೆ.

ADVERTISEMENT

ಇಂದಿನ ಕಾರ್ಯಕ್ರಮ: ದುರ್ಗಾದೇವಿಗೆ ಮಂಗಳವಾರ(ಸೆ.27) ಅಥರ್ವ ಶೀರ್ಷಾಭಿಷೇಕ ನಡೆಯಲಿದ್ದು, ಬ್ರಾಹ್ಮಿ ಅಲಂಕಾರ ಮಾಡಲಾಗುತ್ತಿದೆ. ಸಂಜೆ ಮಯೂರಿ ನಾಟ್ಯ ಕಲಾ ಕೇಂದ್ರ ವತಿಯಿಂದ ನೃತ್ಯ ವೈಭವ ಜರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.